Vijayapura News: ಭೀಮಾತೀರದಲ್ಲಿ ರೌಡಿಶೀಟರ್ ಹತ್ಯೆಗೈದಿದ್ದ ಮೂವರು ಆರೋಪಿಗಳ ಬಂಧನ
ಭೀಮಾತೀರದಲ್ಲಿ ರೌಡಿಶೀಟರ್ ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಆಲಮೇಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ: ಭೀಮಾತೀರದಲ್ಲಿ ರೌಡಿಶೀಟರ್ (Rowdy Sheeter) ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಆಲಮೇಲ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಮಲ್ಲಿಕಾರ್ಜುನ ಜನಿವಾರ, ಅನ್ವರ್ ನದಾಫ್, ಸಂತೋಷ್ ಬಂಧಿತ ಆರೋಪಿಗಳು. ಆರೋಪಿಗಳು ಜು.11ರಂದು ಜಿಲ್ಲೆಯ ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ರೌಡಿಶೀಟರ್ ಮಾಳಪ್ಪ ಮೇತ್ರಿ(45) ಕೊಲೆಗೈದಿದ್ದರು. ಆಲಮೇಲ ನಿವಾಸಿ ರೌಡಿಶೀಟರ್ ಮಾಳಪ್ಪ ಮೇತ್ರಿಯನ್ನು ಮೂವರು ಮಾರಕಾಸ್ತ್ರದಿಂದ ಕೊಚ್ಚಿ, ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದರು.
ಜಿಂಕೆ ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ
ಚಾಮರಾಜನಗರ: ಜಿಂಕೆಯನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಸಿದ್ದಾರೆ. ಜಲ್ಲಿಪಾಳ್ಯದ ರಾಜು ಅಲಿಯಾಸ್ ಕೋಲಕಾರ್ ರಾಜು ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಜಲ್ಲಿಪಾಳ್ಯದಲ್ಲಿರುವ ಆರೋಪಿ ಮನೆ ಮೇಲೆ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಇರಿದ ತಂದೆ
ಈ ವೇಳೆ ಮನೆಯಲ್ಲಿ ಶೇಖರಿಸಿ ಇಟ್ಟಿದ್ದ ಜಿಂಕೆ ಮಾಂಸ, ಚರ್ಮ, ಎರಡು ಒಂಟಿ ನಳಿಕೆ ಬಂದೂಕುಳು, ಮಚ್ಚು, ಚೂರಿ ಪತ್ತೆಯಾಗಿವೆ. ಆರೋಪಿ ರಾಜುವನ್ನು ಅರಣ್ಯಾಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೈಸಾಲ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಯುವಕ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಕೈಸಾಲ ವಾಪಸ್ ನೀಡುವಂತೆ ಸ್ನೇಹಿತ ಕೇಳಿದ್ದಕ್ಕೆ ಡೆತ್ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೌರಿಬಿದನೂರು ತಾಲೂಕಿನ ಉಡಮಲೊಡು ಗ್ರಾಮದಲ್ಲಿ ನಡೆದಿದೆ. ಹೆಚ್.ಕೆ.ಪೃಥ್ವಿರಾಜ್(26) ಮೃತ ಯುವಕ.
ಪೃಥ್ವಿರಾಜ್ಗೆ ಸಾಲ ನೀಡಿದ್ದ ಸ್ನೇಹಿತ ಬಡ್ಡಿ ಸಮೇತ ಕೈಸಾಲ ವಾಪಸ್ ನೀಡುವಂತೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 am, Mon, 17 July 23