AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರದಕ್ಷಿಣೆಗಾಗಿ ತುಂಬು ಗರ್ಭಿಣಿ ಮಹಿಳೆಗೆ ಹೊಡೆದು ಕೊಲೆ!

ಉತ್ತರ ಪ್ರದೇಶದಲ್ಲಿ ಭೀಕರ ಕೊಲೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವರದಕ್ಷಿಣೆಯ ಕಿರುಕುಳದಿಂದ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿಯೇ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ನಂತರ ಪತಿ ಮತ್ತು ಆತನ ಸಂಬಂಧಿಕರು ಗರ್ಭಿಣಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ.

ವರದಕ್ಷಿಣೆಗಾಗಿ ತುಂಬು ಗರ್ಭಿಣಿ ಮಹಿಳೆಗೆ ಹೊಡೆದು ಕೊಲೆ!
Pregnant
ಸುಷ್ಮಾ ಚಕ್ರೆ
|

Updated on: Oct 06, 2025 | 7:49 PM

Share

ನವದೆಹಲಿ, ಅಕ್ಟೋಬರ್ 6: ಉತ್ತರ ಪ್ರದೇಶದಲ್ಲಿ ಹೆಚ್ಚುವರಿ ವರದಕ್ಷಿಣೆ ಹಣವನ್ನು ನೀಡಲಿಲ್ಲವೆಂದು ಗರ್ಭಿಣಿಯನ್ನು (Pregnant) ಆಕೆಯ ಪತಿ ಮತ್ತು ಕುಟುಂಬದವರು ಕೊಂದ ಘಟನೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಹೆಚ್ಚುವರಿ 5 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ನಂತರ ಪತಿ ಮತ್ತು ಅವರ ಕುಟುಂಬದವರು ಗರ್ಭಿಣಿಯನ್ನು ಕೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ವರದಕ್ಷಿಣೆ ಹಿಂಸೆಯಿಂದ ನರಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೆಲವರು ಆತ್ಮಹತ್ಯೆಯ ಮಾರ್ಗವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವೆಡೆ ಮಹಿಳೆಯರನ್ನು ಕ್ರೂರವಾಗಿ ಕೊಲೆ ಮಾಡಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ಬಳಿಕ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಮತ್ತು ಅವರ ಕುಟುಂಬದವರು ಕೊಂದಿದ್ದಾರೆ. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಗೋಪಾಲಪುರ ಗ್ರಾಮದ ರಜನಿ ಕುಮಾರಿ (21) ಎಂಬ ಮಹಿಳೆ ಸಿಚಿನ್ ಅದೇ ಪ್ರದೇಶದವಳು. ಈಗ ರಜನಿ ಕುಮಾರಿ ಗರ್ಭಿಣಿ. ಮದುವೆಗೆ ಮಹಿಳೆಯ ಕುಟುಂಬವು ವರದಕ್ಷಿಣೆಯಾಗಿ ಚಿನ್ನ ಮತ್ತು ಹಣವನ್ನು ನೀಡಿತ್ತು.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ದೇಶದಲ್ಲೇ ಬೆಂಗಳೂರು ಟಾಪ್! ಆಘಾತಕಾರಿ ವರದಿ ಬಹಿರಂಗ

ಆದರೆ, ಆಕೆಯ ಪತಿ ಸಚಿನ್ ಮತ್ತು ಆತನ ಸಹೋದರರು ಹೆಚ್ಚುವರಿ ವರದಕ್ಷಿಣೆಗಾಗಿ ರಜನಿ ಕುಮಾರಿಗೆ ಕಿರುಕುಳ ನೀಡುತ್ತಿದ್ದರು. ಆಕೆಯ ಪತಿ ಸಚಿನ್ ಮನೆ ಕಟ್ಟಲು 5 ಲಕ್ಷ ರೂ. ಹಣ ಕೇಳುತ್ತಿದ್ದರು. ನಿನ್ನೆ ಕೂಡ ಅವರು ಮತ್ತೆ ರಜನಿ ಕುಮಾರಿಯಿಂದ 5 ಲಕ್ಷ ರೂ. ಕೇಳಿದರು. ಆ ಸಮಯದಲ್ಲಿ, ರಜನಿ ಕುಮಾರಿ ಅದನ್ನು ನೀಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಆಕೆಯ ಪತಿ ಸಚಿನ್ ಮತ್ತು ಅವನ ಸಹೋದರರು ರಜನಿ ಕುಮಾರಿಯ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದರು. ಇದರಿಂದ ರಜನಿ ಸಾವನ್ನಪ್ಪಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ