ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ನರ್ಸ್​, ಇಲ್ಲಿಯವರೆಗೆ 7 ಹಸುಳೆಗಳು ಸಾವು

ಆಸ್ಪತ್ರೆಯಲ್ಲಿ ವೈದ್ಯರಷ್ಟೇ ನರ್ಸ್​ಗಳ ಮೇಲೂ ನಂಬಿಕೆ ಇರುತ್ತದೆ. ವೈದ್ಯರು ಇವರಿಗೆ ಇಂತಿಂಥ ಚಿಕಿತ್ಸೆ ನೀಡಬೇಕೆಂದು ಹೇಳಿ ಹೋಗುತ್ತಾರೆ, ಆದರೆ ಚಿಕಿತ್ಸೆ ನೀಡುವುದು ನರ್ಸ್​ಗಳೇ ಹಾಗಾಗಿ ತುಸು ನಂಬಿಕೆ ಹೆಚ್ಚು. ಆದರೆ ಯುಕೆಯ ಈ ನರ್ಸ್​ ಸೀರಿಯಲ್ ಕಿಲ್ಲರ್ ಆಗಿ ಮಾರ್ಪಾಟಾಗಿದ್ದಾಳೆ, ಇದುವರೆಗೆ 7 ನವಜಾತ ಶಿಶುಗಳನ್ನು ಹತ್ಯೆ ಮಾಡಿದ್ದು, ಇನ್ನೂ 6 ಶಿಶುಗಳನ್ನು ಕೊಲ್ಲಲ್ಲು ಪ್ರಯತ್ನಿಸಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ನರ್ಸ್​Image Credit source: NDTV
Follow us
ನಯನಾ ರಾಜೀವ್
|

Updated on: Aug 19, 2023 | 8:01 AM

ಆಸ್ಪತ್ರೆಯಲ್ಲಿ ವೈದ್ಯರಷ್ಟೇ ನರ್ಸ್​ಗಳ ಮೇಲೂ ನಂಬಿಕೆ ಇರುತ್ತದೆ. ವೈದ್ಯರು ಇವರಿಗೆ ಇಂತಿಂಥ ಚಿಕಿತ್ಸೆ ನೀಡಬೇಕೆಂದು ಹೇಳಿ ಹೋಗುತ್ತಾರೆ, ಆದರೆ ಚಿಕಿತ್ಸೆ ನೀಡುವುದು ನರ್ಸ್​ಗಳೇ ಹಾಗಾಗಿ ತುಸು ನಂಬಿಕೆ ಹೆಚ್ಚು. ಆದರೆ ಯುಕೆಯ ಈ ನರ್ಸ್​ ಸೀರಿಯಲ್ ಕಿಲ್ಲರ್ ಆಗಿ ಮಾರ್ಪಾಟಾಗಿದ್ದಾಳೆ, ಇದುವರೆಗೆ 7 ನವಜಾತ ಶಿಶುಗಳನ್ನು ಹತ್ಯೆ ಮಾಡಿದ್ದು, ಇನ್ನೂ 6 ಶಿಶುಗಳನ್ನು ಕೊಲ್ಲಲ್ಲು ಪ್ರಯತ್ನಿಸಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಇದೀಗ ನರ್ಸ್​ ಅನ್ನು ತಪ್ಪಿತಸ್ಥೆ ಎಂದಿರುವ ನ್ಯಾಯಾಲಯ ಆಗಸ್ಟ್​ 21 ರಂದು ಮ್ಯಾಂಚೆಸ್ಟರ್ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಲಿದೆ. ನರ್ಸ್​ ಲೂಸಿ ಲೆಟ್ಟಿ 33 ವರ್ಷ ವಯಸ್ಸಿನವರು, ಕಳೆದ ಅಕ್ಟೋಬರ್​ನಿಂದ ಈ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದೆ, ಆಕೆಯಿಂದ ಮೃತಪಟ್ಟ ಮಕ್ಕಳಲ್ಲಿ ಹೆಚ್ಚಿನವು ಅನಾರೋಗ್ಯದಿಂದ ಬಳಲುತ್ತಿದ್ದವು, ಕೆಲವು ಅಕಾಲಿಕವಾಗಿ ಜನಿಸಿದಂಥದ್ದಾಗಿದ್ದವು.

ಜೂನ್ 2015 ಮತ್ತು ಜೂನ್ 2016 ರ ನಡುವೆ ವಾಯುವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಹತ್ಯೆ ಮಾಡಿದ್ದಳು. ಈ ಪ್ರಕರಣದಲ್ಲಿ ಜುಲೈ 2018 ಮತ್ತು ನವೆಂಬರ್ 2020 ರ ನಡುವೆ ನರ್ಸ್ ಅನ್ನು ಮೂರು ಬಾರಿ ಬಂಧಿಸಲಾಗಿತ್ತು. ಎರಡು ಬಾರಿ ಬಿಡುಗಡೆಗೊಂಡಿದ್ದಳು.

ಮತ್ತಷ್ಟು ಓದಿ: ಬೆಳಗಾವಿ: ಪತಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ ಪತ್ನಿ; ವಿಷ ಬರೆಸಿದ್ದ ಉಪ್ಪಿಟ್ಟು ತಿಂದ ಬೆಕ್ಕು, ನಾಯಿ ಸಾವು!

ದುರ್ಬಲ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ಈ ನರ್ಸ್​ಗೆ ವಹಿಸಲಾಗಿತ್ತು, ಲೂಸಿ ಶಿಫ್ಟ್​ನಲ್ಲಿದ್ದಾಗ ಮಕ್ಕಳು ಮೃತಪಟ್ಟಿದ್ದಾರೆ, ಆದರೆ ಲೂಸಿ ಮಕ್ಕಳು ಸಹಜವಾಗಿ ಸಾವನ್ನಪ್ಪಿದ್ದಾರೆ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳುತ್ತಿದ್ದಾಳೆ. ಆಕೆಯ ಮನೆಯಲ್ಲಿ ಸಿಕ್ಕ ಪತ್ರವೊಂದರಲ್ಲಿ ನಾನು ದುಷ್ಟೆ, ನಾನೇ ಎಲ್ಲಾ ತಪ್ಪನ್ನು ಮಾಡಿದ್ದೇನೆ ಎಂದು ಬರೆದಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ