ಉದಯಪುರ: ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಗುಂಪಿನೊಂದಿಗೆ ಉದಯಪುರ ಹಂತಕರ (Udaipur Killing) ಸಂಪರ್ಕವನ್ನು ರಾಜಸ್ಥಾನ ಪೊಲೀಸರು (Rajasthan police) ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ, ಪೊಲೀಸರು ಇಂದು ಪ್ರಕರಣದಲ್ಲಿ ಮತ್ತೊಂದು ಸಂಗತಿ ಬಹಿರಂಗಪಡಿಸಿದ್ದಾರೆ. ಹಂತಕರಲ್ಲಿ ಒಬ್ಬನಾದ ರಿಯಾಜ್ ಅಖ್ತರಿ ತನ್ನ ಮೋಟಾರ್‌ಸೈಕಲ್‌ಗೆ 2611 ಎಂದು ಬರೆದ ನಂಬರ್ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದಾನೆ. ಮುಂಬೈ ದಾಳಿ ನಡೆದ ದಿನಾಂಕವನ್ನು ಸೂಚಿಸುವ 2611ನಂಬರ್ ಪ್ಲೇಟ್ ಇದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅದೇ ವಾಹನದಲ್ಲಿ ಇಬ್ಬರು ಹಂತಕರಾದ ಘೌಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿ ಟೈಲರ್ ಕನ್ಹಯ್ಯಾ ಲಾಲ್ ಅವರ ಕುತ್ತಿಗೆಯನ್ನು ಕ್ರೂರವಾಗಿ ಸೀಳಿ ಪರಾರಿಯಾಗಿದ್ದರು. RJ 27 AS 2611ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್ ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ಬಿದ್ದಿದೆ. ರಿಯಾಜ್ ಉದ್ದೇಶಪೂರ್ವಕವಾಗಿ 2611 ಸಂಖ್ಯೆಯನ್ನು ಕೇಳಿದ್ದುಈ ನಂಬರ್ ಪ್ಲೇಟ್‌ಗೆ ₹ 5,000 ಹೆಚ್ಚುವರಿ ಪಾವತಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದು ಆತನ ಯೋಜನೆಗ ಬಗ್ಗೆ ಪ್ರಮುಖ ಸುಳಿವುಗಳನ್ನು ಒದಗಿಸಬಹುದು.
2014ರಲ್ಲಿಯೇ ರಿಯಾಜ್ ಏನನ್ನು ಯೋಚಿಸುತ್ತಿದ್ದ ಎಂಬುದಕ್ಕೆ ನಂಬರ್ ಪ್ಲೇಟ್ ಕೂಡ ಸುಳಿವು ನೀಡಬಹುದೆಂದು ಪೊಲೀಸರು ನಂಬಿದ್ದಾರೆ. ರಿಯಾಜ್‌ನ ಪಾಸ್‌ಪೋರ್ಟ್ ಪ್ರಕಾರ ಈತ 2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ. ಈತ ಪಾಕಿಸ್ತಾನಕ್ಕೆ ಕರೆಗಳು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.
ಉದಯಪುರದಿಂದ 45 ಕಿಮೀ ದೂರದಲ್ಲಿರುವ ರಾಜ್‌ಸಮಂದ್ ಜಿಲ್ಲೆಯ ಪೊಲೀಸ್ ಬ್ಯಾರಿಕೇಡ್‌ನಲ್ಲಿ ಇಬ್ಬರು ವ್ಯಕ್ತಿಗಳು ಈ ಬೈಕ್‌ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಪ್ರಾದೇಶಿಕ ಸಾರಿಗೆ ಕಚೇರಿ (RTO) ದಾಖಲೆಗಳು 2013 ರಲ್ಲಿಎಚ್ಡಿಎಫ್ಸಿ (HDFC )ನಿಂದ ಸಾಲವನ್ನು ಪಡೆದು ರಿಯಾಜ್ ಅಖ್ತರಿ ಬೈಕು ಖರೀದಿಸಿದ್ದಾರೆ ಎಂದು ತೋರಿಸುತ್ತವೆ. ವಾಹನದ ವಿಮೆಯು 2014 ಮಾರ್ಚ್‌ನಲ್ಲಿ ಮುಕ್ತಾಯಗೊಂಡಿತು.