ಕೊಲೆ ಆರೋಪಿಗಳ ಕಾಲಿಗೆ ಶೂಟ್​ ಮಾಡಿ ಬಂಧಿಸಿದ ಪೊಲೀಸರು, ಶಭಾಶ್​ ಎಂದ ಈಶ್ವರಪ್ಪ

ಶಿವಮೊಗ್ಗದ ಸಾಪ್ಟವೇರ್​ ಇಂಜಿನಿಯರ್​​ನ ಕೊಲೆ ಪ್ರಕರಣವನ್ನು ಸಿನಿಮೀಯ ರೀತಿಯಲ್ಲಿ ಭೇದಿಸಿದ ಶಿವಮೊಗ್ಗ ಪೊಲೀಸ್​

ಕೊಲೆ ಆರೋಪಿಗಳ ಕಾಲಿಗೆ ಶೂಟ್​ ಮಾಡಿ ಬಂಧಿಸಿದ ಪೊಲೀಸರು, ಶಭಾಶ್​ ಎಂದ ಈಶ್ವರಪ್ಪ
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 26, 2022 | 10:37 PM

ಕರ್ನಾಟಕ ಪೊಲೀಸ್​​ ಅಂದರೆ ಇಡೀ ದೇಶಕ್ಕೆ ಫೇಮಸ್​, ನಮ್ಮ ಪೊಲೀಸರು ಭೇದಿಸದೆ ಇರುವ ಪ್ರಕರಣವಿಲ್ಲ. ಅದು ಎಂತದೆ ಪ್ರಕರಣವಿರಲಿ ಭೇದಿಸಿ ಆರೋಪಿಯ ಹೆಡೆಮುರಿ ಕಟ್ಟುತ್ತಾರೆ. ನಮ್ಮ ಪೊಲೀಸರ ದೈರ್ಯ, ಪ್ರರಾಕ್ರಮಕ್ಕೆ ಸರಿಸಾಟಿಯಾದವರು ಮೊತ್ತಬ್ಬರಿಲ್ಲ. ಮೊನ್ನೆ ರಾತ್ರಿ (ಅ. 24) ದೀಪಾವಳಿಯ ಮೊದಲ ದಿನ ಸಾಪ್ಟವೇರ್​ ಇಂಜಿನಿಯರ್​​ ವಿಜಯ್​ ಎಂಬಾತನ ಕೊಲೆಯಾಗಿತ್ತು. ಕೊಲೆಯ ಸುತ್ತ ಅನುಮಾನಗಳ ಹುತ್ತವೇ ಬೆಳದಿತ್ತು. ಸದ್ಯ ಪೊಲೀಸರು ಕೊಲೆಯ ಪ್ರಕರಣವನ್ನು ಭೇದಿಸಿದ್ದಾರೆ.

ಶಿವಮೊಗ್ಗದ ವೆಂಕಟೇಶ್ ನಗರದ ಎಎನ್ ಕೆ ಮೊದಲೇ ಕ್ರಾಸ್​ನಲ್ಲಿ ಮೊನ್ನೆ ರಾತ್ರಿ ವಿಜಯ್ (37) ವ್ಯಕ್ತಿಯ ಮರ್ಡರ್ ಆಗಿತ್ತು. ಚಾಕುವಿಂದ ಇರಿದು ಮರ್ಡರ್ ಮಾಡಿ ಹಂತಕರು ಎಸ್ಕೇಸ್ ಆಗಿದ್ದರು. ನಿನ್ನೆ ಬೆಳಿಗ್ಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಕೊಲೆ ನಡೆದು ಕೆಲವೇ ಘಂಟೆಯಲ್ಲಿ ಹಂತಕರನ್ನು ಶಿವಮೊಗ್ಗ ವಿಶೇಷ ಪೊಲೀಸ್ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆ ಸಂಜೆಯೇ ಜಬೀ (23), ದರ್ಶನ್ (21) ಮತ್ತು ಕಾರ್ತಿಕ್ (21) ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಎ1 ಆರೋಪಿ ಜುಬಿಯನ್ನು ಪೊಲೀಸರು ಇಂದು ಬೆಳಿಗ್ಗೆ ಗಾಡಿಕೊಪ್ಪದ ಹರ್ಷ ಹೊಟೇಲ್ ಪಕ್ಕದಲ್ಲಿರುವ ತುಂಗಾ ಚಾನಲ್ ಬಳಿ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಜಬೀ ಕೊಲೆಗೆ ಬಳಿಸಿದ ಚಾಕುವನ್ನು ಅಲ್ಲಿ ಬಚ್ಚಿಟ್ಟಿದ್ದನು ತೋರಿಸಿದ್ದಾನೆ. ಆಗ ಪೊಲೀಸರು ಚಾಕು ಸೀಜ್ ಮಾಡುವ ವೇಳೆಯಲ್ಲಿ ಜಬೀ ಅದೇ ಚಾಕುವಿನಿಂದ ಮಹಜರಿಗೆ ಕರೆದುಕೊಂಡು ಹೋಗಿದ್ದ ಪೊಲೀಸ್ ಕಾನ್ಸಟೇಬಲ್ ರೋಷನ್ ಮೇಲೆ ಹಲ್ಲೆ ಮಾಡಿದ್ದಾನೆ.

ಕೂಡಲೇ ವಿಶೇಷ ಪೊಲೀಸ್ ತಂಡದ ಸಿಪಿಐ ಹರೀಶ್ ಪಟೇಲ್ ಆರೋಪಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಆತ ಮಾತ್ರ ಬಗ್ಗಲಿಲ್ಲ. ಇದರಿಂದ ಆತ್ಮರಕ್ಷಣೆಗೆಂದು ಹರೀಶ್ ಪಟೇಲ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆರೋಪಿಯಿಂದ ಕಾನ್ಸಟೇಬಲ್​ನನ್ನು ಬಚಾವ್ ಮಾಡಿದ್ದಾರೆ. ಘಟನೆಯಲ್ಲಿ ಕಾನ್ಸಟೇಬಲ್​ಗೆ ರೋಷನ್​ ಅವರಿಗೆ ಗಾಯವಾಗಿದ್ದು, ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜಬೀ ಮೇಲೆ ಈಗಾಗಲೇ ವಿವಿಧ ಕಳ್ಳತನ, ದರೋಡೆ ಗಲಾಟೆ ಸುಲಿಗೆ ಪ್ರಕರಣಗಳಿವೆ. ಜಬೀ ಮತ್ತು ದರ್ಶನ್, ಕಾರ್ತಿಕ ಮತ್ತೊಬ್ಬ ವ್ಯಕ್ತಿ ಒಟ್ಟು ನಾಲ್ವರು ಸೇರಿ ಎಂಜಿನಿಯರ್​ನ್ನು ಹತ್ಯೆ ಮಾಡಿದ್ದರು.

ಮೊನ್ನೆ ತಡರಾತ್ರಿ ಶಿವಮೊಗ್ಗದ ಗಾಂಧಿ ನಗರದ ವಾಸಿ ವಿಜಯ್ ಕುಮಾರ್ ಕುಟುಂಬದ ಜೊತೆ ಸೇರಿ ರಾತ್ರಿ ಕಾಂತಾರ ಚಿತ್ರ ನೋಡಿದ್ದನು. ಬಳಿಕ ಆತ ಪೋಷಕರ ಜೊತೆ ಊಟ ಮಾಡಿದ್ದನು. ತಡರಾತ್ರಿ ಸುಮಾರು 1.30 ರಿಂದ 2 ಘಂಟೆ ಸಮಯದಲ್ಲಿ ಆತನು ಕೆಲಸ ಮಾಡುವ ಖಾಸಗಿ ಆಸ್ಪತ್ರೆಗೆ ಬರಬೇಕೇಂದು ಕಾಲ್ ಬರುತ್ತದೆ. ಈ ನಡುವೆ ಬೈಕ್ ತೆಗೆದುಕೊಂಡು ವೆಂಕಟೇಶ್ ನಗರ ಬಳಿ ಬಂದಾಗ ಜಬೀ ಮತ್ತು ಆತನ ಸಹಚರರು ಮೈಮೇಲೆ ಇರುವ ಚಿನ್ನದ ಸರ, ಉಂಗುರಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದಕ್ಕೆ ವಿಜಯ್ ಕುಮಾರ್ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಅದಕ್ಕೆ ಸಿಟ್ಟಿಗೆದ್ದ ದರೋಡೆಕೋರರು ಆತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ಆತನ ಮೈಮೇಲೆ ಇರುವ ಚಿನ್ನಾಭರಣ ಎಗರಿಸಿಕೊಂಡು ಹೋಗಿದ್ದರು.

ಎಸ್ಪಿ ಈ ಪ್ರಕರಣ ಬೇಧಿಸಲು ಕುಂಸಿ ಸಿಪಿಐ ಹರೀಶ್ ಪಟೇಲ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಮೂವರು ಹಂತಕರನ್ನು ವಿಶೇಷ ಪೊಲೀಸ್​​ ತಂಡ ಬಂಧನ ಮಾಡಿತ್ತು. ಮಹಜರಿಗೆ ಹೋದ ಸಂದರ್ಬದಲ್ಲಿ ಎ1 ಆರೋಪಿಯು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದನು. ಆತನಿಗೆ ಗುಂಡೇಟು ಕೊಟ್ಟು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮೇಲೆ ರೌಡಿಸಂ ತೋರಿಸಲು ಬಂದಿದ್ದ ಜಬೀಗೆ ಪೊಲೀಸರು ಶೂಟ್ ಮಾಡಿ ಆತನನ್ನು ಬಂಧಿಸಿದ್ದಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ದರೋಡೆ, ಕೊಲೆ, ಕಳ್ಳತನ ಗಲಾಟೆ ಇಂತಹ ಪ್ರಕರಣದ ಆರೋಪಿಗೆ ಈ ರೀತಿಯಲ್ಲಿ ಪೊಲೀಸರು ಬುದ್ಧಿಕಲಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:37 pm, Wed, 26 October 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ