ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಗೆ ವಿಶೇಷ ಸಲಹೆಗಾರ್ತಿ

ಯಾಸಿನ್ ಮಲಿಕ್ ಅವರ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಶಾಲ್‌ನಿಂದ ಅಂತರ ಕಾಪಾಡಿದ್ದು, ಮುಶಾಲ್ ಜೆಕೆಎಲ್‌ಎಫ್‌ನ ಸದಸ್ಯರಲ್ಲ ಎಂದು ಹೇಳಿದೆ. ಅವರು ನಮಗೆ ಗೌರವಾನ್ವಿತರು ಆದರೆ ಅವರು JKLF ಸದಸ್ಯೆ ಅಲ್ಲ. ಅವರು JKLF ಅಥವಾ ಯಾಸಿನ್ ಮಲಿಕ್ ಅವರ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ, ಆದ್ದರಿಂದ ಅವರು ಯಾವುದೇ ವೇದಿಕೆಯಲ್ಲಿ ರಾಜಕೀಯವಾಗಿ ಯಾಸಿನ್ ಮಲಿಕ್ ಅವರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು JKLF  ಟ್ವೀಟ್ ಮಾಡಿದೆ.

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಗೆ ವಿಶೇಷ ಸಲಹೆಗಾರ್ತಿ
ಮುಶಾಲ್ ಹುಸೇನ್ ಮುಲ್ಲಿಕ್
Follow us
ರಶ್ಮಿ ಕಲ್ಲಕಟ್ಟ
|

Updated on:Aug 18, 2023 | 6:57 PM

ಇಸ್ಲಾಮಾಬಾದ್ ಆಗಸ್ಟ್ 18: ಜೈಲಿನಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ (Yasin Malik)  ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್​​ಗೆ (Mushaal Hussein Mullick) ಪಾಕಿಸ್ತಾನದ (Pakistan) ಹಂಗಾಮಿ ಸರ್ಕಾರದಲ್ಲಿ ಸ್ಥಾನ ನೀಡಲಾಗಿದೆ. ಜಿಯೋಟಿವಿ ವರದಿಯ ಪ್ರಕಾರ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣದ ಕುರಿತು ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ (Anwaarul Haq Kakar) ಅವರಿಗೆ ವಿಶೇಷ ಸಲಹೆಗಾರರಾಗಿ ಮುಲ್ಲಿಕ್​​ನ್ನು ನೇಮಿಸಲಾಗಿದೆ. ಮುಶಾಲ್ ಅವರ ಪತಿ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಕಮಾಂಡರ್ ಯಾಸಿನ್ ಮಲಿಕ್, ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

2009 ರಲ್ಲಿ ಇಸ್ಲಾಮಾಬಾದ್‌ನಲ್ಲಿ ಇವರಿಬ್ಬರು ವಿವಾಹವಾಗಿದ್ದರು ಮತ್ತು ಆ ಸಮಯದಲ್ಲಿ ಪಾಕಿಸ್ತಾನದ ಕೆಲವು ಉನ್ನತ ರಾಜಕೀಯ ನಾಯಕರು ವಿವಾಹದಲ್ಲಿ ಭಾಗವಹಿಸಿದ್ದರು.

ಪಾಕಿಸ್ತಾನದ ಉಸ್ತುವಾರಿ ಸರ್ಕಾರ

ಗುರುವಾರ ಐವಾನ್-ಎ-ಸದರ್‌ನಲ್ಲಿರುವ ಅಧ್ಯಕ್ಷ ಆರಿಫ್ ಅಲ್ವಿ ಅವರ ಅಧಿಕೃತ ನಿವಾಸದಲ್ಲಿ 18 ಸದಸ್ಯರ ಪಾಕಿಸ್ತಾನದ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಪ್ರಮಾಣ ವಚನ ಸ್ವೀಕರಿಸಿದರು. ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ದೇಶದ ಆಡಳಿತ ನಡೆಸುವ ಜವಾಬ್ದಾರಿಯನ್ನು ಹಂಗಾಮಿ ಸಚಿವ ಸಂಪುಟಕ್ಕೆ ವಹಿಸಲಾಗಿದೆ.

ಪಾಕಿಸ್ತಾನದ ಈ ನಿರ್ಧಾರ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಹೇಳಿದ್ದೇನು

ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್ ಅವರನ್ನು ಹಂಗಾಮಿ ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಾಕಿಸ್ತಾನವು ಪ್ರತ್ಯೇಕತಾವಾದಿಗಳೊಂದಿಗೆ ನಿಲ್ಲುತ್ತದೆ ಎಂಬ ಪಾಕಿಸ್ತಾನದ ಸ್ಪಷ್ಟ ಸಂದೇಶವಾಗಿದೆ. ಆರ್ಥಿಕ ದಿವಾಳಿತನದ ಹೊರತಾಗಿಯೂ ಯಾವುದೇ ನೀತಿಯನ್ನು ಬದಲಾಯಿಸಲಾಗಿಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಹೇಳಿದ್ದಾರೆ.

ಯಾಸಿನ್ ಮಲಿಕ್ ಅವರ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಶಾಲ್‌ನಿಂದ ಅಂತರ ಕಾಪಾಡಿದ್ದು, ಮುಶಾಲ್ ಜೆಕೆಎಲ್‌ಎಫ್‌ನ ಸದಸ್ಯರಲ್ಲ ಎಂದು ಹೇಳಿದೆ. ಅವರು ನಮಗೆ ಗೌರವಾನ್ವಿತರು ಆದರೆ ಅವರು JKLF ಸದಸ್ಯೆ ಅಲ್ಲ. ಅವರು JKLF ಅಥವಾ ಯಾಸಿನ್ ಮಲಿಕ್ ಅವರ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ, ಆದ್ದರಿಂದ ಅವರು ಯಾವುದೇ ವೇದಿಕೆಯಲ್ಲಿ ರಾಜಕೀಯವಾಗಿ ಯಾಸಿನ್ ಮಲಿಕ್ ಅವರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು JKLF  ಟ್ವೀಟ್ ಮಾಡಿದೆ.

ಯಾಸಿನ್ ಮಲಿಕ್ ಕಾಶ್ಮೀರಿ ಪ್ರತ್ಯೇಕತಾವಾದಿಯಾಗಿದ್ದು, ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಯಾಸಿನ್ ಮಲಿಕ್ ವಿರುದ್ಧದ ಪ್ರಮುಖ ಪ್ರಕರಣವೆಂದರೆ ಮೆಹಬೂಬಾ ಮುಫ್ತಿ ಅವರ ಸಹೋದರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ. 1989 ರಲ್ಲಿ, ರುಬಯ್ಯನನ್ನು ಯಾಸಿನ್ ಮಲಿಕ್ ಮತ್ತು ಇತರ ಮೂವರು ಅಪಹರಿಸಿದ್ದರು. ಐದು ದಿನಗಳ ನಂತರ ಸರ್ಕಾರವು ವಿನಿಮಯವಾಗಿ ಐದು ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಯಾಸಿನ್ ಮಲಿಕ್ ಪತ್ನಿಯನ್ನು ಪಾಕಿಸ್ತಾನದ ಉಸ್ತುವಾರಿ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳುವುದರ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯಿಸಿದ, ಮೆಹಬೂಬಾ ಮುಫ್ತಿ, ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತನಾಡಿ, ಪಾಕಿಸ್ತಾನದಲ್ಲ. ಭಾರತದಲ್ಲಿ, ಭಾರತದ ಚುನಾವಣಾ ಆಯೋಗ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಪ್ರಸ್ತುತ ಸ್ಥಿತಿ ಪಾಕಿಸ್ತಾನ, ಸಿರಿಯಾದಂತಾಗಿದೆ ಎಂದ ಮೆಹಬೂಬಾ ಮುಫ್ತಿ

ಮುಶಾಲ್ ಹುಸೇನ್ ಮುಲ್ಲಿಕ್ ಯಾರು?

  • ಮುಶಾಲ್ ಹುಸೇನ್ ಮುಲ್ಲಿಕ್ ಪಾಕಿಸ್ತಾನಿ ಪ್ರಜೆಯಾಗಿದ್ದು, ಅವರು 2009 ರಲ್ಲಿ ಯಾಸಿನ್ ಮಲಿಕ್ ಅವರನ್ನು ವಿವಾಹವಾದರು. ಆಕೆಯ ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.
  • ಮುಶಾಲ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ರಾಜಕೀಯ ಆರ್ಥಿಕತೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
  • ಮುಶಾಲ್ ಒಬ್ಬ ಪೇಂಟರ್ ಆಗಿದ್ದು, ತನ್ನ ನ್ಯೂಡ್ ಡ್ರಾಯಿಂಗ್ ಗೆ ಹೆಸರುವಾಸಿಯಾಗಿದ್ದಾಳೆ.
  • ಮದುವೆಯಾದಾಗ ಮುಶಾಲ್‌ಗೆ 23 ವರ್ಷ ಮತ್ತು ಯಾಸಿನ್‌ಗೆ 42 ವರ್ಷ.
  • ಸರ್ಕಾರದ ಅಂಕಿಅಂಶಗಳ ಪ್ರಕಾರ, ಮುಶಾಲ್ ಹುಸೇನ್ ಮುಲ್ಲಿಕ್ 2014 ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ನಂತರ ಅವರು ತಮ್ಮ ವೀಸಾ ನವೀಕರಣಕ್ಕೆ ಅರ್ಜಿ ಸಲ್ಲಿಸಲಿಲ್ಲ.
  • 2019 ರಲ್ಲಿ, ಯಾಸಿನ್ ಮಲಿಕ್ ಅವರನ್ನು ಬಂಧಿಸಿದ ನಂತರ ಮುಶಾಲ್ ವೀಸಾ ಮನವಿಯನ್ನು ಮಾಡಿದರು. ದಂಪತಿಗೆ 11 ವರ್ಷದ ರಜಿಯಾ ಸುಲ್ತಾನ್ ಎಂಬ ಮಗಳಿದ್ದಾಳೆ, ಅವರು ಇತ್ತೀಚೆಗೆ ಜೈಲಿನಲ್ಲಿರುವ ಯಾಸಿನ್ ಮಲಿಕ್ ಅವರನ್ನು ಭೇಟಿ ಮಾಡಲು ಮನವಿ ಮಾಡಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Fri, 18 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ