ಬೆಂಗಳೂರು: ಊರೂರು ಸುತ್ತುತ್ತ ಸಿಕ್ಕವರೊಂದಿಗೆ ದೈಹಿಕ ಸಂಪರ್ಕ ನಡೆಸಿ ಹಣ ಪಡೆಯುತ್ತಿದ್ದ ದಂಪತಿ
ಉದ್ಯಾನವನವೊಂದರ ಬಳಿ ಕಾರಿನಲ್ಲಿದ್ದ ಜೋಡಿಯೊಂದು ಅಲ್ಲೇ ದೈಹಿಕ ಸಂಪರ್ಕ ನಡೆಸಿದ್ದ ಪ್ರಕರಣ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಜೋಡಿಯೊಂದು ಊರೂರು ಸುತ್ತುತ್ತಾ ಸಿಕ್ಕವರೊಂದಿಗೆ ದೈಹಿಕ ಸಂಪರ್ಕ ನಡೆಸಿ ಹಣ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ವೇಳೆ ಇದೊಂದು ಟ್ರಾವೆಲ್ ಪ್ರಾಸ್ಟಿಟ್ಯೂಟ್ ರಾಕೆಟ್ ಎಂದು ತಿಳಿದುಬಂದಿದ್ದು, ದೇಶದ ಹಲವು ನಗರಗಳಿಗೆ ಈ ದಂಪತಿ ಹೋಗುತ್ತಿದ್ದರು.
ಬೆಂಗಳೂರು, ಜ.26: ಊರಿನಿಂದ ಊರಿಗೆ ದಂಪತಿ ಸುತ್ತಾಡುತ್ತಾ ಸೆಕ್ಸ್ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ದಂಪತಿಯನ್ನು ಬಂಧಿಸಿದ ನಗರದ (Bengaluru) ಹಲಸೂರು ಪೊಲೀಸ್ ಠಾಣೆ ಪೊಲೀಸರು, ತನಿಖೆಗಾಗಿ ಪ್ರಕರಣವನ್ನು ಪುಲಕೇಶಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ವಿಚಾರಣೆ ವೇಳೆ ಇದೊಂದು ಟ್ರಾವೆಲ್ ಪ್ರಾಸ್ಟಿಟ್ಯೂಟ್ ರಾಕೆಟ್ (Travel Prostitute Racket) ಎಂದು ತಿಳಿದುಬಂದಿದ್ದು, ಸದ್ಯ ಆರೋಪಿಗಳಿಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಅಹಮದಾಬಾದ್ ಮತ್ತು ದೆಹಲಿ ಮೂಲದ ಗಂಡ ಹೆಂಡತಿ ದೇಶದ ಹಲವಾರು ನಗರಗಳಿಗೆ ಸುತ್ತಾಡುತ್ತಾ ದೈಹಿಕ ಸಂಪರ್ಕ ನಡೆಸುತ್ತಿದ್ದರು. ಟೆಲಿಗ್ರಾಮ್ ಗ್ರೂಪ್ನಲ್ಲಿ ಮುಂದೆ ಯಾವ ಊರಿಗೆ ಹೋಗುತ್ತಿದ್ದೇವೆ ಎಂದು ಪೋಸ್ಟ್ ಹಾಕುತ್ತಿದ್ದರು. ಅಲ್ಲಿ ಹೋದ ಬಳಿಕ ಸಿಕ್ಕವರ ಜೊತೆಗೆ ದೈಹಿಕ ಸಂಪರ್ಕ ಮಾಡಿ ಹಣ ಪಡೆಯುತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಮಟಮಟ ಮಧ್ಯಾಹ್ನ ಕಾರಿನಲ್ಲೇ ಕಾಮತೃಷೆ ತೀರಿಸಲು ಮುಂದಾದ ಜೋಡಿ, ಆಮೇಲೇನಾಯ್ತು?
ವ್ಯಕ್ತಿಯೊಬ್ಬರೊಂದಿಗೆ ಇದೇ ರೀತಿ ಸೆಕ್ಸ್ ನಡೆಸಿದ್ದರು. ಈ ವೇಳೆ ತೆಗೆದ ಫೋಟೋವನ್ನು ಆ ವ್ಯಕ್ತಿಗೆ ಕಳುಹಿಸಿ ಬೆದರಿಕೆ ಹಾಕಿದ್ದರು. ಇದರಿಂದ ದಿಕ್ಕು ತೋಚದ ವ್ಯಕ್ತಿ ಹಲಸೂರು ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಇದೊಂದು ಟ್ರಾವೆಲ್ ಪ್ರಾಸ್ಟಿಟ್ಯೂಟ್ ರಾಕೆಟ್ ಎಂದು ತಿಳಿದುಬಂದಿದ್ದು, ಇದೇ ರೀತಿ ದೇಶದ ಹಲವಾರು ನಗರದಲ್ಲಿ ದಂಪತಿ ಹಾಗೂ ಯುವಕ ಯುವತಿಯರು ದಂಧೆಯಲ್ಲಿ ತೊಡಗಿರುವುದು ತಿಳಿದುಬಂದಿದೆ.
ಇತ್ತೀಚೆಗೆ, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಕಾರಿನಲ್ಲಿದ್ದ ಜೋಡಿಯೊಂದು ಅಲ್ಲೇ ಬಟ್ಟೆಬಿಚ್ಚಿ ಕಾಮತೃಷೆ ತೀರಿಸಲು ಮುಂದಾಗಿತ್ತು. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಬುದ್ಧಿ ಹೇಳಲು ಕಾರಿನ ಬಳಿ ಹೋದಾಗ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿತ್ತು. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ