4 ತಿಂಗಳಿಂದ ಬಾಡಿಗೆ ನೀಡಿಲ್ಲವೆಂದು ನಿಂದಿಸಿ, ಮಾರಣಾಂತಿಕ ಹಲ್ಲೆ: ಮನೆ ಓನರ್ ಅರೆಸ್ಟ್
ಬೆಂಗಳೂರು: ನಾಲ್ಕು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲವೆಂದು ಮನೆ ಮಾಲೀಕರು ಬಾಡಿಗೆದಾರರನ್ನು ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಲಗ್ಗೆರೆಯಲ್ಲಿ ಘಟನೆ ನಡೆದಿದ್ದು ಮನೆ ಮಾಲೀಕಳಾದ ಮಹಾಲಕ್ಷ್ಮೀ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ತನ್ನ ನಿವಾಸದಲ್ಲಿ ಬಾಡಿಗೆಗೆ ಇದ್ದ ಪೂರ್ಣಿಮಾ ಹಾಗೂ ರವಿಚಂದ್ರ ದಂಪತಿಯ ಮೇಲೆ ಮಹಾಲಕ್ಷ್ಮೀ ನಿನ್ನೆ ರಾತ್ರಿ ಮನೆಗೆ ನುಗ್ಗಿ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ಹಲ್ಲೆಯಿಂದ ಪೂರ್ಣಿಮಾ ರಕ್ತದ ಮಡುವಿನಲ್ಲಿ ಮನೆಯೊಳಗೆ ಒದ್ದಾಡ್ತಿರುವ ದೃಶ್ಯಾವಳಿ ಲಭ್ಯವಾಗಿದೆ. ಇನ್ನು […]
ಬೆಂಗಳೂರು: ನಾಲ್ಕು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲವೆಂದು ಮನೆ ಮಾಲೀಕರು ಬಾಡಿಗೆದಾರರನ್ನು ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಲಗ್ಗೆರೆಯಲ್ಲಿ ಘಟನೆ ನಡೆದಿದ್ದು ಮನೆ ಮಾಲೀಕಳಾದ ಮಹಾಲಕ್ಷ್ಮೀ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ತನ್ನ ನಿವಾಸದಲ್ಲಿ ಬಾಡಿಗೆಗೆ ಇದ್ದ ಪೂರ್ಣಿಮಾ ಹಾಗೂ ರವಿಚಂದ್ರ ದಂಪತಿಯ ಮೇಲೆ ಮಹಾಲಕ್ಷ್ಮೀ ನಿನ್ನೆ ರಾತ್ರಿ ಮನೆಗೆ ನುಗ್ಗಿ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ಹಲ್ಲೆಯಿಂದ ಪೂರ್ಣಿಮಾ ರಕ್ತದ ಮಡುವಿನಲ್ಲಿ ಮನೆಯೊಳಗೆ ಒದ್ದಾಡ್ತಿರುವ ದೃಶ್ಯಾವಳಿ ಲಭ್ಯವಾಗಿದೆ.
ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲ್ಲೆಗೊಳಗಾದ ಪೂರ್ಣಿಮಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ, ಮನೆ ಓನರ್ ಮಹಾಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ವಿರುದ್ಧ ಕೊಲೆಯತ್ನ ಆರೋಪದಡಿ ಪ್ರಕರಣ ಸಹ ದಾಖಲಿಸಲಾಗಿದೆ.