ವರದಕ್ಷಿಣೆ ಕಿರುಕುಳ ಆರೋಪ: ಹೆಂಡತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

ಕೆ.ಆರ್‌.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಪತಿ ವರದಕ್ಷಿಣೆ ಸಂಬಂಧ ಪತ್ನಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ.

ವರದಕ್ಷಿಣೆ ಕಿರುಕುಳ ಆರೋಪ: ಹೆಂಡತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ
ಸಾಂಧರ್ಬಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Sep 13, 2022 | 3:10 PM

ಮೈಸೂರು: ಕೆ.ಆರ್‌.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಪತಿ ವರದಕ್ಷಿಣೆ ಸಂಬಂಧ ಪತ್ನಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ರಾಜೇಶ್ವರಿ(28) ಪತ್ನಿ ಮೃತಪಟ್ಟಿದ್ದಾಳೆ. ಘಟನೆ ವೇಳೆ ಪತಿಗೂ ಸುಟ್ಟ ಗಾಯಗಳಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪತಿ ಹರೀಶ್, ಪತ್ನಿ ರಾಜೇಶ್ವರಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ವಿಷಯ ತಿಳಿದು ಕೂಡಲೆ ಪಕ್ಕದ ಮನೆಯವರು ಬಂದು ಬೆಂಕಿ ನಂದಿಸುವ ಹೊತ್ತಿಗೆ ಇಬ್ಬರಿಗೂ ಸುಟ್ಟಗಾಯಗಳಾಗಿದ್ದವು. ಮೃತ ರಾಜೇಶ್ವರಿ ತಂದೆ ಸೋಮಶೇಖರ್‌ ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಡಿಕೇರಿಯ ಪೆಟ್ರೋಲ್​ಬಂಕ್​ನಲ್ಲಿ ಹಾಡ ಹಗಲೆ ಕಳ್ಳತನ

ಮಡಿಕೇರಿ: ಮಡಿಕೇರಿಯ ಈಸ್ಟ್ ಎಂಡ್ ಪೆಟ್ರೋಲ್​ಬಂಕ್​ನಲ್ಲಿ ಹಾಡ ಹಗಲೆ ಬಾಲಕ ಕ್ಯಾಶ್ ಕೌಂಟರ್​ನಿಂದ 70 ಸಾವಿರ ಕಳವು ಮಾಡಿದ್ದಾನೆ. ಕ್ಯಾಶ್ ಕೌಂಟರ್​ನಿಂದ ಕ್ಯಾಶಿಯರ್ ಹೊರ ತೆರಳಿದ್ದ ವೇಳೆ ಹಣ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಬಂಕ್ ಮಾಲಿಕರಿಂದ‌ ಪೊಲೀಸರಿಗೆ ದೂರು ನೀಡಲಾಗಿದೆ.
ಪೊಲೀಸರು ಆರೋಪಿ ಬಾಲಕನನ್ನ ಹಿಡಿದಿದ್ದು, ಬಾಲಕ ಕಳ್ಳತನದ ಹಣದಲ್ಲಿ ಮೊಬೈಲ್, ಬಟ್ಟೆ ಖರೀದಿಸಿದ್ದನು. ಮಡಿಕೇರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Tue, 13 September 22

TV9 Web

TV9 Kannada

Read More
Loading...
Unable to load recommendations.
Follow Us