Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಕೆ ನರ್ಸ್ ಲೂಸಿ ಲೆಟ್ಬಿ ಶಿಶುಗಳನ್ನು ಕೊಲೆ ಮಾಡಿದ್ದೇಕೆ? ತನಿಖೆಯಲ್ಲಿ ಹೊರಬಂದ ಉದ್ದೇಶಗಳ ಪಟ್ಟಿ ಇಲ್ಲಿದೆ

ಈ ಕೊಲೆಗಳ ಹಿಂದಿನ ನಿಜಾವದ ಉದ್ದೇಶಗಳು ಇಂದಿಗೂ ಸಂಪೂರ್ಣವಾಗಿ ತಿಳಿದಿಲ್ಲ, ಆದರೆ ಪ್ರಾಸಿಕ್ಯೂಟರ್‌ಗಳು ಅವಳ 10-ತಿಂಗಳ ವಿಚಾರಣೆಯ ಸಮಯದಲ್ಲಿ ಹಲವಾರು ಸಂಭವನೀಯ ಕಾರಣಗಳನ್ನು ಪ್ರಸ್ತುತಪಡಿಸಿದರು.

ಯುಕೆ ನರ್ಸ್ ಲೂಸಿ ಲೆಟ್ಬಿ ಶಿಶುಗಳನ್ನು ಕೊಲೆ ಮಾಡಿದ್ದೇಕೆ? ತನಿಖೆಯಲ್ಲಿ ಹೊರಬಂದ ಉದ್ದೇಶಗಳ ಪಟ್ಟಿ ಇಲ್ಲಿದೆ
ಚೆಷೈರ್ ಪೋಲೀಸರು ಲೂಸಿ ಲೆಟ್ಬಿ ಬಂಧಿಸಿದ ನಂತರ ಕೈಕೋಳದಲ್ಲಿ ಆಕೆಯನ್ನು ಮನೆಯಿಂದ ಕರೆದೊಯ್ಯತ್ತಿರುವ ಚಿತ್ರ
Follow us
ನಯನಾ ಎಸ್​ಪಿ
|

Updated on:Aug 19, 2023 | 4:13 PM

ಇಂಗ್ಲೆಂಡ್​ನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಲೂಸಿ ಲೆಟ್ಬಿ (Lucy Letby Case) ಇತ್ತೀಚೆಗೆ ಏಳು ಶಿಶುಗಳನ್ನು ಕೊಂದು (Crime) ಇತರ ಆರು ಮಂದಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾಳೆ. ಇಂತಹ ಕೃತ್ಯ ಎಸಗಿದ ಲೂಸಿ ದೇಶದ ಅತ್ಯಂತ ಕುಖ್ಯಾತ ವೈದ್ಯಕೀಯ ಸರಣಿ ಕೊಲೆಗಾರರಲ್ಲಿ ಒಬ್ಬಳೆಂದು ಗುರುತಿಸಿಕೊಂಡಿದ್ದಾರೆ. ಈ ಕೊಲೆಗಳ ಹಿಂದಿನ ನಿಜಾವದ ಉದ್ದೇಶಗಳು ಇಂದಿಗೂ ಸಂಪೂರ್ಣವಾಗಿ ತಿಳಿದಿಲ್ಲ, ಆದರೆ ಪ್ರಾಸಿಕ್ಯೂಟರ್‌ಗಳು ಅವಳ 10-ತಿಂಗಳ ವಿಚಾರಣೆಯ ಸಮಯದಲ್ಲಿ ಹಲವಾರು ಸಂಭವನೀಯ ಕಾರಣಗಳನ್ನು ಪ್ರಸ್ತುತಪಡಿಸಿದರು.

ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆ ವಾರ್ಡ್‌ನಲ್ಲಿ ಶಿಶುಗಳ ಹಾಸಿಗೆ, ಇಲ್ಲಿ ನರ್ಸ್ ಲೂಸಿ ಲೆಟ್ಬಿ ಕೆಲಸ ಮಾಡುತ್ತಿದ್ದಳು

ಉದ್ದೇಶ 1: ಸೀರಿಯಲ್ ಕಿಲ್ಲರ್ ಆಂಗಲ್

“ದೇವರು ಆಟವಾಡುತ್ತಿರುವಂತೆ” ಶಿಶುಗಳ ಜೀವನದ ಮೇಲೆ ಲೂಸಿ ನಿಯಂತ್ರಣವನ್ನು ಹೊಂದಿದ್ದಳು ಎಂದು ಪ್ರಾಸಿಕ್ಯೂಟರ್ಗಳು ವಾದಿಸಿದರು. ಈ ಸರಣಿ ಕೊಲೆಗಳಲ್ಲಿ ಕಂಡುಬಂದ ಪ್ಯಾಟರ್ನ್ ಗಮನಿಸಿದ ಪ್ರಾಸಿಕ್ಯೂಟರ್ಗಳು ಅವಳು ಮಗುವಿಗೆ ಹಾನಿಯನ್ನುಂಟುಮಾಡಿದ ನಂತರ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ತನ್ನ ಸಹೋದ್ಯೋಗಿಗಳನ್ನು ತ್ವರಿತವಾಗಿ ಎಚ್ಚರಿಸುತ್ತಾಳೆ, ಮುಂದೆ ಏನಾಗಬಹುದು ಎಂದು ಊಹಿಸುವಂತೆ ನಾಟಕ ಮಾಡುತ್ತಿದ್ದಳು ಎಂದು ಹೇಳಿದ್ದಾರೆ.

Lucy Diary

ನರ್ಸ್ ಲೂಸಿ ಲೆಟ್ಬಿಯ 2016 ರ ಡೈರಿ

ಗೊಂದಲದ ರೀತಿಯಲ್ಲಿ, ಲೂಸಿ ಮನೆಯಲ್ಲಿ ಆಸ್ಪತ್ರೆಯ ದಾಖಲೆಗಳನ್ನುಇಟ್ಟುಕೊಂಡಿರುವುದು ಕಂಡುಬಂದಿದೆ ಮತ್ತು “ನಾನು ದುಷ್ಟೆ, ನಾನು ಕೊಲೆಗಳನ್ನು ಮಾಡಿದ್ದೇನೆ” ಬರೆದಿಟ್ಟಿರುವ ಕಾಗದ ತನಿಖೆ ವೇಳೆ ಸಿಕ್ಕಿದೆ. ಆಸ್ಪತ್ರೆಯಲ್ಲಿ ದುಃಖ ಮತ್ತು ಹತಾಶೆಯನ್ನು ಉಂಟುಮಾಡುವುದರಿಂದ ಅವಳು ಖುಷಿ ಪಡುತ್ತಿದ್ದಳು. ಈಕೆ ಒಬ್ಬ ಸೀರಿಯಲ್ ಕಿಲ್ಲರ್ ಎಂದು ಪ್ರಾಸಿಕ್ಯೂಟರ್‌ಗಳು ಸೂಚಿಸಿದರು.

ಉದ್ದೇಶ 2: ಅಕ್ರಮ ಸಂಬಂಧ

ಪ್ರಾಸಿಕ್ಯೂಟರ್‌ಗಳು ಲೂಸಿಯ ಮತ್ತೊಂದು ಉದ್ದೇಶವನ್ನು ಬಹಿರಂಗ ಪಡಿಸಿದರು. ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿವಾಹಿತ ವೈದ್ಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು ಎಂದು ವರದಿಯಲ್ಲಿ ಹೇಳಲಾಗಿದೆ. ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಆ ವಿವಾಹಿತ ವೈದ್ಯರನ್ನು ಕರೆಯಲಾಗುತ್ತಿತ್ತು, ಹಾಗಾಗಿ ಅವರನ್ನು ನೋಡುವ ಅಳುವಾಗಿ ಲೂಸಿ ಇಂತಹ ಕೃತ್ಯ ಮಾಡಿರಬಹುದು ಎಂದು ಹೇಳಲಾಗಿದೆ ಆದರೆ ಲೆಟ್ಬಿ ಇದನ್ನು ನಿರಾಕರಿಸಿದ್ದಾಳೆ.

ಉದ್ದೇಶ 3: ಮಾನಸಿಕ ಅಸ್ವಸ್ಥೆ

ಲೆಟ್ಬಿ ಬರೆದ ಕೆಲವು ಪತ್ರಗಳಲ್ಲಿ ಸ್ವಯಂ-ಅನುಮಾನ ಮತ್ತು ಅಸಮರ್ಪಕತೆಯ ಭಾವನೆಯನ್ನು ಸೂಚಿಸುತ್ತವೆ. ಈ ಪತ್ರಗಳಲ್ಲಿ ತಾನು ಉದ್ದೇಶಪೂರ್ವಕವಾಗಿ ಶಿಶುಗಳಿಗೆ ಹಾನಿ ಮಾಡಿದ್ದೇನೆ ಎಂದು ಅವಳು ಒಪ್ಪಿಕೊಂಡಿದ್ದಾಳೆ ಏಕೆಂದರೆ ಮಕ್ಕಳನ್ನು ನೋಡಿಕೊಳ್ಳಲು ತಾನು ಸಮರ್ಥಳಲ್ಲ ಎಂದು ಆಕೆ ಭಾವಿಸಿದ್ದಾಳೆ ಎಂಬುದು ಈ ಪತ್ರಗಳಿಂದ ತಿಳಿದುಬಂದಿದೆ.

ಲೆಟ್ಬಿ ಬರೆದಿರುವ ಕೈಬರಹದ ಪತ್ರ: “ನಾನು ದುಷ್ಟೆ, ನಾನು ಕೊಲೆ ಮಾಡಿದ್ದೀನಿ.”

ತೀವ್ರವಾಗಿ ಅಸ್ವಸ್ಥರಾಗಿರುವ ಶಿಶುಗಳನ್ನು ನೋಡಿಕೊಳ್ಳಲು ತರಬೇತಿ ಪಡೆದ ಲೆಟ್ಬಿ, ಅರೋಗ್ಯ ಶಿಶುಗಳನ್ನು ನೋಡಿಕೊಳ್ಳಲು ಬೇಸರಗೊಂಡು ಇಂತಹ ನಿರ್ಧಾರವನ್ನು ಮಾಡಿರಬಹುದು ಎಂದು ವರ್ದಿ ತಿಳಿಸುತ್ತದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ನರ್ಸ್​, ಇಲ್ಲಿಯವರೆಗೆ 7 ಹಸುಳೆಗಳು ಸಾವು

ಪ್ರಸ್ತುತಪಡಿಸಿದ ಪುರಾವೆಯು ಲೂಸಿ ಶಿಶುಗಳಿಗೆ ಹಾನಿ ಮಾಡಲು ವಿವಿಧ ವಿಧಾನಗಳನ್ನು ಬಳಸಿದ್ದಾಳೆ ಎಂದು ತೋರಿಸಿದೆ, ಗಾಳಿ, ಹಾಲು ಅಥವಾ ಇನ್ಸುಲಿನ್ ನಂತಹ ಔಷಧಗಳನ್ನು ಬಳಸಿದ್ದಾಳೆ. ತಾನೇ ಶಿಶುಗಳಿಗೆ ಹಾನಿ ಮಾಡಿದ್ದರೂ ನೈಸರ್ಗಿಕವಾಗಿ ಮಗು ಅಸ್ವಸ್ಥಗೊಂಡಿದೆ ಎಂದು ತನ್ನ ಸಹುದ್ಯೋಗಿಗಳನ್ನು ನಂಬಿಸಿದ್ದಾಳೆ.

ನಿಖರವಾದ ಕಾರಣಗಳು ಅನಿಶ್ಚಿತವಾಗಿ ಉಳಿಯಬಹುದಾದರೂ, ಈ ಪ್ರಕರಣ ಆಸ್ಪತ್ರೆಗಳಲ್ಲಿ ಜಾಗರೂಕತೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:12 pm, Sat, 19 August 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ