ನೆಲಮಂಗಲ: ಹಾಡುಹಗಲೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ ದುಷ್ಕರ್ಮಿಗಳು
ಫೆಬ್ರವರಿ 7 ರಂದು ಬೆಳಿಗ್ಗೆ 8:45ರ ಸುಮಾರಿಗೆ ಇಬ್ಬರು ಅಪರಿಚಿತರು ಹರಿಹಂತ್ ಜ್ಯುವೆಲರ್ಸ್ ಅಂಗಡಿಗೆ ಬಂದಿದ್ದಾರೆ. ಇವರ ನಂತರ ಕೆಲ ಸಮಯದ ಬಳಿಕ ಇನ್ನಿಬ್ಬರು ಅಂಗಡಿಯೊಳಗೆ ನುಗ್ಗಿದ್ದಾರೆ. ಇವರೊಲ್ಲಬ್ಬ ಏಕಾಏಕಿ ಪ್ಯಾಂಟ್ನಿಂದ ಪಿಸ್ತೂಲ್ ಅನ್ನು ತೆಗೆದು ಕಿರುಚಿಕೊಳ್ಳಬೇಡ ಎಂದು ಹೇಳುತ್ತಾ ವಿಷ್ಣು ಅವರನ್ನು ಹಿಡಿದುಕೊಳ್ಳಲು ಮುಂದಾದ. ಮುಂದೇನಾಯ್ತು ಈ ಸ್ಟೋರಿ ಓದಿ...
ನೆಲಮಂಗಲ, ಫೆಬ್ರವರಿ 10: ನಾಲ್ವರು ದುಷ್ಕರ್ಮಿಗಳು ಹಾಡುಹಗಲೆ ಪಿಸ್ತೂಲ್ ತೋರಿಸಿ ಚಿನ್ನಭರಣ (Gold) ದೋಚಲು ಯತ್ನಿಸಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. ಫೆಬ್ರವರಿ 7 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ IPC 393 ಕಲಂ 27(1) ಆರ್ಮ್ಸ್ ಆಕ್ಟ್ 1959ರ ಅಡಿ ಪ್ರಕರಣ ದಾಖಲಾಗಿದೆ.
ಫೆಬ್ರವರಿ 7 ರಂದು ಬೆಳಿಗ್ಗೆ 8:45ರ ಸುಮಾರಿಗೆ ಇಬ್ಬರು ಅಪರಿಚಿತರು ಹರಿಹಂತ್ ಜ್ಯುವೆಲರ್ಸ್ ಅಂಗಡಿಗೆ ಬಂದಿದ್ದಾರೆ. ಇದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಅಲಿಯಾಸ್ ಮಾಣಕ್ ರಾಮ್ (22 ವರ್ಷ) ಎಂಬ ಯುವಕನಿಗೆ ಮಾರ್ವಾಡಿ ಭಾಷೆಯಲ್ಲಿ ಯಾವ ಊರು ಎಂದು ಕೇಳಿದ್ದಾರೆ. ಅದಕ್ಕೆ ವಿಷ್ಣು ರಾಜಸ್ಥಾನದ ಅಸ್ಸಾವರಿಯವ ಎಂದು ಹೇಳಿದ್ದಾರೆ. ಬಳಿಕ ಆರೋಪಿಗಳು ವಿಷ್ಣುಗೆ ಬೆಳ್ಳಿಯ ಬ್ರೇಸ್ ಲೆಟ್ ತೋರಿಸು ಎಂದು ಹೇಳಿದ್ದಾರೆ. ಸರಿ ಎಂದು, ವಿಷ್ಣು ಬ್ರೇಸ್ ಲೇಟ್ ತೋರಿಸಲು ಷೋ ಕೇಸ್ನಿಂದ ತೆಗೆಯುವ ಸಮಯದಲ್ಲಿ ಇನ್ನಿಬ್ಬರು ಅಂಗಡಿಯೊಳಗೆ ನುಗ್ಗಿದ್ದಾರೆ.
ಇದನ್ನೂ ಓದಿ: ನೀವು ಮನೆಯಲ್ಲಿ ಒಂಟಿಯಾಗಿ ಇರುತ್ತೀರಾ? ಹಾಗಿದ್ರೆ ಎಚ್ಚರ! ಹಾಡಹಗಲೇ ಮನೆಗೆ ನುಗ್ಗಿ ದರೋಡೆ, ಓರ್ವ ಅರೆಸ್ಟ್
ಇವರೊಲ್ಲಬ್ಬ ಏಕಾಏಕಿ ಪ್ಯಾಂಟ್ನ ಸೊಂಟದ ಪಟ್ಟಿಯ ಹೊಟ್ಟೆಯ ಬಳಿ ಸಿಕ್ಕಿಸಿಕೊಂಡಿದ್ದ ಪಿಸ್ತೂಲ್ ಅನ್ನು ತೆಗೆದು ಕಿರುಚಿಕೊಳ್ಳಬೇಡ ಎಂದು ಹೇಳುತ್ತಾ ವಿಷ್ಣು ಅವರನ್ನು ಹಿಡಿದುಕೊಳ್ಳಲು ಮುಂದಾದ. ಆಗ ವಿಷ್ಣು ಲಾಕರ್ ಇರುವ ಸೇವಿ ರೂಂನೊಳಗೆ ಹೋಗಿ ಬಾಗಿಲು ಹಾಕಿಕೊಂಡರು. 2-3 ನಿಮಿಷ ಏನೂ ಶಬ್ದ ಬರದ ಕಾರಣ ವಿಷ್ಣು ಹೊರಗೆ ಬಂದು ನೋಡಿದ್ದು, ನಾಲ್ವರು ಅಪರಿಚಿತರು ಇರಲಿಲ್ಲ. ಬಳಿಕ ಅಂಗಡಿಯಲ್ಲಿನ ವಸ್ತುಗಳನ್ನು ನೋಡಿದಾಗ, ಯಾವ ವಸ್ತುಗಳು ಕಳವಾಗಿರುವುದಿಲ್ಲ. ಬಳಿಕ ವಿಷ್ಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ನಾಲ್ವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ