ಮೈಸೂರಿನಲ್ಲಿ ತಾಯಿಯನ್ನೇ ಕೊಂದ ಮಗ: ಬೆಂಗಳೂರಿನಲ್ಲಿ ತಂದೆಯನ್ನೇ ಹತ್ಯೆಗೈದ ಪುತ್ರ

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ತಾಯಿಯನ್ನೇ ಮಗ ಕೊಲೆ ಮಾಡಿರುವಂತಹ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ, ಸ್ಟ್ರಿಕ್ಟ್ ಮಾಡುತ್ತಿದ್ದರು ಅಂತಾ ತನ್ನ ತಂದೆಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.

ಮೈಸೂರಿನಲ್ಲಿ ತಾಯಿಯನ್ನೇ ಕೊಂದ ಮಗ: ಬೆಂಗಳೂರಿನಲ್ಲಿ ತಂದೆಯನ್ನೇ ಹತ್ಯೆಗೈದ ಪುತ್ರ
ಪ್ರಾತಿನಿಧಿಕ ಚಿತ್ರ
Edited By:

Updated on: Apr 20, 2025 | 12:39 PM

ಮೈಸೂರು, ಏಪ್ರಿಲ್​ 20: ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ತಾಯಿಯನ್ನೇ (mother) ಮಗ ಕೊಲೆ ಮಾಡಿರುವಂತಹ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರ ಗ್ರಾಮದಲ್ಲಿ ನಡೆದಿದೆ. ಮಗ ಸ್ವಾಮಿಯಿಂದ (40) ತಾಯಿ ಜಯಮ್ಮ (60)ರನ್ನು ಕೊಲೆ (kill) ಮಾಡಲಾಗಿದೆ. ಗಂಡನಿಗೆ ಹುಷಾರಿಲ್ಲದ ಕಾರಣ ಜಯಮ್ಮ 90 ಸಾವಿರ ರೂ ಹಣ ಕೂಡಿಟ್ಟಿದ್ದರು. ಇದೇ ಹಣ ನೀಡುವಂತೆ ಮಗ ಪದೇ ಪದೇ ಪೀಡಿಸುತ್ತಿದ್ದ. ಅತ್ತ ತಂದೆ ಆಸ್ಪತ್ರೆಗೆ ತೆರಳಿದ ವೇಳೆ ಇತ್ತ ಮಗ ತನ್ನ ತಾಯಿಯನ್ನು ಕೈಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಮಗನಿಂದಲೇ ತಂದೆಯ ಹತ್ಯೆ

ಮೈಸೂರಿನಲ್ಲಿ ಮಗನಿಂದ ತಾಯಿ ಕೊಲೆಯಾದರೆ ಇತ್ತ ಬೆಂಗಳೂರಿನಲ್ಲಿ ಮಗನಿಂದ ತಂದೆಯ ಹತ್ಯೆ ಮಾಡಲಾಗಿದೆ. ಸ್ಟ್ರಿಕ್ಟ್ ಮಾಡ್ತಿದ್ದರು ಅಂತಾ ತನ್ನ ತಂದೆಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗ ತಡರಾತ್ರಿ ನಡೆದಿದೆ. ಮಗ ಬೋಲು ಅರಬ್​ನಿಂದ ನಿವೃತ್ತ ಯೋಧ ಇಸ್ಲಾಂ ಅರಬ್(47)ರನ್ನ ಕೊಲೆ ಮಾಡಲಾಗಿದೆ. ಸದ್ಯ ವಿವೇಕನಗರ ಪೊಲೀಸರಿಂದ ಆರೋಪಿ ಬೋಲು ಅರಬ್​ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕಾರವಾರ: ವಾಯು ವಿಹಾರಕ್ಕೆ ಹೋಗಿದ್ದ ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ

ಇದನ್ನೂ ಓದಿ
ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಮಗು ಜನನ: ಕಸದ ಬುಟ್ಟಿಗೆ ಶಿಶು!
ಎಂಜಾಯ್ ಮಾಡಲು ನೀರಿಗೆ ಹಾರಿ ಪ್ರಾಣ ಬಿಟ್ಟ ಗೆಳೆಯರು;
ಕಪ್ಪಗಿದ್ದೀಯಾ ಅಂತ ಅತ್ತೆ, ಭಾವನಿಂದ ಸೂಸೆಗೆ ಕಿರುಕುಳ: ಮನನೊಂದು ಆತ್ಮಹತ್ಯೆ
ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್

ಬೋಲು ಅರಬ್, ಬಿಕಾಂ ಮೊದಲನೇ ವರ್ಷದಲ್ಲಿ ಓದುತ್ತಿದ್ದಾನೆ. ತಂದೆ ಇಸ್ಲಾಂ ಅರಬ್ ಮನೆಯಲ್ಲಿ ಕಟ್ಟುನಿಟ್ಟಾಗಿದ್ದರು. ಮಗನಿಗೆ ಹೆಚ್ಚಾಗಿ ಹಣ ಖರ್ಚು ಮಾಡಲು ಬಿಡುತ್ತಿರಲಿಲ್ಲ. ಕಾಲೇಜಿನಿಂದ ತಡವಾಗಿ ಬಂದರೆ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ತಂದೆ ಮೇಲೆ ಪುತ್ರ ಬೇಸರಗೊಂಡಿದ್ದ. ಆದರೆ ತಂದೆ ಮಗನನ್ನ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆತನನ್ನು ದೊಡ್ಡ ಆರ್ಮಿ ಅಧಿಕಾರಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು.

ಮೊದಲಿಗೆ ಯಾರೋ ಐದಾರು ಜನ ಬಂದು ಹೊಡೆದು ಹೋದರು ಎಂದಿದ್ದ ಪುತ್ರ, ಅನುಮಾನಗೊಂಡ ಪೊಲೀಸರು ಮನೆ ಬಳಿಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಯಾರು ಮನೆಗೆ ಬಂದಿರುವ ದೃಶ್ಯ ಇರಲಿಲ್ಲ. ಇದನ್ನ ಮುಂದಿಟ್ಟು ಪ್ರಶ್ನಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಪುತ್ರ ಬೋಲು ಒಪ್ಪಿಕೊಂಡಿದ್ದಾನೆ.

ಆಟೋ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ಆಟೋ, ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಪ್ರಯಾಣಿಕ ಹಾಗೂ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ತಾಲೂಕಿನ ‌ಮುಂಡರಗಿ ಗ್ರಾಮದ ಬಳಿ ನಡೆದಿದೆ. ಬಸವರಾಜ್(55), ಅಂಜಪ್ಪ(45) ಮೃತ ದುರ್ದೈವಿಗಳು.

ಇದನ್ನೂ ಓದಿ: ಕಪ್ಪಗಿದ್ದೀಯಾ ಅಂತ ಅತ್ತೆ, ಭಾವನಿಂದ ಸೂಸೆಗೆ ಕಿರುಕುಳ: ಮನನೊಂದು ನವವಿವಾಹಿತೆ ಆತ್ಮಹತ್ಯೆ

ಯಾದಗಿರಿ ನಗರದಿಂದ ಮುಂಡರಗಿ ಕಡೆಗೆ ಆಟೋ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಆಟೋದಲ್ಲಿದ್ದ ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.