Crime News: ಅಜ್ಜನೇ ಮೊಮ್ಮಗಳ ಮಗುವಿನ ತಂದೆ: 200 ವರ್ಷಗಳ ಜೈಲು ಶಿಕ್ಷೆ..!

| Updated By: ಝಾಹಿರ್ ಯೂಸುಫ್

Updated on: Jul 18, 2022 | 6:05 PM

Crime News in Kannada; 2019ರಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಬಿಡುಗಡೆ ಮಾಡಲಾದ ವರದಿಯಲ್ಲಿ ತಿಳಿಸಿರುವಂತೆ, ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದೆ.

Crime News: ಅಜ್ಜನೇ ಮೊಮ್ಮಗಳ ಮಗುವಿನ ತಂದೆ: 200 ವರ್ಷಗಳ ಜೈಲು ಶಿಕ್ಷೆ..!
ಸಾಂದರ್ಭಿಕ ಚಿತ್ರ
Follow us on

ದಿನನಿತ್ಯವೂ ನೀವು ಅತ್ಯಾಚಾರಕ್ಕೆ ಸಂಬಂಧಿತ ಸುದ್ದಿಗಳನ್ನು ಓದಿರುತ್ತೀರಿ. ಆದರೆ ಅದರಲ್ಲಿ ಎಷ್ಟು ಮಂದಿಗೆ ಶಿಕ್ಷೆಯಾಗಿದೆ ಎಂದು ಕೇಳಿದ್ರೆ ಉತ್ತರ ಮಾತ್ರ ಸಿಗಲ್ಲ. ಇನ್ನು ಶಿಕ್ಷೆಯಾದರೂ, ಅಷ್ಟರಲ್ಲಾಗಲೇ ವರ್ಷಗಳೇ ಕಳೆದಿರುತ್ತವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಹಾಗೆ ಆಗಲಿಲ್ಲ. ಬದಲಾಗಿ ಆರೋಪ ಸಾಬೀತಾಗುತ್ತಿದ್ದಂತೆ ಹಿಂದು ಮುಂದು ನೋಡದೇ ನ್ಯಾಯಾಲಯ 200 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಅಂದರೆ ಅತ್ಯಾಚಾರಿ ಜೈಲಿನಿಂದ ಹೊರಬರುವುದೇ ಇಲ್ಲ ಎನ್ನಬಹುದು. ಇಂತಹದೊಂದು ತೀರ್ಪು ನೀಡಿದ್ದು ಅಮೆರಿಕದ ಸ್ಟಾನ್ಸ್‌ವಿಲ್ಲೆ ನ್ಯಾಯಾಲಯ.

ಯುಎಸ್‌ನ ಮೊಂಟಾನಾ ಬಳಿಯ ಸ್ಟಾನ್ಸ್‌ವಿಲ್ಲೆ ನಿವಾಸಿಯಾಗಿರುವ 55 ವರ್ಷದ ವ್ಯಕ್ತಿಯು ತನ್ನ 11 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದನು. ಆದರೆ ಈ ವಿಚಾರವನ್ನು ಬಹಿರಂಗಪಡಿಸದಂತೆ ಬೆದರಿಕೆಯೊಡ್ಡಿದ್ದ. ಆದರೆ ಬಾಲಕಿಯಲ್ಲಿ ದೈಹಿಕ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಪೋಷಕರು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಹುಡುಗಿಯು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದೇ ವೇಳೆ ಡಾಕ್ಟರ್​ ಬಾಲಕಿಯನ್ನು ದೈಹಿಕ ಸಂಬಂಧ ಏರ್ಪಟ್ಟಿದ್ದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಯ್​ ಫ್ರೆಂಡ್ ಜೊತೆಗಿನ ಬಂಧವನ್ನು ಹೇಳಿಕೊಂಡಿದ್ದಾಳೆ. ಆದರೆ ಬಾಲಕಿಯ ಗರ್ಭವತಿಯಾದ ದಿನಾಂಕಕ್ಕೂ, ಬಾಯ್​ ಫ್ರೆಂಡ್​ ಜೊತೆಗಿನ ಸಂಬಂಧದ ದಿನಾಂಕಕ್ಕೂ ತಾಳೆಯಾಗುತ್ತಿರಲಿಲ್ಲ. ಈ ಬಗ್ಗೆ ವೈದ್ಯರು ಪೋಷಕರಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಅದರಂತೆ ಬಾಲಕಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ, ಅಜ್ಜ ತನ್ನನ್ನು ಬಳಸಿಕೊಳ್ಳುತ್ತಿರುವ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. ಅಂದರೆ ಮೊಮ್ಮಗಳ ಹೊಟ್ಟೆಯಲ್ಲಿ ಅಜ್ಜನ ಮಗು ಬೆಳೆಯುತ್ತಿತ್ತು. ಈ ವಿಚಾರ ಕೇಳಿ ಪೋಷಕರೇ ದಂಗಾಗಿದ್ದಾರೆ. ಅಲ್ಲದೆ ಈ ಬಗ್ಗೆ ಮೊಂಟಾನಾ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ 55 ವರ್ಷದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದಾಗ ಅಜ್ಜನು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸ್ಟಾನ್ಸ್‌ವಿಲ್ಲೆ ನ್ಯಾಯಾಲಯವು 200 ವರ್ಷಗಳ ಕಾಲ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ 50 ವರ್ಷಗಳವರೆಗೆ ಯಾವುದೇ ಪರೋಲ್ ನೀಡದಂತೆ ಪೊಲೀಸರಿಗೆ ಸೂಚಿಸಿದೆ.

ಅಂದರೆ 55 ವರ್ಷದ ಮುದುಕನು ಮುಂದಿನ 50 ವರ್ಷಗಳ ಕಾಲ ಪೆರೋಲ್ ಇಲ್ಲದೆ ಜೈಲಿನಲ್ಲಿ ಕಳೆಯಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರ ನಂತರ 150 ವರ್ಷಗಳ ಕಾಲ ಸೆರೆಮನೆಯಲ್ಲೇ ಇರಬೇಕಾಗುತ್ತದೆ. ಸ್ಟಾನ್ಸ್‌ವಿಲ್ಲೆ ನ್ಯಾಯಾಲಯ ನೀಡಿರುವ ಈ ತೀರ್ಪು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಅತ್ಯಾಚಾರಿಗಳಿಗೆ ಯಾವುದೇ ರೀತಿಯಲ್ಲೂ ಪೆರೋಲ್ ಅನ್ನು ಅನುಮತಿಸುವುದಿಲ್ಲ ಎಂದು ಸ್ಟಾನ್ಸ್‌ವಿಲ್ಲೆ ನ್ಯಾಯಾಲಯ ತನ್ನ ತೀರ್ಪನ್ನು ಎತ್ತಿ ಹಿಡಿದಿದೆ.

ಇದು ದೂರದ ಅಮೆರಿಕಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಷಯವಾದರೆ, ಇತ್ತ ಭಾರತದಲ್ಲಿ ಇದಕ್ಕಿಂತಲೂ ಆಘಾತಕಾರಿ ಸುದ್ದಿಯೊಂದಿದೆ. ಅದೇನೆಂದರೆ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆದಿದೆ ಎಂದು ಸರ್ಕಾರವೇ ತಿಳಿಸಿದೆ. ಅಂದರೆ 2019ರಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಬಿಡುಗಡೆ ಮಾಡಲಾದ ವರದಿಯಲ್ಲಿ ತಿಳಿಸಿರುವಂತೆ, ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದೆ. ಈ ವೇಳೆ ಮಹಿಳೆಯರ ಮೇಲೆ 32,033 ಅತ್ಯಾಚಾರ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ (ಎನ್​ಸಿಆರ್​ಬಿ) ತಿಳಿಸಿದೆ. ಅಂದರೆ 2019 ರಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು ಎಂಬುದೇ ಆಘಾತಕಾರಿ ವಿಷಯ.

 

 

Published On - 5:54 pm, Mon, 18 July 22