ಕೊಪ್ಪಳ: ಅಶ್ಲೀಲ‌ ಪದಗಳಿಗೆ ಬಣ್ಣ ಬಳಿಯುವುದೇ ಶಾಲಾ ಶಿಕ್ಷಕರಿಗೆ ನಿತ್ಯದ ಕೆಲಸ, ವಿಕೃತರ ಬಂಧನ ಯಾವಾಗಾ?

ಕೊಪ್ಪಳದ ಕನಕಗಿರಿ ಪಟ್ಟಣದ ಶಾಲಾ ಕಾಲೇಜು ಕಳೆದ ಒಂದು ವರ್ಷದಿಂದ ಅಶ್ಲೀಲ‌ ಬರಹದ ಘಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ ನಡುವೆಯೇ ಶನಿವಾರ ಕನಕಗಿರಿ ಜೂನಿಯರ್ ಕಾಲೇಜು ಗೋಡೆ ಮೇಲೆ ಅಶ್ಲೀಲ ಬರಹದ ಮೂಲಕ ವಿಕೃತಿ ಮೆರೆದಿದ್ದಾರೆ.

ಕೊಪ್ಪಳ: ಅಶ್ಲೀಲ‌ ಪದಗಳಿಗೆ ಬಣ್ಣ ಬಳಿಯುವುದೇ ಶಾಲಾ ಶಿಕ್ಷಕರಿಗೆ ನಿತ್ಯದ ಕೆಲಸ, ವಿಕೃತರ ಬಂಧನ ಯಾವಾಗಾ?
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಜೂನಿಯರ್ ಕಾಲೇಜಿನ ಗೋಡೆ ಮೇಲೆ ಅಶ್ಲೀಲ ಬರಹ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Rakesh Nayak Manchi

Updated on:Jul 16, 2023 | 9:17 PM

ಕೊಪ್ಪಳ, ಜುಲೈ 16: ಅಶ್ಲೀಲ ಗೋಡೆ ಬರಹದ ಮೂಲಕ ವಿಕೃತಿ ಹೊರ ಹಾಕುವ ಘಟನೆಗೆ ಕೊಪ್ಪಳದ ಕನಕಗಿರಿ (Kanakagiri) ಪಟ್ಟಣ ಪದೇ ಪದೇ ಸಾಕ್ಷಿಯಾಗುತ್ತಿದೆ. ಈ ವಿಕೃತ ಘಟನೆಯಿಂದ ಅಪ್ರಾಪ್ತ ಬಾಲಕಿಯರು ಮಾನಸಿಕ ಖಿನ್ನತೆ ಒಳಗಾಗುವ ಆತಂಕ ಎದುರಾಗಿದೆ. ಕೆಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿ ಕೂರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮತ್ತಷ್ಟು ಪೋಷಕರನ್ನ ಈ ಪ್ರಕರಣ ದಿನೇ ದಿನೇ ಆತಂಕಕ್ಕೆ ದೂಡುತ್ತಿದೆ. ಈ ಘಟನೆ ಇಡೀ ಕನಕಗಿರಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಆದರೆ, ಇದರ ಹಿಂದಿರುವ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಕಳೆದ ಒಂದು ವರ್ಷದಿಂದ ಈ ರೀತಿ ಅಶ್ಲೀಲ‌ ಬರಹದ ಘಟನೆಗಳು ಮತ್ತೆ ನಡೆಯುತ್ತಲೇ ಇವೆ. ಜುಲೈ 10 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಶನಿವಾರ ಮತ್ತೆ ಕಿಡಿಗೇಡಿಗಳು ಕನಕಗಿರಿ ಜೂನಿಯರ್ ಕಾಲೇಜು ಗೋಡೆ ಮೇಲೆ ಅಶ್ಲೀಲ ಬರಹದ ಮೂಲಕ ವಿಕೃತಿ ಹೊರ ಹಾಕಿದ್ದಾರೆ.

ಗೋಡೆ ಮೇಲೆ ಬರೆದಿದ್ದೇನು?

ಕಾಲೇಜು ಹೊರ ಗೋಡೆ ಮೇಲೆ ಆರೋಪಿಗಳು ಎಂಟು ಅಪ್ರಾಪ್ತ ಬಾಲಕಿಯರ ಹೆಸರಿನೊಂದಿಗೆ ಅಸಹ್ಯವಾಗಿ ನಿಂದಿಸಿದ್ದಾರೆ. ಅವರ ಹೆಸರಿನ ಮುಂದೆ ಯುವಕರ ಹೆಸರು ಬರೆದಿದ್ದರೆ, ಇನ್ನು ಕೆಲ ಹೆಸರಿನ ಮುಂದೆ ಶಾಲೆ ಶಿಕ್ಷಕರ ಹೆಸರು ಬರೆದು ವಿಕೃತಿ ಮೆರೆದಿದ್ದಾರೆ. ಸಭ್ಯ ಸಮಾಜ ಓದುವುದಕ್ಕೂ ಅಸಹ್ಯ ಪಡುವ ಪದ ಬಳಕೆ ಮಾಡಿದ್ದಾರೆ. ಬರೆದ ಅಶ್ಲೀಲ‌ ಪದಗಳಿಗೆ ಬಣ್ಣ ಬಳಿಯುವುದೇ ಶಾಲಾ ಶಿಕ್ಷಕರಿಗೆ ನಿತ್ಯದ ಕೆಲಸವಾಗಿದೆ.

ಇದನ್ನೂ ಓದಿ: ದೂರು ಸಲ್ಲಿಸಿದರೂ ನಿಮ್ಮ ಸಮಸ್ಯೆ ಇತ್ಯರ್ಥವಾಗಿಲ್ಲವೇ; ಚಿಂತೆ ಬೇಡ, ನೂತನ ಸಿಸ್ಟಮ್ ಮೂಲಕ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮುಂದಾದ ಕೊಪ್ಪಳ ಜಿಲ್ಲಾ ಪೊಲೀಸ್

ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ವೈಫಲ್ಯ

ಪದೇ ಪದೇ ಈ ರೀತಿ ಅಶ್ಲೀಕ ಗೋಡೆ ಬರಹ ಬರೆಯುತ್ತಿದ್ದರೂ ಕೊಪ್ಪಳ‌ ಜಿಲ್ಲಾ ಪೊಲೀಸ್ ಇಲಾಖೆ ಇದುವರೆಗೂ ಯಾರನ್ನೂ ಬಂಧಿಸದೇ ಇರುವುದು ವೈಪಲ್ಯ ಎದ್ದುಕಾಣುವಂತಾಗಿದೆ. ಇದರೊಂದಿಗೆ ಘಟನೆಯನ್ನ ಕನಕಗಿರಿ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರಾ ಎನ್ನೋ ಅನುಮಾನ ಕೂಡಾ ಕಾಡುತ್ತಿದೆ. ಯಾಕೆಂದರೆ ಕನಕಗಿರಿ ಪಟ್ಟಣದಲ್ಲಿ ಕಳೆದ ಒಂದು ವರ್ಷದ ಹಿಂದೆ ಎರಡು ಬಾರಿ ಇಂಥ ಘಟನೆ ನಡೆದಿದ್ದು, ಆಗ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಮಾಡಿದ್ದರು. ಈವರೆಗೂ ಆರೋಪಿಗಳು ಪತ್ತೆ ಆಗಿಲ್ಲ. ಇದೀಗ ಮತ್ತೇ ಘಟನೆ ಮರುಕಳಿಸಿದೆ. ಜುಲೈ 10 ರಂದು ಸಾರ್ವಜನಿಕ ಸ್ಥಳದಲ್ಲಿ ಇಂಥ ಬರಹ ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವು ಕನಕಗಿರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಮತ್ತೇ ಘಟನೆ ಮರುಕಳಿಸಿದ್ದು, ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ.

ಕನಕಗಿರಿಯಲ್ಲಿ ಸಿಸಿ ಕ್ಯಾಮೆರಾ ಕಡಿಮೆ ಇದ್ದು, ಸಿಸಿ ಕ್ಯಾಮೆರಾ ಹಾಕೋಕೆ ಶಾಲಾ ಆಡಳಿತ ಮಂಡಳಿಗೆ ಹೇಳಿದ್ದೇವೆ. ಪ್ರಕರಣ ಸಂಬಂಧ ಫಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್ ಕಳುಹಿಸಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಎಲ್ಲ ಆಯಾಮದಿಂದ ತನಿಖೆ ಮಾಡುತ್ತಿದ್ದೇವೆ. ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಎಸ್​ಪಿ ಯಶೋಧ ವಂಟಗೋಡಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Sun, 16 July 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ