70 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, 2 ದಿನಗಳ ಕಾಲ ಶವದ ಜತೆ ಕಳೆದ ವ್ಯಕ್ತಿ

ಎಪತ್ತು ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ ಬಳಿಕ ವ್ಯಕ್ತಿಯೊಬ್ಬ ಶವದ ಜತೆ ಎರಡು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಲಾತೂರ್​ನಲ್ಲಿ ನಡೆದಿದೆ. ಬೆಳಗ್ಗೆ ಔಸಾ ತಹಸಿಲ್​ನ ಭೇಟಾದಲ್ಲಿರುವ 35ವರ್ಷದ ಮನ್ಸೂರ್ ಶೇಕ್ ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು

70 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, 2 ದಿನಗಳ ಕಾಲ ಶವದ ಜತೆ ಕಳೆದ ವ್ಯಕ್ತಿ
ಅತ್ಯಾಚಾರ Image Credit source: IndiaToday
Follow us
ನಯನಾ ರಾಜೀವ್
|

Updated on: Aug 27, 2024 | 8:33 AM

ಎಪತ್ತು ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ ಬಳಿಕ ವ್ಯಕ್ತಿಯೊಬ್ಬ ಶವದ ಜತೆ ಎರಡು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಲಾತೂರ್​ನಲ್ಲಿ ನಡೆದಿದೆ. ಬೆಳಗ್ಗೆ ಔಸಾ ತಹಸಿಲ್​ನ ಭೇಟಾದಲ್ಲಿರುವ 35ವರ್ಷದ ಮನ್ಸೂರ್ ಶೇಕ್ ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತನಿಖೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ದೇಹವು ಕೊಳೆಯಲು ಪ್ರಾರಂಭಿಸಿದ್ದರಿಂದ ಎರಡು ದಿನಗಳ ಹಿಂದೆ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇಷ್ಟೆಲ್ಲಾ ಸಮಯದಲ್ಲಿ ಶೇಖ್ ಮೃತದೇಹದೊಂದಿಗೆ ಮನೆಯಲ್ಲಿಯೇ ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳೆಯು ಭೇಟಾದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಬೋರ್ಗಾಂವ್ ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ನೆಲೆಸಿದ್ದರು. ಶೇಖ್ ಆಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ್ದಾನೆ.

ಹೆಂಡತಿ, ತಾಯಿ ದೂರವಾಗಿದ್ದು ಆತ ಒಬ್ಬಂಟಿಯಾಗಿದ್ದ, ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್​ನನ್ನು ಪೊಲೀಸರು ಬಂಧಿಸಿದ್ದಾರೆ.

ದರೋಡೆಗೆಂದು ಬಂದಿದ್ದ ವ್ಯಕ್ತಿಯಿಂದ 70 ವರ್ಷದ ಮಹಿಳೆ ಮೇಲೆ ಅತ್ಯಾಚಾರ ದರೋಡೆಗೆಂದು ಮನೆಗೆ ನುಗ್ಗಿದ್ದ ವ್ಯಕ್ತಿ 70 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆ ಅಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ, ದರೋಡೆಗೆಂದು ಮನೆಗೆ ಬಂದಿದ್ದ ಧನೇಶ್​(29) ಎಂಬಾತ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಶನಿವಾರ ರಾತ್ರಿ ಮಹಿಳೆಯ ಮೇಲೆ ಮೆಣಸಿನ ಪುಡಿ ಎರಚಿದ ನಂತರ ಕಾಯಂಕುಲಂನಲ್ಲಿರುವ ಅವರ ನಿವಾಸದಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ಪೆರೋಲ್​ ಮೇಲೆ ಬಿಡುಗಡೆಗೊಂಡಿದ್ದ ಕೊಲೆ ಆರೋಪಿಯಿಂದ ಬಾಲಕಿ ಮೇಲೆ ಅತ್ಯಾಚಾರ

ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಅರಿತ ವ್ಯಕ್ತಿಯು ಆಕೆಯನ್ನು ಗುರಿಯಾಗಿಸಿಕೊಂಡಿದ್ದ. ದುಷ್ಕರ್ಮಿಯು ಮಹಿಳೆಯಿಂದ ಸುಮಾರು ಏಳು ಪವನ್ ಚಿನ್ನವನ್ನು ಕದ್ದಿದ್ದು, ಕದ್ದ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಹೊರಗಿನಿಂದ ಬಾಗಿಲನ್ನು ಲಾಕ್​ ಮಾಡಿ ಹೊರಟುಹೋಗಿದ್ದ, ಆಕೆಯ ಮೊಬೈಲ್​ ಫೋನ್​ ಕೂಡ ಕದ್ದೊಯ್ದಿದ್ದ ಕಾರಣ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಅವರನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ