ಮಂಗಳೂರು: ಸುಲ್ತಾನ್​ ಜ್ಯುವೆಲರಿ ಶಾಪ್​ನಲ್ಲಿ ನೈತಿಕ ಪೊಲೀಸ್​ಗಿರಿ ನಡೆಸಿದ ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ಲವ್ ಜಿಹಾದ್ ಆರೋಪದ ಮೇಲೆ ಸುಲ್ತಾನ್​ ಜ್ಯುವೆಲರಿ ಶಾಪ್​ನಲ್ಲಿ ನೈತಿಕ ಪೊಲೀಸ್​ಗಿರಿ ಪ್ರಕರಣದ ಬೆನ್ನೆಲ್ಲೆ ತಡರಾತ್ರಿ ಸುತ್ತಾಡುತ್ತಿದ್ದ ಅನ್ಯಕೋಮಿನ ಜೋಡಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.

ಮಂಗಳೂರು: ಸುಲ್ತಾನ್​ ಜ್ಯುವೆಲರಿ ಶಾಪ್​ನಲ್ಲಿ ನೈತಿಕ ಪೊಲೀಸ್​ಗಿರಿ ನಡೆಸಿದ ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ
ಮಂಗಳೂರು: ಸುಲ್ತಾನ್​ ಜ್ಯುವೆಲರಿ ಶಾಪ್​ನಲ್ಲಿ ನೈತಿಕ ಪೊಲೀಸ್​ಗಿರಿ ನಡೆಸಿದ ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ
Follow us
TV9 Web
| Updated By: Rakesh Nayak Manchi

Updated on: Dec 11, 2022 | 2:24 PM

ಮಂಗಳೂರು: ಲವ್ ಜಿಹಾದ್ ಆರೋಪದ ಮೇಲೆ ಸುಲ್ತಾನ್​ ಜ್ಯುವೆಲರಿ ಶಾಪ್​ (Sultan Jewellery Shop)ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ (Moral policing) ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಬಜರಂಗದಳ (Bajaranga Dal)ದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಶಿಬಿನ್, ಗಣೇಶ್, ಪ್ರಕಾಶ್, ಚೇತನ್ ಎಂಬವರನ್ನು ಕದ್ರಿ ಠಾಣಾ ಪೊಲೀಸರು (Kadri Police Station) ಬಂಧಿಸಿದ್ದಾರೆ. ಲವ್​ ಜಿಹಾದ್​ (Love Jihad) ಆರೋಪದಡಿ ಡಿ.6ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕಂಕನಾಡಿಯ ಜ್ಯುವೆಲರಿ ಶಾಪ್​ಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು ಯುವನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಸುಲ್ತಾನ್ ಗೋಲ್ಡ್​ ಸೇಲ್ಸ್ ಆಫೀಸರ್ ಫೈಝಲ್ ನೀಡಿದ ದೂರಿನ ಅನ್ವಯ ಕದ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 448, 504, 143, 147, 149ರಡಿ ಎಫ್​ಐಆರ್ ದಾಖಲಾಗಿತ್ತು.

ಸುಲ್ತಾನ್ ಜ್ಯುವೆಲರಿ ಶಾಪ್​ನಲ್ಲಿ ಅನ್ಯಕೋಮಿನ ಜೋಡಿಯೊಂದು ಕೆಲಸ ಮಾಡುತ್ತಿತ್ತು. ಇಬ್ಬರು ಒಟ್ಟಿಗೆ ಇದ್ದ ಹಿನ್ನೆಲೆ ಯುವತಿ ಮನೆಯವರು ಶಾಪ್​ಗೆ ಆಗಮಿಸಿ ಬಂಟ್ವಾಳ ಮೂಲದ ಮುಸ್ಲಿಂ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಶಾಪ್​ಗೆ ದೌಡಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಲವ್ ಜಿಹಾದ್ ಆರೋಪದಡಿ ಯುವಕಿನಗೆ ಥಳಿಸಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ: ಜ್ಯುವೆಲರಿ ಶಾಪ್​ನಲ್ಲಿ ಅನ್ಯಕೋಮಿನ ಜೋಡಿಗೆ ಥಳಿತ, ಮೂರು ಪ್ರಕರಣ ದಾಖಲು

ಮಂಗಳೂರಿನಲ್ಲಿ ಮತ್ತೊಂದು ಪೊಲೀಸ್ ನೈತಿಕ ಗಿರಿ

ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಲೇ ಇದೆ. ಇದೀಗ ತಡರಾತ್ರಿ ಹಿಂದೂ-ಮುಸ್ಲಿಂ ಜೋಡಿ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಕೊಟ್ಟಾರ ಎಂಬಲ್ಲಿ ನಿನ್ನೆ (ಡಿ.10) ರಾತ್ರಿ ಮುಸ್ಲಿಂ ಯುವಕರ ಜೊತೆ ಇಬ್ಬರು ಹಿಂದೂ ಯುವತಿಯರು ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಡ್ಡಹಾಕಿದ ಬಜರಂಗದಳದ ಕಾರ್ಯಕರ್ತರು ಪ್ರಶ್ನಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ: Moral Policing: ಕಾಂತಾರ ವೀಕ್ಷಿಸಲು ಥಿಯೇಟರ್​ಗೆ ಬಂದ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್​ಗಿರಿ, ಹಲ್ಲೆಗೆ ಯತ್ನಿಸಿದ್ದ ವಿಡಿಯೊ ವೈರಲ್

moral policing

ತಡರಾತ್ರಿ ಸುತ್ತಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ತಡೆದ ಬಜರಂಗದಳದ ಕಾರ್ಯಕರ್ತರು

ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಎಂಬಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಹಿಂದೂ ಯುವತಿಯರು ಮತ್ತು ಮುಸ್ಲಿಂ ಯುವಕರು ಸತ್ತಾಡುತ್ತಿದ್ದರು. ಈ ವೇಳೆ ತಡೆದ ಭಜರಂಗದಳದ ಕಾರ್ಯಕರ್ತರು ಪ್ರಶ್ನಿಸಿದಾಗ ಹೊಟೇಲ್​ಗೆ ಊಟ ಮಾಡಲು ಬಂದಿರುವುದಾಗಿ ಹೇಳಿದ್ದಾರೆ. ಈ ವೇಳೆ ಆಕ್ರೋಶಗೊಂಡ ಕಾರ್ಯಕರ್ತರು, ಮಧ್ಯರಾತ್ರಿ ಯಾವ ಹೊಟೇಲ್ ಇದೆ ಅಂತ ಹೇಳಿ ಹಲ್ಲೆಗೆ ಯತ್ನ ನಡೆಸಿದ್ದಾರೆ. ಇನ್ನು ನೈತಿಕ ಪೊಲೀಸ್ ಗಿರಿಯ ಮಾಹಿತಿ ಪಡೆದ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲದೆ, ಅನ್ಯಕೋಮಿನ ಜೋಡಿ ಠಾಣೆಗೆ ತೆರಳಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!