ಅತ್ಯಾಚಾರ ವಿರೋಧಿಸಿದ ಬಾಲಕಿಯ ಕೊಂದು ದೇಹ ಎಸೆದಿದ್ದ ಮುಖ್ಯೋಪಾಧ್ಯಾಯ ಅರೆಸ್ಟ್​

ಯಾವುದು ಸರಿ, ಯಾವುದು ತಪ್ಪು ಎಂದು ಮಕ್ಕಳಿಗೆ ತಿಳಿ ಹೇಳುವ ಶಿಕ್ಷಕರೇ ಇಂಥಾ ಹೇಯ ಕೃತ್ಯ ಮಾಡಿದರೆ ಮಕ್ಕಳಿಗೆ ಭದ್ರತೆ ಸಿಗುವುದೆಲ್ಲಿ? ಪೋಷಕರು ಶಿಕ್ಷಕರನ್ನೇ ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಶಿಕ್ಷಕನೇ ಮಕ್ಕಳ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಅತ್ಯಾಚಾರ ವಿರೋಧಿಸಿದ ಬಾಲಕಿಯ ಕೊಂದು ದೇಹ ಎಸೆದಿದ್ದ ಮುಖ್ಯೋಪಾಧ್ಯಾಯ ಅರೆಸ್ಟ್​
ಶಿಕ್ಷಕImage Credit source: Coastal Digest
Follow us
ನಯನಾ ರಾಜೀವ್
|

Updated on: Sep 24, 2024 | 2:16 PM

ಯಾವುದು ಸರಿ, ಯಾವುದು ತಪ್ಪು ಎಂದು ಮಕ್ಕಳಿಗೆ ತಿಳಿ ಹೇಳುವ ಶಿಕ್ಷಕರೇ ಇಂಥಾ ಹೇಯ ಕೃತ್ಯ ಮಾಡಿದರೆ ಮಕ್ಕಳಿಗೆ ಭದ್ರತೆ ಸಿಗುವುದೆಲ್ಲಿ? ಪೋಷಕರು ಶಿಕ್ಷಕರನ್ನೇ ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಶಿಕ್ಷಕನೇ ಮಕ್ಕಳ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಗುಜರಾತ್​ನ ದೋಹಾದ್ ಜಿಲ್ಲೆಯ ಪಿಪಾಲಿಯಾ ಎಂಬಲ್ಲಿನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ, ಆಕೆ ಕೂಗಿಕೊಂಡಾಗ, ಆಕೆಯನ್ನು ಹತ್ಯೆ ಮಾಡಿ ಎಸೆದು ಹೋಗಿದ್ದ ಇದೀಗ ಆತನನ್ನು ಬಂಧಿಸಲಾಗಿದೆ.

1ನೇ ತರಗತಿ ಓದುತ್ತಿದ್ದ ಬಾಲಕಿಯ ಶವ ಸೆ.19ರಂದು ಶಾಲಾ ಕಾಂಪೌಂಡ್‌ನಲ್ಲಿ ಪತ್ತೆಯಾಗಿದ್ದು, ಆಕೆಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪ್ರಕರಣದ ತನಿಖೆಗಾಗಿ ಒಟ್ಟು 10 ತಂಡಗಳನ್ನು ರಚಿಸಲಾಗಿದೆ ಎಂದು ದೋಹಾದ್ ಪೊಲೀಸ್ ವರಿಷ್ಠಾಧಿಕಾರಿ ರಾಜದೀಪ್ ಸಿಂಗ್ ಝಾಲಾ ಹೇಳಿದ್ದಾರೆ.

ತನಿಖೆಯ ವೇಳೆ, ಪೋಷಕರು ಬಾಲಕಿಯನ್ನು ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದ್ ನಾಥ್ ಅವರ ಕಾರಿನಲ್ಲಿ ಶಾಲೆಗೆ ಕಳುಹಿಸಿದ್ದಾರೆ ಎಂಬುದು ಪೊಲೀಸರಿಗೆ ತಿಳಿದುಬಂದಿದೆ. ಆಕೆ ಶಾಲೆಯಿಂದ ಹಿಂತಿರುಗದಿದ್ದಾಗ, ಹುಡುಗಿಯ ಪೋಷಕರು ನಾಥ್ ಬಳಿ ವಿಚಾರಿಸಿದ್ದರು, ಆದರೆ ಆತ ನಾನು ಆಕೆಯನ್ನು ಶಾಲೆಗೆ ಬಿಟ್ಟಿದ್ದೆಯಷ್ಟೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದಾನೆ.

ಮತ್ತಷ್ಟು ಓದಿ: ಕೆಸರೆರೆಚಿದ್ದಕ್ಕೆ ವಿದ್ಯಾರ್ಥಿನಿಯಿಂದ ಅವಮಾನ, ಕೋಪಗೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ

ತನಿಖೆಯ ನಂತರ ಪೊಲೀಸರು ಗೋವಿಂದ್ ನಾಥ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ವಿಚಾರಣೆಯ ಸಮಯದಲ್ಲಿ, ನಾಥ್​ ಅತ್ಯಾಚಾರ ಪ್ರಯತ್ನವನ್ನು ವಿರೋಧಿಸಿದ್ದರಿಂದ ಹುಡುಗಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ಕಿರುಚಲು ಆರಂಭಿಸಿದಳು ಎಂದು ನಾಥ್ ಹೇಳಿದ್ದಾರೆ. ಆಕೆಯ ಕಿರುಚಾಟವನ್ನು ತಡೆಯಲು ಆಕೆಯ ಬಾಯಿಯ ಮೇಲೆ ತನ್ನ ಕೈಗಳನ್ನು ಬಿಗಿಯಾಗಿ ಇಟ್ಟಿದ್ದ. ಬಾಲಕಿ ಸಾವನ್ನಪ್ಪಿದ್ದು, ಬಳಿಕ ಆಕೆಯನ್ನು ಕಾರಿನ ಹಿಂಬದಿಯಲ್ಲಿ ಬಚ್ಚಿಟ್ಟಿದ್ದಾನೆ.

ಬಳಿಕ ಗೋವಿಂದ್ ನಾಥ್ ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ತರಗತಿಗಳು ಮುಗಿದ ನಂತರ, ಅವನು ಕಾರಿಗೆ ಹಿಂತಿರುಗಿದನು, ಆಕೆಯ ಸಾಮಾನುಗಳನ್ನು ಶಾಲೆಯ ಗೇಟ್ ಬಳಿ ಎಸೆದು ಬಾಲಕಿಯ ಶವವನ್ನು ತರಗತಿಯ ಹಿಂದೆ ಬಿಟ್ಟು ಹೋಗಿದ್ದಾನೆ.

ಸೆಪ್ಟೆಂಬರ್ 19 ರಂದು ಸಂಜೆ ಸ್ಥಳೀಯರೊಂದಿಗೆ ಬಾಲಕಿಯ ಪೋಷಕರು ಶಾಲೆಗೆ ತಲುಪಿದಾಗ ಗೇಟ್ ಬಳಿ ಆಕೆಯ ಸಾಮಾನುಗಳು ಮತ್ತು ಶಾಲೆಯ ಕಾಂಪೌಂಡ್‌ನಲ್ಲಿ ಆಕೆಯ ಶವ ಪತ್ತೆಯಾಗಿದೆ.

ಕ್ರೈಂ ಸುದ್ದಿಗಲಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ