ಬೆಂಗಳೂರು: ಐಷಾರಾಮಿ ಕಾರಿನಲ್ಲಿ ಸ್ಪೀಡಾಗಿ ಬಂದು ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ. Audi R8ಕಾರಿನಲ್ಲಿ ಆಟೋ ಸೇರಿದಂತೆ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಚಾಲಕ ಮೊಹಮ್ಮದ್ ಸದ್ದಾಂ ಎಂಬಾತನನ್ನು ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಏನಿದು ಪ್ರಕರಣ?
ಫೆಬ್ರವರಿ 7ರಂದು ಸದ್ದಾಂ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಆಗ, ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಇದೀಗ, CCTV ದೃಶ್ಯಾವಳಿ ಆಧರಿಸಿ ಖಾಕಿ ಪಡೆ Audi R8 ಕಾರು ಹಾಗೂ ಚಾಲಕ ಸದ್ದಾಂನನ್ನು ಪತ್ತೆ ಹಚ್ಚಿದ್ದಾರೆ. ಮೊಹಮ್ಮದ್ ಸದ್ದಾಂ BTM ಲೇಔಟ್‌ನ 2ನೇ ಹಂತದ ನಿವಾಸಿ.
ಇದನ್ನೂ ಓದಿ: ಆಟೋ, ಡಿಯೋ ಸ್ಕೂಟರ್ಗೆ ಲ್ಯಾಂಬೋರ್ಗಿನಿ ಕಾರ್ ಡಿಕ್ಕಿ: ಅಪಘಾತವೆಸಗಿದ ಚಾಲಕ ಶರವೇಗದಲ್ಲಿ ಎಸ್ಕೇಪ್