ಹಾಸನದಲ್ಲಿ ರೌಡಿಶೀಟರ್ ಮಾಸ್ತಿಗೌಡ ಬರ್ಬರ ಹತ್ಯೆ ಕೇಸ್: ಠಾಣೆಗೆ ಬಂದು ಶರಣಾದ ಮೂವರು ಆರೋಪಿಗಳು
ರೌಡಿಶೀಟರ್ ಮಾಸ್ತಿಗೌಡ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಮೂವರು ಆರೋಪಿಗಳು ಶರಣಾಗಿದ್ದಾರೆ. ಆದರೆ ಈ ಹತ್ಯೆ ವಿಚಾರವಾಗಿ ನಮಗೇನೂ ಗೊತ್ತಿಲ್ಲ ಎಂದು ಆರೋಪಿಗಳು ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
ಹಾಸನ: ರೌಡಿಶೀಟರ್ (rowdy sheeter) ಮಾಸ್ತಿಗೌಡ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಮೂವರು ಆರೋಪಿಗಳು ಶರಣಾಗಿದ್ದಾರೆ. ಮಂಡ್ಯ ಶಿವು, ಉಲಿವಾಲ ಚೇತು, ಸಾಲಗಾಮೆ ರಾಕಿ ಶರಣಾದವರು. ಮತ್ತೊಬ್ಬ ರೌಡಿಶೀಟರ್ ಯಾಚೇನಹಳ್ಳಿ ಚೇತು ವಿಚಾರವಾಗಿ ನಡೆದ ಕೊಲೆ ಕೇಸ್ನಲ್ಲಿ ಪೊಲೀಸರು ಹುಡುಕುತ್ತಿದ್ದಾರೆ. ಹಾಗಾಗಿ ನಾವು ಸರೆಂಡರ್ ಆಗುತ್ತಿದ್ದೇವೆ. ಆದರೆ ಹಾಸನದಲ್ಲಿ ನಡೆದ ಮಾಸ್ತಿಗೌಡ ಬರ್ಬರ ಹತ್ಯೆ ವಿಚಾರವಾಗಿ ನಮಗೇನೂ ಗೊತ್ತಿಲ್ಲ ಎಂದು ಆರೋಪಿಗಳು ವಿಡಿಯೋ ಮೂಲಕ ಹೇಳಿಕೆ ನೀಡಿ ಸರೆಂಡರ್ ಆಗಿದ್ದಾರೆ.
ರೌಡಿಶೀಟರ್ ಮಾಸ್ತಿಗೌಡ(30)ನನ್ನು ಜಿಲ್ಲೆ ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊಲೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಹರಿರಾಂ ಶಂಕರ್ ಕೊಲೆ ಆರೋಪಿಗಳ ಬಂಧನಕ್ಕಾಗಿ 3 ಪೊಲೀಸ್ ತಂಡ ರಚಿಸಲಾಗಿತ್ತು. ಆದರೆ ಪೊಲೀಸರ ಶೋಧದ ನಡುವೆ ಆರೋಪಿಗಳು ಠಾಣೆಗೆ ಬಂದು ಶರಣಾಗಿದ್ದಾರೆ.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: 400 ಅಡಿ ಆಳದ ಕೊಳವೆ ಬಾವಿಯಲ್ಲಿ ಮೃತದೇಹ ಪತ್ತೆ
ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗಳು ಸ್ಥಳದಲ್ಲೇ ದುರ್ಮರಣ
ತುಮಕೂರು: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಮಗಳು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿಗವಿಂಟಿ ರಾಮಕೃಷ್ಣರೆಡ್ಡಿ(65), ಪುತ್ರಿ ನಿರ್ಮಲಾ(45) ಮೃತರು. ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಎಲ್ಲೋಟಿ ಗ್ರಾಮದಲ್ಲಿರುವ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ತಂದೆ ಜಮೀನಿನಿಂದ ಎಷ್ಟು ಹೊತ್ತಾದರೂ ವಾಪಸ್ ಬಾರದ ಹಿನ್ನೆಲೆ ತಂದೆಯನ್ನು ಹುಡುಕಲು ನಿರ್ಮಲಾ ಜಮೀನಿಗೆ ತೆರಳಿದ್ದಾಳೆ.
ಈ ವೇಳೆ ನಿರ್ಮಲಾ ಕೂಡ ವಿದ್ಯುತ್ ಸ್ಪರ್ಶಿಸಿ ದುರ್ಮರಣ ಹೊಂದಿದ್ದು, ಅಪ್ಪ, ಮಗಳ ಶವವನ್ನು ಬಸವನಹಳ್ಳಿಗೆ ಸ್ಥಳೀಯರು ಸಾಗಿಸಿದ್ದಾರೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಕೌಟುಂಬಿಕ ಕಲಹ, ಪತಿಗೆ ಹಣದ ದಾಹ; ಮಾರಕಾಸ್ತ್ರದಿಂದ ಹೊಡೆದು ಪತ್ನಿಯ ಕೊಲೆ, ಕತ್ತು ಹಿಸುಕಿ ಮಗುವಿನ ಹತ್ಯೆಗೆ ಯತ್ನ
ಮಹಿಳೆಯರನ್ನು ಮದುವೆಯಾಗಿ ವಂಚಿಸುತ್ತಿದ್ದ ಆರೋಪಿ ಬಂಧನ
ಮೈಸೂರು: ಮಹಿಳೆಯರನ್ನು ಮದುವೆಯಾಗಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬೆಂಗಳೂರಿನ ಮಹೇಶ್ 41 ಬಂಧಿತ ಆರೋಪಿ. ಪತಿಯಿಂದ ದೂರವಾದ ಹಾಗೂ ವಯಸ್ಸಾಗಿ ಮದುವೆಯಾಗದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಮದುವೆಯಾಗಿ ಅವರ ಬಳಿ ಹಣ ಮತ್ತು ಚಿನ್ನದ ಅಭರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಸುಮಾರು 15ಕ್ಕೂ ಹೆಚ್ಚು ಮಹಿಳೆಯನ್ನು ವಂಚಿಸಿದ್ದಾನೆ.
2 ಲಕ್ಷ ನಗದು ಹಣ, ಎರಡು ಕಾರುಗಳು, ಒಂದು ಬ್ರಾಸಲೆಟ್, ಒಂದು ಚಿನ್ನದ ಉಂಗುರ, ಎರಡು ಚಿನ್ನದ ಬಳೆಗಳು, ಒಂದು ನೆಕ್ಸಸ್ ಹಾಗೂ ಕೃತ್ಯಕ್ಕೆ ಬಳಸಿದ್ದ 7 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.