ಮಧ್ಯ ಪ್ರದೇಶ: ಅಳಿಯನನ್ನು ಕೊಡಲಿಯಿಂದ ಕೊಚ್ಚಿಹಾಕಿದ ವ್ಯಕ್ತಿಯ ಮನೆಯನ್ನು ಬಲ್ಡೋಜರ್ನಿಂದ ಕೆಡವಲು ನಿರ್ಧರಿಸಿದ ಪೊಲೀಸ್!
ಮದುವೆಯಾಗಿ ಎರಡು ವರ್ಷ ಕಳೆದಿದ್ದರಿಂದ ಹೆಂಡತಿ ಮನೆಯವರ ಕೋಪ ಶಮನಗೊಂಡಿರಬಹುದೆಂದು ಭಾವಿಸಿದ ಧೀರು ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದ. ಧೀರು ಹೆಂಡತಿ ಊರಲ್ಲಿ ಕಾಣಿಸಿದ ತಕ್ಷಣ ಅವಳಿಗೆ ಜೀವ ಬೆದರಿಕೆ ಕರೆ ಹೋಗಲಾರಂಭಿಸಿದ್ದವು.
ಮಧ್ಯ ಪ್ರದೇಶದ ಶಿವಪುರಿ (Shivpuri) ಜಿಲ್ಲೆಯಲ್ಲಿ 23-ವರ್ಷ-ವಯಸ್ಸಿನ ಯುವನೊಬ್ಬನನ್ನು ಕೊಲೆ ಮಾಡಿರುವ ಅರೋಪ ಎದುರಿಸುತ್ತಿರುವ ಕುಟುಂಬವೊಂದರ ಮನೆಯನ್ನು ಬುಲ್ಡೋಜರ್ (bulldozer) ಸಹಾಯದಿಂದ ಕೆಡವಲಾಗುವುದು ಮತ್ತು ಅದರ ಸದಸ್ಯನನೊಬ್ಬನಿಗೆ ನೀಡಿರುವ ಬಂದೂಕು ಹೊಂದುವ ಪರವಾನಗಿಯನ್ನು (license) ರದ್ದುಗೊಳಿಸಲಾಗುವುದು ಎಂದು ಮಧ್ಯ ಪೊಲೀಸ್ ರಾಜ್ಯ ಮೂಲಗಳು ತಿಳಿಸಿವೆ.
ಇದೊಂದು ಮರ್ಯಾದಾ ಹತ್ಯೆ ಪ್ರಕರಣವೇ ಆದರೂ ಕತೆ ಸ್ವಲ್ಪ ಭಿನ್ನ ಅಂತ ಹೇಳಬಹುದು. ಕೊಲೆಯಾದ ತರುಣ ಧೀರು ಜಾಟವ್ ಸುಮಾರು 2-ವರ್ಷದ ಹಿಂದೆ ಒಬ್ಬ ಯುವತಿಯನ್ನು ಪ್ರೀತಿಸಿ ಕೋರ್ಟಲ್ಲಿ ಮದುವೆಯಾದ. ಅವನ ತಂದೆತಾಯಿಗಳು ಮದುವೆಯನ್ನು ವೀರೋಧಿಸಲಿಲ್ಲವಾದರೂ, ಯುವತಿ ಮನೆಯಲ್ಲಿ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗಿತ್ತು ಮತ್ತು ಧೀರು ಜಾಟವ್ ಕುಟುಂಬದೊಂದಿಗೆ ಸಂಬಂಧ ಬೆಳೆಸುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹಾಗೆ ನೋಡಿದರೆ ಎರಡೂ ಕುಟುಂಬಗಳು ಒಂದೇ ಸಮುದಾಯಕ್ಕೆ ಸೇರಿವೆ.
ನ್ಯಾಯಾಲಯದಲ್ಲಿ ಮದುವೆಯಾದ ನಂತರ ಧೀರು ಹೆಂಡತಿಯೊಂದಿಗೆ ಗುಜರಾತ್ ನ ಅಹಮದಾಬಾದ್ ಗೆ ಹೋಗಿ ಅಲ್ಲೇ ನೆಲಸಲಾರಂಭಿಸಿದ.
ದಂಪತಿಗೆ ಒಂದು ಹೆಣ್ಣು ಮಗು ಕೂಡ ಹುಟ್ಟಿದೆ. ಮದುವೆಯಾಗಿ ಎರಡು ವರ್ಷ ಕಳೆದಿದ್ದರಿಂದ ಹೆಂಡತಿ ಮನೆಯವರ ಕೋಪ ಶಮನಗೊಂಡಿರಬಹುದೆಂದು ಭಾವಿಸಿದ ಧೀರು ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದ. ಧೀರು ಹೆಂಡತಿ ಊರಲ್ಲಿ ಕಾಣಿಸಿದ ತಕ್ಷಣ ಅವಳಿಗೆ ಜೀವ ಬೆದರಿಕೆ ಕರೆ ಹೋಗಲಾರಂಭಿಸಿದ್ದವು.
ಕಳೆದ ಶನಿವಾನ ಧೀರು ತನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಅಂಗಡಿಯೊಂದಕ್ಕೆ ಹೋಗುತ್ತಿದ್ದಾಗ, ಮಾವನೂ (ಹೆಂಡತಿಯ ತಂದೆ) ಸೇರಿದಂತೆ ಆರೋಪಿಗಳು ಧೀರುನನ್ನು ಅಪಹರಿಸಿದ್ದಾರೆ.
ಧೀರುನನ್ನು ಹತ್ತಿರದ ಸ್ಥಳವೊಂದಕ್ಕೆ ಒಯ್ದ ಆರೋಪಿಗಳು ಮನಬಂದಂತೆ ಥಳಿಸಿ ನಂತರ ಕೊಡಲಿಯೊಂದರಿಂದ ಕೊಚ್ಚಿಹಾಕಿದ್ದಾರೆ!
ಧೀರುನ ತಂದೆ ಬ್ರಾಖ್ಬನ್ ಜಾಟವ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಮಗನೊಂದಿಗಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ತನ್ನಲ್ಲಿಗೆ ಧಾವಿಸಿ ಬಂದು ಮಗನನ್ನು ಅಪಹರಿಸಿದ ವಿಷಯ ತಿಳಿಸಿದ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಹೋದಾಗ ಅರೋಪಿಗಳು ತನ್ನ ಮಗನನ್ನು ದೊಣ್ಣೆಗಳಿಂದ ಥಳಿಸಿರುವುದನ್ನು, ಒಬ್ಬನ ಕೈಯಲ್ಲಿ ರೈಫಲ್ ಇದ್ದಿದನ್ನು ಮತ್ತು ಇನ್ನೊಬ್ಬನು ಕೊಡಲಿಯಿಂದ ಧೀರುನನ್ನು ಕೊಚ್ಚುತ್ತಿರುವುದು ನೋಡಿದ್ದಾಗಿ ಬ್ರಾಖ್ಬನ್ ಜಾಟವ್ ಪೊಲೀಸರಿಗೆ ತಿಳಿಸಿದ್ದಾರೆ.
ಬ್ರಾಖ್ಬನ್ ಜಾಟವ್ ಸ್ಥಳಕ್ಕೆ ಬರುತ್ತಿರುವುದನ್ನು ನೋಡಿದಾಕ್ಷಣ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಧೀರು ಊರಿಗೆ ಬರಬೇಡವೆಂದು ಹೇಳಿದ್ದರೂ ಅವನು ತನ್ನ ಹೆಂಡತಿ ಮತ್ತು ಮಗುವಿನೊಡನೆ ಬಂದುಬಿಟ್ಟಿದ್ದ. ಅವನ ಹೆಂಡತಿ ಮನೆಯವರ ಕೋಪ ಶಾಂತವಾಗಿರುತ್ತದೆ ಮತ್ತು ಮಗಳನ್ನು ಕ್ಷಮಿಸಿರುತ್ತಾರೆ ಅನ್ನೋದು ಅವನ ಎಣಿಕೆಯಾಗಿತ್ತು ಎಂದು ಬ್ರಾಖ್ಬನ್ ಜಾಟವ್ ಹೇಳಿದ್ದಾರೆ.
ಸದರಿ ಘಟನೆಯು ಶಿವಪುರಿ ಜಿಲ್ಲೆಯ ಮಚ್ಛಾವಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಏಳು ಜನ ಅರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.