ಮಹಾರಾಷ್ಟ್ರ: ಪ್ರೇಮಿಯನ್ನೇ ಮದುವೆಯಾಗಿ ನಂತರ ಆತನಿಗೂ, ಆತನ ಕುಟುಂಬಕ್ಕೂ ವಿಷ ನೀಡಿ ಹತ್ಯೆ ಮಾಡಿದ ಮಹಿಳೆ

ವರದಿಯ ಪ್ರಕಾರ, ಸಂಘಮಿತ್ರ ತನ್ನ ಕುಟುಂಬದೊಂದಿಗೆ ಆಚರಿಸಲು ರಕ್ಷಾ ಬಂಧನ ಹಬ್ಬದ ಸಮಯದಲ್ಲಿ ಮನೆಗೆ ಹೋಗಲು ಬಯಸಿದ್ದಳು. ಆದರೆ ರೋಷನ್ ಮತ್ತು ಅವನ ಪೋಷಕರು ಅವಳನ್ನು ಅನುಮತಿಸಲಿಲ್ಲ ಎಂದು ಆರೋಪಿಸಲಾಗಿದೆ. ಆಕೆ ಒತ್ತಾಯಿಸುತ್ತಲೇ ಇದ್ದುದರಿಂದ ರೋಷನ್ ಆಕೆಯ ಮೇಲೆ ಹಲ್ಲೆ ನಡೆಸಿದಾಗ ಕುಟುಂಬದಲ್ಲಿ ಜಗಳವಾಗಿದೆ ಎಂದು ವರದಿ ತಿಳಿಸಿದೆ.

ಮಹಾರಾಷ್ಟ್ರ: ಪ್ರೇಮಿಯನ್ನೇ ಮದುವೆಯಾಗಿ ನಂತರ ಆತನಿಗೂ, ಆತನ ಕುಟುಂಬಕ್ಕೂ ವಿಷ ನೀಡಿ ಹತ್ಯೆ ಮಾಡಿದ ಮಹಿಳೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Oct 19, 2023 | 6:29 PM

ಮುಂಬೈ ಅಕ್ಟೋಬರ್ 19: ಮಹಾರಾಷ್ಟ್ರದ (Maharashtra) ಅಕೋಲಾದ ಮಹಿಳೆಯೊಬ್ಬಳು ತನ್ನ ಪ್ರೇಮಿಯನ್ನು ಮದುವೆಯಾಗಲು ನಿರ್ಧರಿಸಿದಾಗ ಆಕೆಯ ಪೋಷಕರು ಅವಳ ಸಂಬಂಧವನ್ನು ಒಪ್ಪಲಿಲ್ಲ. ಆಕೆ ಆತನೊಂದಿಗೆ ಓಡಿ ಹೋದಳು, ಆದರೆ ಅಲ್ಲಿ ಆಕೆ, ಪತಿ ಮತ್ತು ಅತ್ತೆಯರಿಂದ ಚಿತ್ರಹಿಂಸೆಗೊಳಗಾದಳು. ಹೀಗಿರುವಾಗ ತನ್ನ ಗಂಡ, ಆತನ ಕುಟುಂಬದವರಿಗೆ ವಿಷ (Poison) ನೀಡಿ ಹತ್ಯೆ ಮಾಡಿರುವ ಪ್ರಕರಣ ವರದಿ ಆಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ, ಮಹಿಳೆಯನ್ನು ಸಂಘಮಿತ್ರ ಎಂದು ಗುರುತಿಸಲಾಗಿದೆ. ಈಕೆ ಡಿಸೆಂಬರ್ 2022 ರಲ್ಲಿ ರೋಷನ್ ಕುಂಭರೆ ಎಂಬಾತನನ್ನು ವಿವಾಹವಾಗಿದ್ದಾರೆ. ಆಕೆಯ ಪೋಷಕರು ಸಂಬಂಧವನ್ನು ವಿರೋಧಿಸಿದಾಗ ರೋಷನ್ ಜೊತೆ ಓಡಿಹೋಗಿ ಗಡ್ಚಿರೋಲಿಯ ಮಹಾಗಾಂವ್ನಲ್ಲಿರುವ ಅವರ ಮನೆಗೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವರದಿಯ ಪ್ರಕಾರ ಆಕೆ ರೋಷನ್, ಅವನ ಹೆತ್ತವರಾದ ಶಂಕರ್ ಮತ್ತು ವಿಜಯ ಮತ್ತು ಅವನ ಸಹೋದರಿ ಕೋಮಲ್ ಅವರೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ವಿಜಯಾ ಅವರ ಸಹೋದರಿ ವರ್ಷಾ ಉರಾಡೆ ಅವರೊಂದಿಗೆ ನಾಲ್ವರೂ ಸಂಘಮಿತ್ರ ಮತ್ತು ವಿಜಯಾ ಅವರ ನಾದಿನಿ ರಾಮಟೆಕೆ ಅವರು ಕಾರ್ಯಗತಗೊಳಿಸಿದ ಯೋಜನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಸಂಘಮಿತ್ರಳ ಮದುವೆಯು ನಿರೀಕ್ಷಿತ ರೀತಿಯಲ್ಲಿ ಆಗಲಿಲ್ಲ. ಅವಳು ತನ್ನ ಗಂಡನ ಕೈಯಲ್ಲಿ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿದ್ದಳು. ಕುಟುಂಬದ ಇತರ ಸದಸ್ಯರು ಕೂಡಾ ಆಕೆ ಜತೆ ಕೆಟ್ಟದಾಗಿ ನಡೆಸಿಕೊಂಡರು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

“ಇದು ಅವಳ ಆಘಾತವನ್ನು ಹೆಚ್ಚಿಸಿದೆ” ಎಂದು ಐಇ ವರದಿಯು ಪೊಲೀಸರನ್ನು ಉಲ್ಲೇಖಿಸಿದೆ.

ಸೇಡು ತೀರಿಸಿಕೊಂಡಳು!

ವರದಿಯ ಪ್ರಕಾರ, ಸಂಘಮಿತ್ರ ತನ್ನ ಕುಟುಂಬದೊಂದಿಗೆ ಆಚರಿಸಲು ರಕ್ಷಾ ಬಂಧನ ಹಬ್ಬದ ಸಮಯದಲ್ಲಿ ಮನೆಗೆ ಹೋಗಲು ಬಯಸಿದ್ದಳು. ಆದರೆ ರೋಷನ್ ಮತ್ತು ಅವನ ಪೋಷಕರು ಅವಳನ್ನು ಅನುಮತಿಸಲಿಲ್ಲ ಎಂದು ಆರೋಪಿಸಲಾಗಿದೆ. ಆಕೆ ಒತ್ತಾಯಿಸುತ್ತಲೇ ಇದ್ದುದರಿಂದ ರೋಷನ್ ಆಕೆಯ ಮೇಲೆ ಹಲ್ಲೆ ನಡೆಸಿದಾಗ ಕುಟುಂಬದಲ್ಲಿ ಜಗಳವಾಗಿದೆ ಎಂದು ವರದಿ ತಿಳಿಸಿದೆ.

ಸಂಘಮಿತ್ರ ಮನೆಯ ಹೊರಗೆ ಅಳುತ್ತಾ ಕುಳಿತಿದ್ದಾಗ, ನಾದಿನಿ ರೋಸಾ ರಾಮಟಿಕೆ ಅವಳನ್ನು ನೋಡಿ ಸಮಾಧಾನಪಡಿಸಿದಳು. ಆಗ ಸಂಘಮಿತ್ರ ಅವರನ್ನು ಕೊಲ್ಲಬೇಕು ಎಂದು ಅನಿಸುತ್ತಿದೆ ಎಂದು ಹೇಳಿದ್ದಾಳೆ ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ. ವಿಜಯಾಗೆ ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ. ರಾಮಟಿಕೆ ಅವಳ ನಾದಿನಿ. ವಿಜಯಾ ಅವರ ತಂದೆಗೆ ನಾಲ್ಕು ಎಕರೆ ಜಮೀನಿದ್ದು, ಐವರು ಒಡಹುಟ್ಟಿದವರಿಗೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಆದಾಗ್ಯೂ, ಆಸ್ತಿ ತನ್ನ ಪತಿಗೆ (ಕುಟುಂಬದ ಏಕೈಕ ಮಗನಿಗೆ) ಸಿಗಬೇಕೆಂದು ರಾಮಟಿಕೆ ಭಾವಿಸಿದ್ದರು, ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕುಟುಂಬ ಸದಸ್ಯರನ್ನು ಕೊಲ್ಲಲು ಸಹಾಯ ಮಾಡುವುದಾಗಿ ರಾಮಟಿಕಿ ಸಂಘಮಿತ್ರಗೆ ಭರವಸೆ ನೀಡಿದ್ದಾಳೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿದ್ದಾರೆ. ಅಂದಿನಿಂದ ಇಬ್ಬರೂ Google ನಲ್ಲಿ ಕೊಲ್ಲುವ ವಿಧಾನಗಳನ್ನು ಹುಡುಕಲು ಪ್ರಾರಂಭಿಸಿದರು.

ಮರ್ಡರ್ ಪ್ಲಾನ್

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಅವರು ಆರಂಭದಲ್ಲಿ ವಿಷಪೂರಿತ ಹೂವನ್ನು ಆಹಾರದಲ್ಲಿ ಬೆರೆಸಲು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರು ಆದರೆ ಅವರು ಸಿಕ್ಕಿಬೀಳುವ ಭಯದಿಂದ ಅದನ್ನು ಕೈಬಿಟ್ಟರು. ನಂತರ ಅವರು ಥಾಲಿಯಮ್ ಸ್ಲೋ ಕಿಲ್ಲರ್ ಎಂದು ತಿಳಿದುಕೊಂಡರು. ಅಧನ್ನು ಯಾವುದೇ ಕುರುಹು ಬಿಡದೆ ಕುಟುಂಬದ ಸದಸ್ಯರ ಆಹಾರಕ್ಕೆ ಸೇರಿಸಬಹುದು ಎಂದು ಅರಿತುಕೊಂಡರು. ನಂತರ ಇಬ್ಬರೂ ತೆಲಂಗಾಣದಿಂದ ಸೆಪ್ಟೆಂಬರ್ ಮಧ್ಯದಲ್ಲಿ ಥಾಲಿಯಮ್ ಅನ್ನು ಖರೀದಿಸಿದರು. ಅದನ್ನು ಆಹಾರದಲ್ಲಿ ಬೆರೆಸಲು ಪ್ರಾರಂಭಿಸಿದರು. ಅವರು ಥಾಲಿಯಮ್ ಅನ್ನು ಹೇಗೆ ಸಂಗ್ರಹಿಸಿದರು ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ, ಸಂಘಮಿತ್ರಾ,ತಾನು ಶಂಕರ್, ವಿಜಯ ಮತ್ತು ಕೋಮಲ್ ಅವರ ಮಾಂಸಾಹಾರ ಆಹಾರದಲ್ಲಿ ಥಾಲಿಯಮ್ ಅನ್ನು ಬೆರೆಸಿದ್ದರೆ, ರೋಷನ್‌ಗಾಗಿ ಅವರು ಅದನ್ನು ದಾಲ್ ನಲ್ಲಿ ಬೆರೆಸಿದೆ ಎಂದಿದ್ದಾರೆ.

ರಾಮ್‌ಟಿಕೆ ಅವರು ವಿಜಯಾ ಅವರ ಸಹೋದರಿ ವರ್ಷಾ ಉರಾಡೆ ಅವರಿಗೆ ಥಾಲಿಯಮ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಸೆಪ್ಟೆಂಬರ್ 20 ರಂದು, ಶಂಕರ್ ಮತ್ತು ವಿಜಯಾಗೆ ಕೈಕಾಲುಗಳಲ್ಲಿ ಜುಮ್ಮೆನ್ನುವುದು, ತೀವ್ರವಾದ ಬೆನ್ನುನೋವು ಮತ್ತು ತಲೆ ನೋವು ಕಾಣಿಸಿಕೊಂಡಿತು. ಅವರ ತುಟಿ ಕಪ್ಪಾಗಿತ್ತು, ನಾಲಗೆಯೂ ದಪ್ಪವಾಗಿತ್ತು.  ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಅವರನ್ನು ಅಹೇರಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿಂದ ಅವರನ್ನು ಚಂದ್ರಾಪುರದ ಆಸ್ಪತ್ರೆಗೆ ಮತ್ತು ನಂತರ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ವೈದ್ಯರು ಅನಾರೋಗ್ಯವನ್ನು ಪತ್ತೆಹಚ್ಚುವ ಮೊದಲು, ಶಂಕರ್ ಸೆಪ್ಟೆಂಬರ್ 26 ರಂದು ನಿಧನರಾದರು, ಮರುದಿನ ವಿಜಯಾ ಸಾವಿಗೀಡಾದರು.

“ಅಷ್ಟೊತ್ತರಲ್ಲಿ ಕೋಮಲ್, ಉರಾಡೆ ಮತ್ತು ರೋಷನ್ ಅವರ ಆರೋಗ್ಯವೂ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಕ್ರಮವಾಗಿ ಅಕ್ಟೋಬರ್ 8, 14 ಮತ್ತು 15 ರಂದು ನಿಧನರಾದರು  ಎಂದು ತನಿಖಾಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್​, ನಾಲ್ವರು ಸಜೀವ ದಹನ

ಸಂಘಮಿತ್ರನನ್ನು ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ?

ವರದಿಯ ಪ್ರಕಾರ, ಅವರಲ್ಲಿದ್ದ ರೋಗಲಕ್ಷಣಗಳಿಂದ ಎಲ್ಲರೂ ವಿಷ ಸೇವಿಸಿದ್ದಾರೆ ಎಂದು ವೈದ್ಯಾಧಿಕಾರಿ ಶಂಕಿಸಿದ್ದಾರೆ. ಅದರಂತೆ ಗಡ್ಚಿರೋಲಿ ಪೊಲೀಸರು ತನಿಖೆ ಆರಂಭಿಸಿದ್ದು, ಸಂಘಮಿತ್ರನನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಐಇ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ಆ ಮನೆಯಲ್ಲಿ ಯಾವುದೇ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸದ ಏಕೈಕ ವ್ಯಕ್ತಿಯಾಗಿದ್ದರಿಂದ ಆಕೆಯ ಪಾತ್ರದ ಬಗ್ಗೆ ನಮಗೆ ಅನುಮಾನವಿದೆ” ಮತ್ತು ತನಿಖಾಧಿಕಾರಿ ಹೇಳಿದ್ದಾರೆ.

ವಿಚಾರಣೆ ವೇಳೆ ಮಹಿಳೆ ತಪ್ಪೊಪ್ಪಿಕೊಂಡಿದ್ದು, ರಾಮಟಿಕೆ ಪಾತ್ರವನ್ನು ಬಹಿರಂಗಪಡಿಸಿದ್ದಾಳೆ. ರಾಮಟಿಕೆ ಅವರನ್ನು ಠಾಣೆಗೆ ಕರೆದೊಯ್ದಿದ್ದು, ಅವರು ಉರಾಡೆಯ ಆಹಾರದಲ್ಲಿ ವಿಷವನ್ನು ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ, ಅವರ ಚಾಲಕ ಸೇರಿದಂತೆ ಇತರ ಮೂವರು ವ್ಯಕ್ತಿಗಳು ಕೂಡ ಇದೇ ರೀತಿ ವಿಷ ಸೇವಿಸಿದ್ದಾರೆ. ಅವರು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ