ರೈಲ್ವೆ ಹಳಿಗೆ ಸಿಲುಕಿ ಮಹಿಳೆಯ ಕಾಲು ಕಟ್; ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಮುಂಬೈನಲ್ಲಿ ಮಹಿಳೆಯೊಬ್ಬರ ಪ್ರಾಣ ಉಳಿಸಲು ಲೋಕೊ ಪೈಲಟ್ ರೈಲನ್ನು ಹಳಿಯ ಮೇಲೆ ರಿವರ್ಸ್ ಓಡಿಸಿರುವ ಘಟನೆ ನಡೆದಿದೆ. ಆದರೆ, ಈ ಅಪಘಾತದಲ್ಲಿ ಮಹಿಳೆಯ ಎರಡೂ ಕಾಲುಗಳಿಗೆ ತೀವ್ರ ಪೆಟ್ಟಾಗಿ ಕಟ್ ಆಗಿದೆ. ರೈಲು ನಿಲ್ದಾಣ ಪ್ರವೇಶಿಸಿದ ಕೂಡಲೇ ಮಹಿಳೆ ಕಾಲು ಜಾರಿ ರೈಲು ಹಳಿ ಮೇಲೆ ಬಿದ್ದಿದ್ದಾಳೆ ಎನ್ನಲಾಗಿದೆ. ಆಗಲೇ ರೈಲು ಅವಳ ಮೇಲೆ ಹಾದು ಹೋಗಿದೆ.

ರೈಲ್ವೆ ಹಳಿಗೆ ಸಿಲುಕಿ ಮಹಿಳೆಯ ಕಾಲು ಕಟ್; ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು ಜೀವ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Jul 08, 2024 | 4:54 PM

ಮುಂಬೈ: ಮುಂಬೈನ ಬೇಲಾಪುರ ನಿಲ್ದಾಣದಲ್ಲಿ ಇಂದು (ಸೋಮವಾರ) ರೈಲಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಜಾರಿ ಬಿದ್ದು, ರೈಲು ಮತ್ತು ಹಳಿಯ ಮಧ್ಯದಲ್ಲಿ ಸಿಲುಕಿದ್ದಾರೆ. ಇದಾದ ಇದರಿಂದ ಆಕೆಯ ಕಾಲಿಗೆ ತೀವ್ರ ಗಾಯಗಳಾಗಿವೆ. ಒಂದುವೇಳೆ ರೈಲು ಮುಂದೆ ಚಲಿಸಿದ್ದರೆ ಆಕೆಯ ಪ್ರಾಣ ಹೋಗುತ್ತಿತ್ತು. ಆದ್ದರಿಂದ ಆಕೆಯ ಜೀವ ಉಳಿಸಲು ಲೊಕೊ ಪೈಲಟ್ ರೈಲನ್ನು ಹಿಮ್ಮುಖವಾಗಿ ಚಲಿಸಿದ್ದಾರೆ. ಆಗ ಆ ಮಹಿಳೆಯನ್ನು ಹಳಿಯಿಂದ ಮೇಲೆತ್ತಿ ಆಕೆಯ ಜೀವವನ್ನು ಉಳಿಸಲಾಯಿತು.

ಮಾಹಿತಿಯ ಪ್ರಕಾರ, ಪನ್ವೇಲ್​ನಿಂದ ರೈಲ್ವೆ ಸ್ಟೇಷನ್​ಗೆ ಹೋಗುತ್ತಿದ್ದಾಗ ಬೇಲಾಪುರ ಸಿಬಿಡಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಕಾಲು ಜಾರಿ ರೈಲು ಹಳಿ ಮೇಲೆ ಬಿದ್ದಿದ್ದಾರೆ. ಅಷ್ಟರಲ್ಲಿ ರೈಲಿನ ಮೊದಲ ಮಹಿಳಾ ಕೋಚ್ ಆಕೆಯನ್ನು ದಾಟಿ ಹೋಯಿತು. ಇದು ಪ್ರಯಾಣಿಕರು ಮತ್ತು ರೈಲ್ವೆ ಆಡಳಿತದಲ್ಲಿ ಆತಂಕ ಮೂಡಿಸಿತು. ನಂತರ ರೈಲ್ವೆ ಪೈಲಟ್ ರೈಲನ್ನು ಹಿಂದಕ್ಕೆ ಸರಿಸಿದ್ದರಿಂದ ಆ ಮಹಿಳೆಯ ಪ್ರಾಣ ಉಳಿಯಿತು. ಆದರೆ ಆ ಮಹಿಳೆಯ ಎರಡೂ ಕಾಲುಗಳು ಕಟ್ ಆಗಿವೆ.

ಇದನ್ನೂ ಓದಿ: Kanchanjungha Express: ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು

ಪನ್ವೇಲ್‌ನಿಂದ ಥಾಣೆಗೆ ತೆರಳುತ್ತಿದ್ದ ರೈಲು ಬೇಲಾಪುರ ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ಗೆ ಬರುತ್ತಿತ್ತು. ಅಲ್ಲಿ ಒಬ್ಬರು ಮಹಿಳೆ ರೈಲಿಗಾಗಿ ಕಾಯುತ್ತಾ ನಿಂತಿದ್ದರು. ರೈಲು ಬರುವಾಗ 50 ವರ್ಷದ ಮಹಿಳೆಯೊಬ್ಬರು ರೈಲು ಹಳಿ ಮೇಲೆ ಜಾರಿ ಬಿದ್ದರು. ಅಷ್ಟರಲ್ಲಾಗಲೇ ರೈಲು ಮಹಿಳೆಯ ಮೇಲೆ ಹಾದು ಹೋಗಿತ್ತು. ಆ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್