ಸಾಮಾಜಿಕ ಜಾಲತಾಣ ಪರಿಚಿತಳಾದ ಯುವತಿಯ ಮೇಲೆ ಅತ್ಯಾಚಾರ ಎಸೆಗಿದ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಏರ್ ಹೋಸ್ಟೆಸ್ ತರಬೇತಿ ಪಡೆಯುತ್ತಿದ್ದ ಯುವತಿಯು ಅತ್ಯಾಚಾರದ ಆರೋಪ ಹೊರಿಸಿದ್ದು, ಅದರಂತೆ ಇದೀಗ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ 7 ತಿಂಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಮ್ ಮೂಲಕ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
22 ವರ್ಷದ ಯುವತಿಯು ವೇಜಲ್ಪುರ್ ಪ್ರದೇಶದ ನಿವಾಸಿಯಾಗಿದ್ದು, ಏಳು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅಜಿತ್ ತ್ರಿವೇದಿ ಎಂಬವನ ಜೊತೆ ಫ್ರೆಂಡ್ಶಿಪ್ ಮಾಡಿಕೊಂಡಿದ್ದಳು. ಅಲ್ಲದೆ ಇಬ್ಬರೂ ಚಾಟ್ ಮಾಡುತ್ತಾ ತುಂಬಾ ಆತ್ಮೀಯರಾಗಿದ್ದರು. ಇದೇ ವೇಳೆ ತಮ್ಮ ಫೋನ್ ನಂಬರ್ ಅನ್ನು ವಿನಿಮಯ ಮಾಡಿಕೊಂಡಿದ್ದರು. ಪರಿಚಯ ಸ್ನೇಹವಾಗಿ ಮಾರ್ಪಟ್ಟ ಬಳಿಕ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದರು.
ಅದರಂತೆ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದ ಅಜಿತ್, ಕೂಲ್ ಡ್ರಿಂಕ್ನಲ್ಲಿ ಮತ್ತು ಬರುವ ಮಾತ್ರೆಗಳನ್ನು ಹಾಕಿ ನೀಡಿ ತನ್ನನ್ನು ಪ್ರಜ್ಞಾಹೀನಳಾಗಿನ್ನಾಗಿಸಿದ್ದಾನೆ. ಅಷ್ಟೇ ಅಲ್ಲದೆ ಈ ವೇಳೆ ಅತ್ಯಾಚಾರ ಎಸೆಗಿ ಅದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ರೆಕಾರ್ಡ್ ವಿಡಿಯೋ ಇಟ್ಟುಕೊಂಡು ಆ ಬಳಿಕ ಕೂಡ ಅನೇಕ ಬಾರಿ ಲೈಂಗಿಕ ಶೋಷಣೆ ಮುಂದುವರೆಸಿದ್ದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಇನ್ನು ಸಂತ್ರಸ್ತೆ ಆತನ ಬೇಡಿಕೆಗಳಿಗೆ ಒಪ್ಪದಿದ್ದಾಗ ಹಲ್ಲೆ ನಡೆಸುತ್ತಿದ್ದ. ಅಲ್ಲದೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಇದೀಗ ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಅಜಿತ್ ತ್ರಿವೇದಿಯನ್ನು ಆತನ ಮನೆಯಿಂದ ಬಂಧಿಸಿದ್ದಾರೆ.
ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್
ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ
ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
(Trainee air hostess sedated, raped by engineering student)