Uttar Pradesh: ಮಸೀದಿಯೊಳಗೆ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ಖುರ್ಜಾ ನಗರದಲ್ಲಿನ ಮಸೀದಿಯೊಂದರಲ್ಲಿ 65 ವರ್ಷದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಲಂದ್‌ಶಹರ್: ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ಖುರ್ಜಾ ನಗರದಲ್ಲಿನ ಮಸೀದಿಯೊಂದರಲ್ಲಿ 65 ವರ್ಷದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್‌ಪೆನ್ ಪ್ರದೇಶದ ನಿವಾಸಿಯಾದ ಇದ್ರಿಸ್ ತನ್ನ ಮಕ್ಕಳೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಹತ್ಯೆಯಾದ ಮಗನ ಪ್ರಕಾರ, ದುಷ್ಕರ್ಮಿ ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಗುಂಡು ಹಾರಿಸಿದ್ದಾರೆ. ಭಯಗೊಂಡು ಇದ್ರಿಸ್ ಮಸೀದಿಯೊಳಗೆ ನುಗ್ಗಿದರೆ, ಅಲ್ಲಿ ದಾಳಿಕೋರರು ಅವರನ್ನು ಹಿಂಬಾಲಿಸಿ ಗುಂಡಿಕ್ಕಿ ಕೊಂದರು ಎಂದು ಮಗ ಪೊಲೀಸರಿಗೆ ತಿಳಿಸಿದ್ದಾನೆ.
ಇದ್ರಿಸ್ ಪುತ್ರ ನೀಡಿದ ಮಾಹಿತಿ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತೇವೆ ಎಂದು ಐಜಿ ತಿಳಿಸಿದ್ದಾರೆ. ಈ ಘಟನೆಯು ವೈಯಕ್ತಿಕ ದ್ವೇಷ ಕಾರಣದಿಂದ ಈ ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ. ಕೆಲವರ ಮೇಲೆ ಅನುಮಾನ ಪಟ್ಟು ವಿಚಾರಣೆ ನಡೆಸಲಾಗುತ್ತಿದೆ ಎಂದ ಐಜಿ, ದೂರಿನಲ್ಲಿ ಇದುವರೆಗೆ ಮೂವರ ಹೆಸರಿದೆ ಎಂದು ತಿಳಿಸಿದ್ದಾರೆ.