ಅರಬ್ಬಿ ಸಮುದ್ರದಲ್ಲಿ ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ ರಕ್ಷಣೆ: 7 ಮೀನುಗಾರರು ಸುರಕ್ಷಿತ
ಗೋವಾದ ಕಾಣಕೋಣ ಸಮೀಪದಲ್ಲಿ ಮೀನುಗಾರಿಕಾ ಬೋಟ್ ಅವಘಡ ಸಂಭವಿಸಿದ್ದು, ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. 25 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ. ಬೋಟ್ನಲ್ಲಿದ್ದ ಎಲ್ಲ 7 ಮೀನುಗಾರರು ಸುರಕ್ಷಿತರಾಗಿದ್ದಾರೆ.
ಕಾರವಾರ, ಜನವರಿ 17: ಗೋವಾದ ಕಾಣಕೋಣ ಸಮೀಪದಲ್ಲಿ ಮೀನುಗಾರಿಕಾ ಬೋಟ್ ಅವಘಡ ಸಂಭವಿಸಿದ್ದು, ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ (boat) ಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. 25 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ ರಾಯಲ್ ಬ್ಲೂ ಹೆಸರಿನ ಬೋಟ್ ಮುಳುಗುವ ಹಂತದಲ್ಲಿದ್ದು, ಬೋಟ್ನಲ್ಲಿದ್ದ ಎಲ್ಲ 7 ಮೀನುಗಾರರು ಸುರಕ್ಷಿತರಾಗಿದ್ದಾರೆ. ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಸಹಾಯ ಮೂಲಕ 6 ಬೋಟ್‌ಗಳ ಸಹಾಯದಿಂದ ಸುರಕ್ಷಿತವಾಗಿ ಮೀನುಗಾರರು ಕಾರವಾರ ಬಂದರಿಗೆ ತಲುಪಿದ್ದಾರೆ.
ಕಚೇರಿ ಹಿಂಭಾಗದಲ್ಲಿ ಕಂಡು ಬಂದ ಬೆಂಕಿ
ಕೋಲಾರ: ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಕಸದ ರಾಶಿ ಹಾಗೂ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಧಗ ಧಗನೆ ಹೊತ್ತಿ ಉರಿದಿದೆ. ಬಿಸಿಲ ಬೇಗೆ ಮಧ್ಯೆ ಬೆಂಕಿ ಹೊತ್ತಿ ಉರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಆಕಸ್ಮಿಕ ಬೆಂಕಿ: ಆರು ಹುಲ್ಲಿನ ಬಣಿವೆ ಮತ್ತು ಒಂದು ಗುಡಿಸಲು ಸುಟ್ಟು ಭಸ್ಮ
ಬಳ್ಳಾರಿ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಆರು ಹುಲ್ಲಿನ ಬಣಿವೆ ಮತ್ತು ಒಂದು ಗುಡಿಸಲು ಸುಟ್ಟು ಭಸ್ಮವಾಗಿರುವಂತಹ ಘಟನೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ. ಸಿಂದವಾಳ ಮಲ್ಲಪ್ಪ, ಮಾರೆಮ್ಮ, ಗಾದಿಲಿಂಗಪ್ಪ, ಕರಿಮಲೆ ಕರೆಪ್ಪ, ತಿಪ್ಪಯ್ಯ, ಬಮಡಿವಾಳರ ಮೂಕಯ್ಯ, ಅಗಸರ ಗೂಳಮ್ಮ ಎಂಬುವವರಿಗೆ ಬಣವೆಗಳು ಸೇರಿದ್ದು, ಲಕ್ಷ್ಮಿ ಎನ್ನುವರ ಗುಡಿಸಲು ಸುಟ್ಟು ಭಸ್ಮವಾಗಿದೆ.
ಇದನ್ನೂ ಓದಿ: ಹಗಲು ಹೊತ್ತಲ್ಲೇ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ದರೋಡೆ; ಐವರು ಆರೋಪಿಗಳು ಅರೆಸ್ಟ್
5 ಲಕ್ಷ ರೂ. ಹೆಚ್ಚು ಮೌಲ್ಯದ ಹುಲ್ಲಿನ ಬಣಿವೆ ನಷ್ಟವಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ತಹಶಿಲ್ದಾರ ರಾಘವೇಂದ್ರ ರಾವ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುವಾಗ ಆಟೋ ಡಿಕ್ಕಿ: ಕಾನ್ಸ್‌ಟೇಬಲ್‌ಗೆ ಗಾಯ
ನೆಲಮಂಗಲ: ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುವಾಗ ಆಟೋ ಡಿಕ್ಕಿ ಹೊಡೆದ ಪರಿಣಾಮ ಕಾನ್ಸ್‌ಟೇಬಲ್‌ಗೆ ಗಾಯವಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಜಿಂದಾಲ್ ಬಳಿ ಅಪಘಾತ ಸಂಭವಿಸಿದೆ. ಆಟೋ ನಿಲ್ಲಿಸದೆ ಚಾಲಕ ಕಿರಣ್ ಪರಾರಿಯಾಗಲು ಯತ್ನಿಸಿದ್ದಾನೆ.
ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ ಭಗ್ನ ಪ್ರೇಮಿ, ಚಾಕು ಇರಿದವನಿಗೆ ಧರ್ಮದೇಟು… ಇಬ್ಬರೂ ಆಸ್ಪತ್ರೆ ಪಾಲು
ಹಿಂಬಾಲಿಸಿ ಆಟೋವನ್ನು ಹಿಡಿದಿದ್ದಕ್ಕೆ ಚಾಲಕ ಹಾಗೂ ಪತ್ನಿ ನೆಲಮಂಗಲ ಸಂಚಾರಿ ಠಾಣೆ ಕಾನ್ಸ್‌ಟೇಬಲ್ ಮಂಜುನಾಥ್ ಜೊತೆ ಗಲಾಟೆ ಮಾಡಿದ್ದಾರೆ. ರಂಪಾಟ ಮಾಡುತ್ತಿದ್ದ ಆಟೋ ಚಾಲಕ ಕಿರಣ್, ಪತ್ನಿ ಪೊಲೀಸರು ವಶಕ್ಕೆ ಪಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.