ಕಾರವಾರ, ಜನವರಿ 31: ಮತಾಂತರ (Convertion) ಮಾಡಲು ಯತ್ನಿಸಿದ ಆರು ಮಂದಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ (Sirsi) ತಾಲೂಕಿನ ಜಗಳ ಮನೆ ಗ್ರಾಮದಲ್ಲಿ ಬುಧವಾರ ಬಂಧಿಸಲಾಗಿದೆ. ಗ್ರಾಮದ ಆದರ್ಶ ನಾಯ್ಕ ಎಂಬವರ ಮನೆಗೆ ಬಂದಿದ್ದ ತಂಡ, ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಆಗಬೇಕಾದರೆ ಕ್ರೈಸ್ತ ಧರ್ಮ ಸ್ವೀಕಾರ ಮಾಡಿ ಎಂದು ಮನವೊಲಿಸಲು ಮುಂದಾಗಿತ್ತು. ಏಸು ಕ್ರಿಸ್ತ ನಿಮಗೆ ಎಲ್ಲವನ್ನೂ ಕೊಡುತ್ತಾನೆ. ನಿಮ್ಮ ಎಲ್ಲ ಕಷ್ಟಗಳು ದೂರ ಆಗುತ್ತವೆ. ನಾವು ಕೂಡ ಮತಾಂತರ ಆಗಿದ್ದೇವೆ ಎಂದು ಮನವೊಲಿಸಲು ಆರು ಮಂದಿಯ ತಂಡ ಮುಂದಾಗಿತ್ತು.
ಮತಾಂತರ ಯತ್ನ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಆದರ್ಶ ನಾಯ್ಕ ಅವರು ಶಿರಸಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಬಂಧಿತ ಆರು ಮಂದಿಯ ಪೈಕಿ ನಾಲ್ವರು ಹಾವೇರಿ ಜಿಲ್ಲೆಯವರಾಗಿದ್ದಾರೆ.
ಪರಮೇಶ್ವ ನಾಯ್ಕ್, ಸುನೀತಾ ನಾಯ್ಕ್, ಧನಂಜಯ್ ಶಿವಣ್ಣ, ಶಾಲಿನಿ ರಾಣಿ, ಕುಮಾರ ಲಮ್ಮಾಣಿ, ತಾರಾ ಲಮ್ಮಾಣಿ ಬಂಧಿತರು. ಇವರ ಪೈಕಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನವರಾಗಿದ್ದಾರೆ. ಸದ್ಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು 28 ವರ್ಷದ ಯುವಕನ ಹತ್ಯೆ ಮಾಡಲಾಗಿದೆ. ಮೃತ ಯುವಕನನ್ನು ವಿಜಯ ಬಸವನ ಎಂದು ಗುರುತಿಸಲಾಗಿದೆ. ಯುವಕನ ಮೇಲೆ ಕಲ್ಲು ಎತ್ತಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ರಾತ್ರಿ ಸ್ನೇಹಿತರೆಲ್ಲ ಪಾರ್ಟಿ ಮಾಡಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಕೃತ್ಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಬೆಳಗಾವಿ: ಪತಿಯ ಬಿಟ್ಟು ಓಡಿಹೋಗಿದ್ದ ಮಹಿಳೆ, ಆಕೆಯ ಪ್ರಿಯಕರನ ಬರ್ಬರ ಕೊಲೆ
ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಚರಂಡಿಯಲ್ಲಿ ಅನುಮಾನಾಸ್ಪದವಾಗಿ ಯುವಕ ಮುನ್ನಾ (25) ಎಂಬುವವರ ಶವ ಪತ್ತೆಯಾಗಿದೆ. ಮದ್ಯಪಾನದ ಅಮಲಿನಲ್ಲಿ ಚರಂಡಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ