ಭಾರತದ ಪ್ರಸ್ತುತ ಸ್ಥಿತಿ ಪಾಕಿಸ್ತಾನ, ಸಿರಿಯಾದಂತಾಗಿದೆ ಎಂದ ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ(Mehbooba Mufti) ಅವರು ಭಾರತದ ಪ್ರಸ್ತುತ ಸ್ಥಿತಿಯನ್ನು ಕೂಡ ಪಾಕಿಸ್ತಾನ ಹಾಗೂ ಸಿರಿಯಾಗೆ ಹೋಲಿಸಿದ್ದಾರೆ. ಮಣಿಪುರ, ನುಹ್ ಹಿಂಸಾಚಾರದ ಬಗ್ಗೆ ಮಾತನಾಡಿರುವ ಮುಫ್ತಿ, ಹಿಂದೆಂದೂ ಭಾರತದಲ್ಲಿ ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ, ಪಾಕಿಸ್ತಾನ, ಸಿರಿಯಾ ಮಾದರಿಯಲ್ಲಿ ಜನರು ಬಂದೂಕುಗಳನ್ನು ಹಿಡಿದು ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ ಎಂದರು.
ಶ್ರೀನಗರ, ಆಗಸ್ಟ್ 18: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ(Mehbooba Mufti) ಅವರು ಭಾರತದ ಪ್ರಸ್ತುತ ಸ್ಥಿತಿಯನ್ನು ಕೂಡ ಪಾಕಿಸ್ತಾನ ಹಾಗೂ ಸಿರಿಯಾಗೆ ಹೋಲಿಸಿದ್ದಾರೆ. ಮಣಿಪುರ, ನುಹ್ ಹಿಂಸಾಚಾರದ ಬಗ್ಗೆ ಮಾತನಾಡಿರುವ ಮುಫ್ತಿ, ಹಿಂದೆಂದೂ ಭಾರತದಲ್ಲಿ ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ, ಪಾಕಿಸ್ತಾನ, ಸಿರಿಯಾ ಮಾದರಿಯಲ್ಲಿ ಜನರು ಬಂದೂಕುಗಳನ್ನು ಹಿಡಿದು ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ ಎಂದರು.
ಸಾಮಾನ್ಯ ಜನರು ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೆ ಇಳಿಯುತ್ತಾರೆ ಎಂದಾದರೆ ಅವರ ಮನಸ್ಥಿತಿ ಎಷ್ಟು ಹಾಳಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ, ಸಿರಿಯಾದಲ್ಲಿ ಅಲ್ಲಾ ಹು ಅಕ್ಬರ್ ಎಂದು ಕೂಗುತ್ತಾ ಜನರನ್ನು ಕೊಲ್ಲುತ್ತಾರೆ, ಭಾರತದಲ್ಲಿ ಜೈ ಶ್ರೀರಾಮ್ ಎಂದು ಹೇಳುತ್ತಾ ಕೊಲ್ಲುತ್ತಿದ್ದಾರೆ ಇಬ್ಬರಿಗೂ ಏನು ವ್ಯತ್ಯಾಸವಿದೆ ಮುಫ್ತಿ ಪ್ರಶ್ನಿಸಿದರು. ಈಗ ಭಾರತವು ಪಾಕಿಸ್ತಾನ, ಸಿರಿಯಾದಂತೆ ಕಾಣಿಸುತ್ತಿದೆ.
ಭಾರತ ಮೈತ್ರಿಕೂಟದ ರಚನೆಯ ಕುರಿತು ಪ್ರತಿಕ್ರಿಯಿಸಿದ ಮುಫ್ತಿ, ಇದು ಗೋಡ್ಸೆಯ ಭಾರತ ಮತ್ತು ಗಾಂಧಿ, ನೆಹರು ಮತ್ತು ಸರ್ದಾರ್ ಪಟೇಲ್ ಅವರ ಕಲ್ಪನೆಯ ಭಾರತದ ನಡುವಿನ ಯುದ್ಧವಾಗಲಿದೆ. ಬಿಜೆಪಿಯು ಗೋಡ್ಸೆಯ ಭಾರತವನ್ನು ರಚಿಸಲು ಬಯಸುತ್ತದೆ. ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಲು ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಕೊನೆಗೂ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಗ್ಗೆ ಒಬ್ಬರು ಮಾತಾಡಿದ್ದಾರೆ: ಲ್ಯಾಪಿಡ್ ಹೇಳಿಕೆಗೆ ಸಹಮತ ಸೂಚಿಸಿದ ಮೆಹಬೂಬಾ ಮುಫ್ತಿ
ಪ್ರಧಾನಿ ಮೋದಿ ವಿರುದ್ಧ ಮುಫ್ತಿ ವಾಗ್ದಾಳಿ ನಡೆಸಿ, ಅವರು ಹಿಂದಿನದನ್ನು ಮಾತ್ರ ಮಾತನಾಡುತ್ತಿದ್ದಾರೆ, ಜನರಿಗೆ ಅವರು ಭರವಸೆ ನೀಡಿದ್ದನ್ನು ತೆಗೆದುಕೊಳ್ಳುತ್ತಿಲ್ಲ, ಅವರು ದೇಶದ ಭವಿಷ್ಯದ ಬಗ್ಗೆ ಮೌನವಾಗಿದ್ದಾರೆ ಎಂದು ಹೇಳಿದರು.