ರಾಯಚೂರು: ವ್ಯಕ್ತಿ ನಾಪತ್ತೆ, 45 ದಿನದ ಬಳಿಕ ಬೆಟ್ಟದಲ್ಲಿ ಬಿದ್ದಿತ್ತು ಆತನ ಮುಂಡ, ದರ್ಗಾ ಬಳಿ ತಲೆ ಬುರುಡೆ ಪತ್ತೆ

ಫೆಬ್ರವರಿ 11 ರಂದು ರಾಯಚೂರು ತಾಲೂಕಿನ ಕೊರ್ತಕುಂದ ಗ್ರಾಮದ ಕೊರ್ತಕುಂದ ಹೊರಭಾಗದ ದರ್ಗಾ ಬಳಿ ತಲೆ ಬುರುಡೆವೊಂದು ಪತ್ತೆಯಾಗಿತ್ತು.ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರದಂದು ಬೆಟ್ಟದ ಮೇಲೆ ಅಸ್ತಿಪಂಜರ ಪತ್ತೆಯಾಗಿದೆ.ಈ ಅಸ್ಥಿಪಂಜರ ಯಾರದ್ದು ಎಂಬ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಅಂಶವೊಂದು ತಿಳಿದಿದೆ.

ರಾಯಚೂರು: ವ್ಯಕ್ತಿ ನಾಪತ್ತೆ, 45 ದಿನದ ಬಳಿಕ ಬೆಟ್ಟದಲ್ಲಿ ಬಿದ್ದಿತ್ತು ಆತನ ಮುಂಡ, ದರ್ಗಾ ಬಳಿ ತಲೆ ಬುರುಡೆ ಪತ್ತೆ
ಪೊಲೀಸರ ತಪಾಸಣೆ, ನಾಪತ್ತೆಯಾದ ವ್ಯಕ್ತಿ ರಸೂಲ್ ಸಾಬ್
Follow us
ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ

Updated on: Feb 14, 2024 | 9:22 AM

ರಾಯಚೂರು, ಫೆಬ್ರವರಿ 14: ರಾಯಚೂರು (Raichur) ತಾಲೂಕಿನ ಕೊರ್ತಕುಂದ ಗ್ರಾಮದ ವ್ಯಕ್ತಿ 45 ದಿನಗಳ ಹಿಂದೆ ನಾಪತ್ತೆಯಾಗಿದ್ದು, ಮಂಗಳವಾರ (ಫೆ.14) ಆತನ ಅಸ್ಥಿಪಂಜರ (Skeleton) ಪತ್ತೆಯಾಗಿದೆ. ಕೊರ್ತಕುಂದ ಗ್ರಾಮದ ರಸೂಲ್ ಸಾಬ್ (45) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. 45 ದಿನಗಳ ಹಿಂದೆ ಹೊಲಕ್ಕೆ ಹೋದ ರಸೂಲ್ ಸಾಬ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದನು. ರಸೂಲ್​ಗಾಗಿ ಕುಟುಂಬಸ್ಥರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ದೇವಸ್ಥಾನ, ದರ್ಗಾಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹುಡುಕಾಡಿದರೂ ರಸೂಲ್ ಸಿಗಲ್ಲಿ. ಕೊನೆಗೆ ಕುಟುಂಬಸ್ಥರು ಕೈಚೆಲ್ಲಿ, ಪೊಲೀಸರಿಗೆ (Police) ದೂರು ನೀಡದೆ ಸುಮ್ಮನಾದರು.

ಇದೆ ಫೆಬ್ರವರಿ 11 ರಂದು ಕೊರ್ತಕುಂದ ಹೊರಭಾಗದ ದರ್ಗಾ ಬಳಿ ತಲೆ ಬುರುಡೆವೊಂದು ಪತ್ತೆಯಾಗಿತ್ತು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರದಂದು ಬೆಟ್ಟದ ಮೇಲೆ ಅಸ್ತಿಪಂಜರ ಪತ್ತೆಯಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರುಸೂಲ್​ ಕುಟುಂಬಸ್ಥರು, ಚಪ್ಪಲಿ, ಬುರುಡೆ ಮೇಲಿನ ಕೂದಲು ಮತ್ತು ಬಟ್ಟೆಯಿಂದ ಗುರುತು ಪತ್ತೆ ಹಚ್ಚಿದ್ದಾರೆ. ರಸೂಲ್​ನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ ಅಸ್ಥಿಪಂಜರ ಪತ್ತೆ ಪ್ರಕರಣ: ಆತ್ಮಹತ್ಯೆಗೆ ಶರಣಾದ ಜಗನ್ನಾಥರೆಡ್ಡಿ ಕುಟುಂಬ? ಡೆತ್​​ ನೋಟ್​ನಿಂದ ರಿವೀಲ್​ ಆಯ್ತು ಹಲವು ಅಂಶ

2 ವರ್ಷದ ಮಗು ಹತ್ಯೆಗೈದು ತಾಯಿ ನೇಣಿಗೆ ಶರಣು

ಕಲಬುರಗಿ: ಎರಡು ವರ್ಷದ ಮಗುವನ್ನು ಹತ್ಯೆಗೈದು ತಾಯಿಯೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ. ವರ್ಷಿತಾ (2) ಶಿವಲೀಲಾ (23) ಮೃತ ದುರ್ದೈವಿಗಳು. ಗಂಡ ಮತ್ತು ಅತ್ತೆಯ ಕಿರುಕುಳದಿಂದ ಶಿವಲೀಲಾ ತವರು ಸೇರಿದ್ದರು. ಶಿವಲೀಲಾ ಎರಡು ದಿನದ ಹಿಂದಷ್ಟೆ ಗಂಡನ ಮನೆಗೆ ಬಂದಿದ್ದರು. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ