ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿರುವ ದೇವಸ್ಥಾನದ ಅರ್ಚಕರ ಶಿರಚ್ಛೇದದ ಬೆದರಿಕೆ ಪತ್ರ ಶುಕ್ರವಾರ ಪತ್ತೆಯಾಗಿದ್ದು, ದೇವಾಲಯ ಮತ್ತು ಅರ್ಚಕರ ಮನೆಗೆ ಬಿಗಿ ಭದ್ರತೆಯನ್ನು ನೀಡಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭರತ್‌ಪುರ ಎಸ್‌ಪಿ ಶ್ಯಾಮ್ ಸಿಂಗ್ ಮಾತನಾಡಿ, ಕಾಲೇಜೊಂದರ ಒಳಗೆ ಇರುವ ದೇವಸ್ಥಾನದ ಈಗಿನ ಮತ್ತು ಹಿಂದಿನ ಅರ್ಚಕರ ನಡುವೆ ಕೆಲ ಸಮಯದಿಂದ ಜಗಳ ನಡೆಯುತ್ತಿತ್ತು. ಈ ಪತ್ರದ ವಿವಾದವೂ ಈ ವಿಚಾರಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ.
ದೇವಸ್ಥಾನಕ್ಕೆ ಭದ್ರತೆ ಒದಗಿಸಿದ್ದು, ಪತ್ರದ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ’ ಎಂದಿದ್ದಾರೆ. ಕಾಲೇಜಿನಲ್ಲಿ ನಿರ್ಮಿಸಿರುವ ದೇವಸ್ಥಾನದ ಅರ್ಚಕರಿಗೆ ಈ ರೀತಿ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿರುವುದು ಬಹಿರಂಗಗೊಂಡ ಬೆನ್ನಲ್ಲೇ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾಲೇಜು ಗೇಟ್‌ಗೆ ಬೀಗ ಜಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಎಬಿವಿಪಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿ ಮುಖಂಡರು, ಪೊಲೀಸರು ಈ ಪತ್ರ ಬರೆದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ಪತ್ರದಲ್ಲಿ, ಉದಯಪುರ ಘಟನೆಯನ್ನು ಉಲ್ಲೇಖಿಸಿ ಬೆದರಿಕೆ ಹಾಕಿದಾಗ ಈ ವಿಷಯವು ಇಡೀ ನಗರದಲ್ಲಿ ವೈರಲ್ ಆಗಿದೆ.
ಪೊಲೀಸರು ದೂರು ದಾಖಲಿಸಿದ ನಂತರ , ಇದೀಗ ಸ್ಥಳೀಯ ಪೊಲೀಸರ ತಂಡವು ದೇವಾಲಯದ ಮೇಲೆ ಅಂಟಿಸಲಾದ ಈ ಪತ್ರವನ್ನು ತೆಗೆದುಹಾಕುವ ಮೂಲಕ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಪಕ್ಕದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗಿದೆ, ತನಿಖೆಯ ನಂತರವೇ ಈ ವಿಷಯದಲ್ಲಿ ಬಗ್ಗೆ ತಿಳಿಸಲಾಗುವುದು ಎಂದಿದ್ದಾರೆ.
Published On - 4:30 pm, Fri, 15 July 22