ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆಸಿಕೊಂಡು ಹನಿ ಟ್ರ್ಯಾಪ್ ಮಾಡಿದ ಯುವತಿ ಅರೆಸ್ಟ್, ನಾಲ್ವರಿಗಾಗಿ ಶೋಧ

ಮೆಸೇಜ್ ಮೂಲಕ ಪರಿಚಯವಾಗಿದ್ದ ಯುವತಿ, ತನ್ನ ಮನೆಯಲ್ಲಿ ಯಾರೂ ಇಲ್ಲ ಭೇಟಿ ಮಾಡೋಣಾ ಎಂದು ಮನೆಗೆ ಕರೆದಿದ್ದಾಳೆ. ಇದನ್ನು ನಂಬಿ ಯುವತಿ ಮನೆಗೆ ಹೋದ ಯುವಕ ದಿಲೀಪ್​ನನ್ನು ನಾಲ್ವರು ಎದುರಾಗಿ ಯುವತಿಯ ಜೊತೆ ವಿಡಿಯೋ ಚಿತ್ರಿಸಿದ್ದಾರೆ.

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆಸಿಕೊಂಡು ಹನಿ ಟ್ರ್ಯಾಪ್ ಮಾಡಿದ ಯುವತಿ ಅರೆಸ್ಟ್, ನಾಲ್ವರಿಗಾಗಿ ಶೋಧ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Nov 06, 2022 | 7:27 AM

ಬೆಂಗಳೂರು: ರಾಜ್ಯದಲ್ಲಿ ಹನಿ ಟ್ರ್ಯಾಪ್(Honey Trap) ಪ್ರಕರಣಗಳು ಹೆಚ್ಚಾಗಿವೆ. ಈ ಹಿಂದೆಗಿಂತ ಈ ಬಾರಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸದ್ಯ ಈಗ ಬಿಟಿಎಂ ಲೇಔಟ್​ನಲ್ಲೂ(BTM Layout) ಒಂದು ಪ್ರಕರಣ ಕಂಡು ಬಂದಿದೆ. ದಿಲೀಪ್ ಕುಮಾರ್ ಎಂಬ ಯುವಕ ಪ್ರಿಯಾ ಎಂಬ ಹೆಸರಿ‌ನ ಯುವತಿಯ ಗಾಳಕ್ಕೆ ಬಿದ್ದು ಮೋಸ ಹೋಗಿದ್ದಾನೆ. ಅಪರಿಚಿತ ಯುವತಿಯ ಮೆಸೇಜ್ ನಂಬಿ ಹೋದ ದಿಲೀಪ್​, ಯುವತಿ ಕೊಟ್ಟ ಶಾಕ್​ಗೆ ಥಂಡಾ ಹೊಡೆದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಬಾ ಅಂದು ಯುವತಿ ದಿಲೀಪ್​ಗೆ ಮೆಸೇಜ್ ಮಾಡಿದ್ದಳು. ಹೀಗಾಗಿ ಮೆಸೇಜ್ ನೋಡಿ ಯುವತಿ ಭೇಟಿಯಾಗಲು ಹೋದವನ ವಿಡಿಯೋ ಚಿತ್ರೀಕರಿಸಿ ಯುವತಿ ಸುಲಿಗೆ ಮಾಡಿದ್ದಾಳೆ.

ಮೊದಲಿಗೆ ದಿಲೀಪ್ ಕುಮಾರ್ ಗೆ ಮೆಸೇಜ್ ಮೂಲಕ ಪರಿಚಯವಾಗಿದ್ದ ಪ್ರಿಯಾ ಅಕ್ಟೋಬರ್ 27ರಂದು ಭೇಟಿಯಾಗುವುದಾಗಿ ಒತ್ತಾಯಿಸಿ ಮನೆಗೆ ಕರೆಸಿಕೊಂಡಿದ್ದಳು. ಇದಕ್ಕೆ ಒಪ್ಪಿ ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿದ್ದ ಪ್ರಿಯಾಳ ಮನೆಗೆ ದಿಲೀಪ್ ಹೋಗಿದ್ದ. ದಿಲೀಪ್ ಮನೆ ಒಳಗೆ ಎಂಟ್ರಿಯಾಗುತ್ತಿದ್ದಂತೆ ನಾಲ್ವರು ಯುವಕರು ಮುಂದೆ ಬಂದು ಚಾಕು ತೋರಿಸಿ ಹಣ ಮೊಬೈಲ್ ಕೊಡುವಂತೆ ಬೆದರಿಸಿದ್ದರು. ಬಳಿಕ ದಿಲೀಪ್ ಕುಮಾರ್ ಪಕ್ಕ ಯುವತಿಯನ್ನ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ದಿಲೀಪ್ ಕುಮಾರ್ ತನ್ನ ಬಳಿ ಇದ್ದ 26 ಸಾವಿರ ನಗದು, ಐಫೋನ್, ಕಾರ್ ಕೀ ನೀಡಿದ್ದಾರೆ.

ಇದನ್ನೂ ಓದಿ: ಗುಂಡಿಗಳ ಮುಂದೆ ತುಳಸಿ ಪೂಜೆ: ಮಹಿಳೆಯರಿಂದ ವಿನೂತನ ಪ್ರತಿಭಟನೆ

25 ಸಾವಿರ ರೂ ಹಣವನ್ನ ಸಹೋದರನಿಂದ ಯುಪಿಐ ಮೂಲಕ ವರ್ಗಾವಣೆ ಮಾಡಿಸಿದ್ದಾರೆ. ಕಾರ್ ಬೇಕೆಂದ್ರೆ 60 ಸಾವಿರ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಇದೆಲ್ಲ ಆದ ಬಳಿಕ ದಿಲೀಪ್ ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹನಿ‌ ಟ್ರ್ಯಾಪ್ ಹಿಂದಿನ ಯುವತಿಯನ್ನ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದು ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬೆಂಗಳೂರಿನಲ್ಲಿ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಇಬ್ಬರ ಬಂಧನ

ಅಶೋಕ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಿದ್ದಾರೆ. ಸೈಮನ್ ಗ್ಯಾಬ್ರಿಯಲ್ (26), ರವಿಕುಮಾರ್(22) ಬಂಧಿತರು. ಆರೋಪಿಗಳಿಂದ 1 ಲಕ್ಷ ಮೌಲ್ಯದ 15ಗ್ರಾಂ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಸೈಮನ್ ರೌಡಿ ಅನ್ನೋದು ತನಿಖೆ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:27 am, Sun, 6 November 22

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ