Music Volume ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿಯ ಸಹೋದರನ ಮೇಲೆ ಟೆಕ್ಕಿಗಳಿಂದ ಹಲ್ಲೆ
ಮ್ಯೂಸಿಕ್ ವ್ಯಾಲ್ಯೂಮ್ ಕಡಿಮೆ ಮಾಡಿ ಎಂದಿದ್ದಕ್ಕೆ ಟೆಕ್ಕಿಗಳು ಸೇನಾಧಿಕಾರಿಯ, ಸಹೋದರನ ಮೇಲೆ ಟೆಕ್ಕಿಗಳು ಹಲ್ಲೆ ಮಾಡಿರುವ ಘಟನೆ ನಿನ್ನೆ ಭಾನುವಾರ (ಏ.2) ರಂದು ಮುಂಜಾನೆ ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದಿದೆ.
ಬೆಂಗಳೂರು: ಮ್ಯೂಸಿಕ್ ವ್ಯಾಲ್ಯೂಮ್ ಕಡಿಮೆ ಮಾಡಿ ಎಂದಿದ್ದಕ್ಕೆ ಟೆಕ್ಕಿಗಳು ಸೇನಾಧಿಕಾರಿಯ (Army Officers), ಸಹೋದರನ (Brothers) ಮೇಲೆ ಟೆಕ್ಕಿಗಳು ಹಲ್ಲೆ ಮಾಡಿರುವ ಘಟನೆ ನಿನ್ನೆ ಭಾನುವಾರ (ಏ.2) ರಂದು ಮುಂಜಾನೆ ಬೆಂಗಳೂರಿನ (Bengaluru) ವಿಜ್ಞಾನ ನಗರದಲ್ಲಿ (Viganan Nagar) ನಡೆದಿದೆ. ವರದಿಗಳ ಪ್ರಕಾರ, ಕರ್ನಲ್ ಡೇವಿಡ್ ನೆಹೆಮಿಯಾ ಅವರ ಸಹೋದರ ಲಾಯ್ಡ್ ನೆಹೆಮಿಯಾ, ಸಹೋದರಿ ಮತ್ತು ಇಬ್ಬರು ನೆರೆಹೊರೆಯವರ ಮೇಲೆ ಹಲ್ಲೆ ಮಾಡಲಾಗಿದೆ. ರಾಮ್ ಸಮಂತ್ ರೈ, ಅಭಿಷೇಕ್ ಸಿಂಗ್ ಮತ್ತು ಬಸುದೇವ್ ಸಮಂತ್ ರೈ ಹಲ್ಲೆ ಮಾಡಿದ ಆರೋಪಿಗಳು. ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೆಕ್ಕಿಗಳು ಒಡಿಶಾ ಮೂಲದವರಾಗಿದ್ದು, ಲಾಯ್ಡ್ ನೆಹೆಮಿಯಾ ಅವರ ಮನೆಯ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಟೆಕ್ಕಿಗಳು ಹೆಚ್ಚಿಗೆ ಸೌಂಡ್ ಇಟ್ಟುಕೊಂಡು ಹಾಡು ಕೇಳುತ್ತಿದ್ದರು. ಲಾಯ್ಡ್ ನೆಹೆಮಿಯಾ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅತಿಯಾದ ಸೌಂಡ್ನಿಂದ ತೊಂದರೆಯಾಗುತ್ತಿತ್ತು. ಹೀಗಾಗಿ ಲಾಯ್ಡ್ ನೆಹೆಮಿಯಾ ಟೆಕ್ಕಿಗಳಿಗೆ ಸೌಂಡ್ ಕಡಿಮೆ ಮಾಡುವಂತೆ 3 ಬಾರಿ ಮನವಿ ಮಾಡಿದ್ದಾರೆ ಆದರೂ ಕಡಿಮೆ ಮಾಡಲಿಲ್ಲ.
ಇದನ್ನೂ ಓದಿ: ವಿದೇಶಿ ಕರೆನ್ಸಿ ನೀಡುವುದಾಗಿ ವಂಚನೆ, 6 ಮಂದಿ ಅಂತರಾಜ್ಯ ಆರೋಪಿಗಳ ಬಂಧನ
ಗದ್ದಲದಿಂದಾಗಿ ನನ್ನ ತಾಯಿ ಮತ್ತು ನನಗೆ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೊರಬಂದು ವಾಲ್ಯೂಮ್ ಕಡಿಮೆ ಮಾಡುವಂತೆ ಮನವಿ ಮಾಡಿದೆ. ಅಲ್ಲದೆ ಅವರ ಮನೆಯ ಮಾಲೀಕರಿಗೂ ನಾನು ಸಂದೇಶ ಕಳುಹಿಸಿದೆ. ಆಗ ಟೆಕ್ಕಿಗಳು ಹೊರಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮತ್ತು ನನ್ನನ್ನು ಮನೆಯಿಂದ ಹೊರಗೆ ಬರುವಂತೆ ಪ್ರೇರೇಪಿಸಿದರು ಎಂದು ಲಾಯ್ಡ್ ನೆಹೆಮಿಯಾ ಹೇಳಿದ್ದಾರೆ.
ಆರೋಪಿಗಳು ನನ್ನನ್ನು ಹೊಡೆದು ನೆಲಕ್ಕೆ ತಳ್ಳಿದನು ಮತ್ತು ಸಹಾಯಕ್ಕೆ ಬಂದ ನನ್ನ ಸಹೋದರಿಯ ಕಪಾಳಕ್ಕೆ ಹೊಡೆದರು. ನೆರೆಹೊರೆಯವರು ನಮಗೆ ಸಹಾಯ ಮಾಡಲು ಬಂದರು, ಆದರೆ ಅವರಿಗೂ ಕೂಡ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಘಟನೆಯ ನಂತರ ಲಾಯ್ಡ್ ನೆಹೆಮಿಯಾ ಅವರ ತಾಯಿಯ ಆರೋಗ್ಯವು ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ತೀವ್ರ ನಿಗಾ ಘಟಕ (ICU)ನಲ್ಲಿ ಇದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:29 am, Mon, 3 April 23