ಇಸ್ರೋ ಅಧಿಕಾರಿಯೆಂದು ನಂಬಿಸಿ ಪೊಲೀಸ್ ಅಧಿಕಾರಿಗಳಿಗೂ ಪಂಗನಾಮ; ಖತರ್ನಾಕ್ ಮಹಿಳೆಯ ಹನಿಟ್ರ್ಯಾಪ್ ಕಹಾನಿ
ಕಾಸರಗೋಡಿನಲ್ಲಿ ಆಘಾತಕಾರಿ ಹನಿ ಟ್ರ್ಯಾಪ್ ಹಗರಣವೊಂದು ಬೆಳಕಿಗೆ ಬಂದಿದೆ. ತಾನು ಐಎಎಸ್ ಅಧಿಕಾರಿ, ಇಸ್ರೋ ಅಧಿಕಾರಿ ಎಂದೆಲ್ಲ ಸುಳ್ಳು ಹೇಳಿಕೊಂಡು ಪರಿಚಯ ಮಾಡಿಕೊಂಡ ಮಹಿಳೆಯೊಬ್ಬಳು ಹನಿಟ್ರ್ಯಾಪ್ ಬಲೆ ಬೀಸಿರುವ ಘಟನೆ ನಡೆದಿದೆ. ಈ ಕುರಿತಾದ ಅಚ್ಚರಿಯ ಮಾಹಿತಿಗಳು ಇಲ್ಲಿವೆ.
ಕಾಸರಗೋಡು: ಆಘಾತಕಾರಿ ಹನಿ ಟ್ರ್ಯಾಪ್ (Honeytrap) ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರನ್ನು ಸಿಲುಕಿಸಿದ ಆರೋಪದ ಮೇಲೆ ಕಾಸರಗೋಡಿನ (Kasaragod) ಕೊಂಬನಡುಕ್ಕಂ ನಿವಾಸಿಯಾದ ಶ್ರುತಿ ಚಂದ್ರಶೇಖರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಾನು ಐಎಎಸ್ ಮತ್ತು ಇಸ್ರೋ (ISRO) ಅಧಿಕಾರಿ ಎಂದು ಹೇಳಿಕೊಂಡು ಅನೇಕರಿಗೆ ಮೋಸ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಇನ್‌ಸ್ಟಾಗ್ರಾಮ್ ಮೂಲಕ ಶ್ರುತಿಯನ್ನು ಭೇಟಿಯಾಗಿರುವ ಪೊಯಿನಾಚಿ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಆಕೆ ತನ್ನನ್ನು ಇಸ್ರೋ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು ಮತ್ತು ನಕಲಿ ದಾಖಲೆಗಳನ್ನು ಸಹ ನೀಡಿದ್ದಳು. ನಂತರ ದೂರುದಾರರಿಂದ 1 ಲಕ್ಷ ರೂ. ಹಣ ಹಾಗೂ ಒಂದು ಪವನ್ ಚಿನ್ನಾಭರಣ ದೋಚಿದ್ದಾಳೆ. ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಆಕೆ ಈ ಹಿಂದೆಯೂ ಇದೇ ರೀತಿಯ ಮೋಸದ ಚಟುವಟಿಕೆಗಳನ್ನು ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮದುವೆ ದಿನ ಬ್ಯೂಟಿ ಪಾರ್ಲರ್ಗೆ ಬಂದಿದ್ದ ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ
ಅಲ್ಲದೆ, ಆಕೆಯ ವಿರುದ್ಧ ದೂರು ನೀಡಲು ಮುಂದಾದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಸುಳ್ಳು ಆರೋಪ ಹೊರಿಸಿದ್ದಾಳೆಂದು ತಿಳಿದುಬಂದಿದೆ. ವಿಚಿತ್ರವೆಂದರೆ, ಆಕೆ ಕಾಸರಗೋಡು ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಯುವಕರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದಾಳೆ.
ಪುಲ್ಲೂರು-ಪೆರಿಯಾದ ಯುವಕ ಮಂಗಳೂರಿನಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಪಾಲಾದಾಗ ಶೃತಿ ಚಂದ್ರಶೇಖರನ್ ವಂಚನೆ ಬೆಳಕಿಗೆ ಬಂದಿತ್ತು. ಇಸ್ರೋ ಸಹಾಯಕ ಇಂಜಿನಿಯರ್ ಚಾಮಹುನ್ ಮತ್ತು ಐಎಎಸ್ ವಿದ್ಯಾರ್ಥಿ ಚಾಮಹುನ್ ಎಂಬ ಯುವಕರಿಗೆ ಸಹ ಬಲೆ ಬೀಸಿ, ಮದುವೆಯಾಗುವುದಾಗಿ ನಂಬಿಸಿದ್ದಳು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ನಾಲ್ವರು ಮಾತ್ರ ಬೇರೆ ಜೈಲಿಗೆ ಶಿಫ್ಟ್, ದರ್ಶನ್ ಇರೋದು ಎಲ್ಲಿ?
ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮತ್ತು ತ್ರಿಶೂರ್ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಕೂಡ ಶ್ರುತಿ ಚಂದ್ರಶೇಖರನ್ ಅವರಿಂದ ವಂಚನೆಗೊಳಗಾಗಿದ್ದಾರೆ. ವಂಚನೆಯ ವಿಷಯ ತಿಳಿದ ನಂತರವೂ ಮಾನಹಾನಿಯಾಗುವ ಭೀತಿಯಿಂದ ಹಲವು ಪೊಲೀಸರು ಮಾಹಿತಿ ಮುಚ್ಚಿಟ್ಟಿದ್ದರು. ಪೇರಿಯಾ ಮೂಲದ ಯುವಕನ ತಾಯಿಯ ಚಿನ್ನದ ಸರವನ್ನೂ ಈ ಮಹಿಳೆ ಕದ್ದಿದ್ದಾಳೆ. ಶೃತಿ ಚಂದ್ರಶೇಖರನ್ ಜೈಲಿನಲ್ಲಿರುವ ಯುವಕನಿಂದಲೇ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಖತರ್ನಾಕ್ ಮಹಿಳೆಯಾಗಿದ್ದಾಳೆ.
ನಕಲಿ ಗುರುತಿನ ದಾಖಲೆಗಳನ್ನು ಬಳಸಿ ವಂಚಿಸಿದ ಪ್ರಕರಣದಲ್ಲಿ ಯುವತಿಯ ವಿರುದ್ಧ ಮೇಲ್ಪರಂಪ ಪೊಲೀಸರು ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಯಿನಾಚಿಯ ಯುವಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರು ಇನ್‌ಸ್ಟಾಗ್ರಾಮ್ ಮೂಲಕ ಭೇಟಿಯಾಗಿದ್ದು, ನಂತರ ಯುವಕರಿಂದ 1 ಲಕ್ಷ ರೂಪಾಯಿ ಮತ್ತು ಒಂದು ಪವನ್ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ