ಚಿಲ್ಲರೆ ಕೇಳುತ್ತಲೇ ಹಣ ಎಗರಿಸುತ್ತಿದ್ದ ಫಾರಿನ್ ಕಳ್ಳರು ಅಂದರ್!

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ವಿದೇಶಿಗರ ಹಾವಳಿ ಹೆಚ್ಚಾಗಿದೆ. ಡಗ್ಸ್​ ದಂಧೆ, ದರೋಡೆ ಕೃತ್ಯಗಳನ್ನು ಹೆಚ್ಚಾಗಿ ಮಾಡುತ್ತಿದ್ದ ವಿದೇಶಿಗರು ಇದೀಗ ಚಿಲ್ಲರೆ ಕೇಳೋ ನೆಪದಲ್ಲಿ ಹಣದ ಬಂಡಲ್​ ಅನ್ನೇ ಎಗರಿಸುತ್ತಿದ್ದಾರೆ. ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದ ಫಾರಿನ್ ನಯ ವಂಚಕರ ಗ್ಯಾಂಗ್‌ ಅನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಸೈಯದ್, ಶಬ್ಬೀರ್ ಬಂಧಿತ ಆರೋಪಿಗಳು. ಇರಾನ್​ ದೇಶದಿಂದ ಟೂರಿಸ್ಟ್ ವೀಸಾದಲ್ಲಿ ಬಂದಿದ್ದ ಆರೋಪಿಗಳು ಗಮನ ಬೇರೆಡೆ ಸೆಳೆದು ಕೃತ್ಯ ಎಸಗುತ್ತಿದ್ದರು. ವಿಮಾನದಲ್ಲೇ ಹೆಚ್ಚಾಗಿ ಓಡಾಡುತ್ತಿದ್ದ […]

ಚಿಲ್ಲರೆ ಕೇಳುತ್ತಲೇ ಹಣ ಎಗರಿಸುತ್ತಿದ್ದ ಫಾರಿನ್ ಕಳ್ಳರು ಅಂದರ್!
sadhu srinath

|

Feb 10, 2020 | 10:55 AM

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ವಿದೇಶಿಗರ ಹಾವಳಿ ಹೆಚ್ಚಾಗಿದೆ. ಡಗ್ಸ್​ ದಂಧೆ, ದರೋಡೆ ಕೃತ್ಯಗಳನ್ನು ಹೆಚ್ಚಾಗಿ ಮಾಡುತ್ತಿದ್ದ ವಿದೇಶಿಗರು ಇದೀಗ ಚಿಲ್ಲರೆ ಕೇಳೋ ನೆಪದಲ್ಲಿ ಹಣದ ಬಂಡಲ್​ ಅನ್ನೇ ಎಗರಿಸುತ್ತಿದ್ದಾರೆ. ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದ ಫಾರಿನ್ ನಯ ವಂಚಕರ ಗ್ಯಾಂಗ್‌ ಅನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಸೈಯದ್, ಶಬ್ಬೀರ್ ಬಂಧಿತ ಆರೋಪಿಗಳು.

ಇರಾನ್​ ದೇಶದಿಂದ ಟೂರಿಸ್ಟ್ ವೀಸಾದಲ್ಲಿ ಬಂದಿದ್ದ ಆರೋಪಿಗಳು ಗಮನ ಬೇರೆಡೆ ಸೆಳೆದು ಕೃತ್ಯ ಎಸಗುತ್ತಿದ್ದರು. ವಿಮಾನದಲ್ಲೇ ಹೆಚ್ಚಾಗಿ ಓಡಾಡುತ್ತಿದ್ದ ಖತರ್ನಾಕ್ ಕಳ್ಳರು ಮೋಟಾರ್ ಶೋರೂಂಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಚೇಂಜ್ ಕೇಳೋ ನೆಪದಲ್ಲಿ ಶೋ ರೂಮ್​ಗೆ ಬಂದು ಈ ನೋಟು ಬೇಡ, ಆ ನೋಟು ಬೇಡ ಅಂತ ಹೇಳಿ ಕನ್ಫ್ಯೂಸ್ ಮಾಡ್ತಿದ್ರು.

ಕ್ಷಣ ಮಾತ್ರದಲ್ಲಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಹಣದ ಕಟ್ಟನ್ನೇ ಎಗರಿಸುತ್ತಿದ್ದರು. ಮಂಗಳೂರು, ಮೈಸೂರು, ಭಟ್ಕಳ, ಬೆಂಗಳೂರು ಭಾಗದಲ್ಲಿ ತಮ್ಮ ಕೈಚಳಕ ತೋರಿಸಿದ್ದರು. ಫೆಬ್ರವರಿ 1ರಂದು ಸದಾಶಿವನಗರದ ಕಾರ್ ಶೋ ರೂಂಗೆ ಎಂಟ್ರಿ ಕೊಟ್ಟು ಗಮನ ಬೇರೆಡೆ ಸೆಳೆದು ಕ್ಯಾಶ್ ಕೌಂಟರ್​ನಲ್ಲಿ ಹಣ ಎಗರಿಸಿದ್ದರು. ಫಾರಿನ್ ಕಳ್ಳರ ಕೈಚಳಕ ಶೋರೂಂನ ಸಿಸಿ ಕ್ಯಾಮಾರದಲ್ಲಿ ದಾಖಲಾಗಿತ್ತು. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಆರ್​ಎಂಸಿ ಯಾರ್ಡ್ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada