AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಕೇಸ್​: ಐದು ತಿಂಗಳ ಬಳಿಕ ಪ್ರಮುಖ ಆರೋಪಿಗಳ ಬಂಧನ

ಹಾಸನ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಜೆಡಿಎಸ್​ನ ಪ್ರಭಾವಿ ನಾಯಕ ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೆಗೌಡರನ್ನು ಬರ್ಬರ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ನಿನ್ನೆ ಪೊಲೀಸರು ತುಮಕೂರಿನಲ್ಲಿ ಬಂಧಿಸಿದ್ದಾರೆ. ಅಲ್ಲಿಗೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆ ಕೇಸ್​ ಅನ್ನು ಪೊಲೀಸರು ಬೇಧಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು.

ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಕೇಸ್​: ಐದು ತಿಂಗಳ ಬಳಿಕ ಪ್ರಮುಖ ಆರೋಪಿಗಳ ಬಂಧನ
ಮೃತ ಕೃಷ್ಣೇಗೌಡ, ಬಂಧಿತ ಆರೋಪಿ ಯೋಗಾನಂದ
ಮಂಜುನಾಥ ಕೆಬಿ
| Edited By: |

Updated on:Jan 31, 2024 | 4:41 PM

Share

ಹಾಸನ, ಜನವರಿ 31: ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ (KrishnaGowda) ರನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐದು ತಿಂಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಯೋಗಾನಂದ(38), ಅನಿಲ್(32) ಬಂಧಿತರು. ಹಣಕಾಸು ವಿಚಾರದಲ್ಲಿ ವೈಷಮ್ಯ ಹಿನ್ನೆಲೆ ಸುಫಾರಿ ಕೊಟ್ಟು ಆರೋಪಿ ಯೋಗಾನಂದ ಕೊಲೆ ಮಾಡಿಸಿದ್ದಾನೆ. ನಿನ್ನೆ ತುಮಕೂರು ಜಿಲ್ಲೆಯ ತುರುವೇಕರೆ ಬಳಿ ತೋಟದ ಮನೆಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಹಾಗೂ ಹಾಸನ ಪೊಲೀಸರು ಬಂಧಿಸಿದ್ದಾರೆ. ಅಲ್ಲಿಗೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆ ಕೇಸ್​ ಅನ್ನು ಪೊಲೀಸರು ಬೇಧಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು.

14  ಆರೋಪಿಗಳ ವಿರುದ್ದ ಕೇಸ್ ದಾಖಲು

ಪ್ರಕರಣಕ್ಕೆ ಸಂಬಂಧಿಸಿದಂತೆ 14  ಆರೋಪಿಗಳ ವಿರುದ್ದ ಕೇಸ್ ದಾಖಲಿಸಿದ್ದರು. 12 ಆರೋಪಿಗಳ ಬಂಧನವಾಗಿದ್ದರೂ ಪ್ರಕರಣದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಎರಡು ತಿಂಗಳ ಹಿಂದೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಹಾಸನ ಹೊರವಲಯದ ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಹಾಡು ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆ ಬಳಿಕ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು.

ಇದನ್ನೂ ಓದಿ: ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಅತ್ಯಾಪ್ತ, ಗ್ರಾನೈಟ್ ಉದ್ಯಮಿ ಬರ್ಬರ ಹತ್ಯೆ

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಹಾಗೂ ಹಾಸನ ಪೊಲೀಸರಿಂದ ಜಂಟಿ ಕಾರ್ಯಚರಣೆ ಮಾಡಲಾಗಿದೆ. ಪೊಲೀಸರ ಬಂಧನದ ವೇಳೆ ಮೈ ಮೇಲೆ‌ ವಿಷ ಸುರಿದುಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ.

ಘಟನೆ ಸಂಬಂಧ ತುರುವೆಕೆರೆ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಹಾಗೂ ಆತ್ಮಹತ್ಯೆ ಯತ್ನ ಕೇಸ್ ದಾಖಲು ಮಾಡಲಾಗಿದೆ. ವಿಷ ಕುಡಿದಂತೆ ನಾಟಕ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಲೆ ಮಾಡಿದ ಬಳಿಕ ಒಂದೇ ಕಂತಿನಲ್ಲಿ ಹಣ ಕೊಡುವುದಾಗಿ ಹೇಳಿದ್ದ ಪ್ರಮುಖ ಆರೋಪಿ ಯೋಗಾನಂದ ಕೊಲೆ ಬಳಿಕ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದು ಕೊಲೆ ಮಾಡಿದವರಿಗೂ ಮೋಸ ಮಾಡಿ ತಾನೂ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: ಹೆಚ್​ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನ

ಗ್ರೈನೈಟ್ ಉದ್ಯಮಿಯಾಗಿದ್ದ ಕೃಷ್ಣೇಗೌಡನನ್ನ ಹೇಗೋ ಪರಿಚಯ ಮಾಡಿಕೊಂಡಿದ್ದ ಯೋಗಾನಂದ್ ಅವರಿಗೆ ಪುಸಲಾಯಿಸಿ ಒಂದು ಲೋಕಲ್ ಟಿವಿ ಚಾನಲ್, ಒಂದು ಪೇಪರ್ ಕೂಡ ಮಾಡಿದ್ದ. ಬಳಿಕ ಅವರಿಂದಲೇ ಕೋಟಿ ಕೋಟಿ ರೂ. ಹಣ ಹೂಡಿಕೆ ಮಾಡಿಸಿ ಒಂದು ಸಿನಿಮಾ ಕೂಡ ಮಾಡಿದ್ದ. ಇವನನ್ನ ನಂಬಿ ಹಣ ಹೂಡಿದ ಕೃಷ್ಣೇಗೌಡ ಇವನಿಂದ ಏನೂ ಆದಾಯ ಬರೋದಿಲ್ಲ ಎಂದು ಗೊತ್ತಾದಾಗ ಕೊಟ್ಟ ಹಣ ವಾಪಸ್ ಕೊಡು ಎಂದು ಹಿಂದೆ ಬಿದ್ದಿದ್ದಾರೆ. ಆದರೆ ಕೋಟಿ ಕೋಟಿ ರೂ. ಹಣ ವಾಪಸ್ ಕೊಡುವುದಕ್ಕೆ ಆಗದೆ ಪೇಚಿಗೆ ಸಿಲುಕಿದ್ದ ಯೋಗಾನಂದ್ ಕೃಷ್ಣೇಗೌಡನನ್ನೆ ಮುಗಿಸಿದರೆ ಎಲ್ಲಾ ಹಣ ಮನ್ನಾ ಆಗುತ್ತೆ ಎಂದು ಪ್ಲಾನ್ ಮಾಡಿ ತನ್ನ ಪಾಟ್ನರ್ ಆಗಿದ್ದ ಸುರೇಶ್ ಎಂಬಾತನ ಜೊತೆ ಸೇರಿ ಕೊಲೆಗೆ ಸ್ಕೆಚ್ ರೂಪಿಸಿದ್ದ. ಇದಕ್ಕೆ ಯೋಗಾನಂದನ ಪತ್ನಿ, ಪ್ರೇಯಸಿ ಸೇರಿ ಕುಟುಂಬ ಸದಸ್ಯರ ನೆರವು ಪಡೆದು 4.5 ಲಕ್ಷ ರೂ. ಸುಫಾರಿ ಕೊಟ್ಟಿದ್ದ.

ಕೃಷ್ನೇಗೌಡನ ಹತ್ಯೆಗೆ ನಾಲ್ಕು ತಿಂಗಳಿನಿಂದಲೂ ಪ್ಲಾನ್ ಮಾಡಿದ್ದ ಪಾತಕಿಗಳು ತಮ್ಮ ಮೊಮ್ಮಗಳನ್ನು ಶಾಲೆಗೆ ಬಿಡಲು ಬಂದು ವಾಪಸ್ ಹೋಗೋವಾಗ ಹಂಪ್ ಸಮೀಪ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು ಅದು ಆಗೋದಿಲ್ಲ ಎಂದುಗೊತ್ತಾದಾಗ ಬಹುತೇಕ ನಿರ್ಜನ ಪ್ರದೇಶದಂತಿರೋ ಇಂಡಸ್ಟ್ರಿಯಲ್ ಏರಿಯಾವನ್ನೇ ಆಯ್ಕೆ ಮಾಡಿಕೊಂಡಿದ್ದರು. ಒಂದು ಆಟೋ ಹಾಗು ಇನ್ನೊಂದು ಇನ್ನೋವಾ ಕಾರಿನಲ್ಲಿ ಬಂದು ಆಗಸ್ಟ್ 9ರ ಮದ್ಯಾಹ್ನ 1-30ರ ಸುಮಾರಿಗೆ ಕೃಷ್ಣೆಗೌಡ ಇನ್ನೇನು ತಮ್ಮ ಗ್ರಾನೈಟ್ ಫ್ಯಾಕ್ಟರಿಗೆ ಎಂಟರ್ ಆಗಬೇಕು ಅಷ್ಟರಲ್ಲಿ ಅಡ್ಡಗಟ್ಟಿ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:38 pm, Wed, 31 January 24