ತನ್ನ 8 ದಿನದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪಾಪಿ ತಂದೆ ಕೊನೆಗೂ ತಪ್ಪೊಪ್ಪಿಕೊಂಡ

ಎಂಟು ದಿನಗಳ ಶಿಶು ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ತಂದೆ ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾಯಿ ಮಗುವನ್ನು ಆತನ ಬಳಿ ಬಿಟ್ಟು ಬಟ್ಟೆ ತರಲು ಹೋಗಿದ್ದಾಗ ಆತ ಈ ಕೃತ್ಯವೆಸಗಿದ್ದಾನೆ. ದಕ್ಷಿಣ ಆಫ್ರಿಕಾ 37 ವರ್ಷದ ಹ್ಯೂಗೊ ಫೆರೀರಾ ಎಂಬ ವ್ಯಕ್ತಿ ತನ್ನ ನವಜಾತ ಶಿಶುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. 2023ರ ಜೂನ್​ನಲ್ಲಿ ಈ ಘಟನೆ ನಡೆದಿತ್ತು

ತನ್ನ 8 ದಿನದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪಾಪಿ ತಂದೆ ಕೊನೆಗೂ ತಪ್ಪೊಪ್ಪಿಕೊಂಡ
ಮಗುವನ್ನು ಕೊಂದ ಆರೋಪಿ

Updated on: Mar 31, 2025 | 8:27 AM

ದಕ್ಷಿಣ ಆಫ್ರಿಕಾ, ಮಾರ್ಚ್​ 31: ತನ್ನ ಎಂಟು ದಿನದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿ ಕೊಲೆ(Murder) ಮಾಡಿದ್ದು ನಾನೇ ಎಂದು ಪಾಪಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ದಕ್ಷಿಣ ಆಫ್ರಿಕಾ 37 ವರ್ಷದ ಹ್ಯೂಗೊ ಫೆರೀರಾ ಎಂಬ ವ್ಯಕ್ತಿ ತನ್ನ ನವಜಾತ ಶಿಶುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. 2023ರ ಜೂನ್​ನಲ್ಲಿ ಈ ಘಟನೆ ನಡೆದಿತ್ತು, ತನ್ನ ಮನೆಯಲ್ಲಿ ಇನ್ನಷ್ಟೇ ಕಣ್ಣು ಬಿಟ್ಟ ಕಂದಮ್ಮನ ಮೇಲೆ ದೌರ್ಜನ್ಯವೆಸಗಿದ್ದ. ಇದರ ಪರಿಣಾಮವಾಗಿ ತಲೆಗೆ ತೀವ್ರವಾದ ಗಾಯಗಳಾಗಿ ಮಗು ಸಾವನ್ನಪ್ಪಿತ್ತು.

ಸದಾ ಮಕ್ಕಳನ್ನು ಕಾಯುತ್ತಾ ಅವರ ಶ್ರೀರಕ್ಷೆಯಾಗಿ ನಿಂತು ಮುಂಬರುವ ಎಲ್ಲಾ ಕಷ್ಟಗಳನ್ನು ಮಕ್ಕಳಿಗೆ ಬಾರದಂತೆ ತಡೆಯಬೇಕಿದ್ದ ವ್ಯಕ್ತಿಯೇ ದುಷ್ಕೃತ್ಯವೆಸಗಿದ್ದಾನೆ.  ನ್ಯೂಸ್24 ವರದಿಯ ಪ್ರಕಾರ, ಕೋಪ ಮತ್ತು ಮಗುವಿಗೆ ನೋವುಂಟು ಮಾಡುವ ಬಯಕೆಯಿಂದ ಈ ಅಪರಾಧ ನಡೆದಿದೆ ಮತ್ತು ಫೆರೀರಾ ಉದ್ದೇಶಪೂರ್ವಕವಾಗಿ ಮತ್ತು ಕ್ರೂರವಾಗಿ ವರ್ತಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಶಿಶುವಿನ ತಾಯಿ ಮೌರೀನ್ ಬ್ರಾಂಡ್ ಮಾತನಾಡಿ, ಮಗುವನ್ನು ಗಂಡನ ಬಳಿ ಬಿಟ್ಟು ಮಗುವಿಗೆ ಬಟ್ಟೆ ಖರೀದಿಸಲು ಶಾಪ್​ಗೆ ಹೋಗಿದ್ದಳು. ಆಕೆ ಮನೆಗೆ ಹಿಂದಿರುಗಿದಾಗ ಮಗು ಮಾರಣಾಂತಿಕ ಗಾಯಗಳಿಂದ ನರಳುತ್ತಿರುವುದನ್ನು ಕಂಡಿದ್ದಾಳೆ. ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗಳಾಗಿದ್ದ ಕಾರಣ ಮಗು ಮೃತಪಟ್ಟಿದೆ.

ಇದನ್ನೂ ಓದಿ
ಅಪ್ರಾಪ್ತ ಬಾಲಕಿಯ ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ
ಬಹುವರ್ಷಗಳ ಕಾಲ ಜತೆಯಲ್ಲಿದ್ದು ಅತ್ಯಾಚಾರ ಆರೋಪ ಹೊರಿಸುವಂತಿಲ್ಲ: ಸುಪ್ರೀಂ
ಯುವತಿ ಜತೆಗಿದ್ದ ಸ್ನೇಹಿತನಿಂದಲೇ ಅತ್ಯಾಚಾರ ಮಾಡಿಸಿ, ದರೋಡೆ ಮಾಡಿ ಪರಾರಿ
ಮೊಬೈಲ್ ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ!

ಮತ್ತಷ್ಟು ಓದಿ: ಹೆಚ್ಚಿಗೆ ಮಾತಾಡಿದ್ರೆ ನಿನ್ನನ್ನೂ ತುಂಡು ತುಂಡಾಗಿ ಕತ್ತರಿಸಿ ಡ್ರಮ್​ನಲ್ಲಿ ಹಾಕ್ತೀನಿ, ಗಂಡನಿಗೆ ಪತ್ನಿಯ ಬೆದರಿಕೆ

ನನಗೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಹಾಲುಣಿಸಲು ಐದು ನಿಮಿಷಗಳಲ್ಲಿ ನೀನು ವಾಪಸ್ ಬರಬೇಕು ಎಂದು ಆತ ಷರತ್ತು ಹಾಕಿದ್ದ. ತನ್ನನ್ನು ಮಗುವಿನೊಂದಿಗೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ಈ ಕೃತ್ಯವೆಸಗಿದ್ದ ಎನ್ನಲಾಗಿದೆ.

ಮಗು ಅಳಲು ಶುರು ಮಾಡಿತ್ತು, ಮಗುವಿನ ಕತ್ತಿನ ಹಿಂಭಾಗ ಹಿಡಿದು ಪ-ದೇ ಪದೇ ಏಟು ಕೊಟ್ಟಿದ್ದ. ಬಳಿಕ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಈಗಾಗಲೇ ತಲೆಗೆ ಪೆಟ್ಟು ಬಿದ್ದು ಮಗು ನರಳುತ್ತಿತ್ತು, ಆ ನೋವನ್ನು ಮತ್ತಷ್ಟು ಹೆಚ್ಚಿಸಲು ಆತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಗು ಸಾಯಬಹುದು ಎಂದು ತಿಳಿದಿದ್ದರೂ ದೌರ್ಜನ್ಯ ಮುಂದುವರೆಸಿದ್ದ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:27 am, Mon, 31 March 25