AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಡಿಗೆ ಸೇಡು: ಬಾಗಪ್ಪ ಹರಿಜನ ಹತ್ಯೆ ಹಿಂದೆ ಪಿಂಟು ​ಕೈವಾಡ ಶಂಕೆ, ಯಾರವನು?

ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿಯಾಗಿದೆ.. ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆಯಾಗಿದೆ. ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಘಟನೆಯಿಂದ ವಿಜಯಪುರವನ್ನೇ ಬೆಚ್ಚಿಬೀಳಿಸಿದೆ. ಇನ್ಜು ಈ ಕೊಲೆ ಕಾರಣವೇನು? ಈ ಪ್ರಕರಣದಲ್ಲಿ ಕೇಳಿಬಂದ ಆ ಪಿಂಟು ಯಾರು? ಎನ್ನುವ ಮಾಹಿತಿ ಇಲ್ಲಿದೆ.

ಸೇಡಿಗೆ ಸೇಡು: ಬಾಗಪ್ಪ ಹರಿಜನ ಹತ್ಯೆ ಹಿಂದೆ ಪಿಂಟು ​ಕೈವಾಡ ಶಂಕೆ, ಯಾರವನು?
ಬಾಗಪ್ಪ- ಪಿಂಟ್ಯಾ
ಅಶೋಕ ಯಡಳ್ಳಿ, ವಿಜಯಪುರ
| Updated By: ರಮೇಶ್ ಬಿ. ಜವಳಗೇರಾ|

Updated on: Feb 12, 2025 | 4:29 PM

Share

ವಿಜಯಪುರ, (ಫೆಬ್ರವರಿ 12): ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಕೊಲೆ ನಡೆದಿದೆ. ಆಟೋದಲ್ಲಿ ಬಂದಿದ್ದ ನಾಲ್ಕೈದು ದಾಳಿಕೋರರು, ಪಕ್ಕಾ ಪ್ಲ್ಯಾನ್ ಮಾಡಿ ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಊಟ ಮಾಡಿ ವಾಕ್ ಮಾಡುತ್ತಿದ್ದಾಗಗಲೇ ಬಾಗಪ್ಪನನ್ನು ಕೊಲೆಗೈದು ಪರಾರಿಯಾಗಿರೋ, ಹಂತಕರ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಬಾಗಪ್ಪ ಕೊಲೆ ವಕೀಲ ರವಿ ಹತ್ಯೆಗೆ ಪ್ರತೀಕಾರನಾ?

ಭೀಮಾತೀರದ ಹಂತಕ ಬಾಗಪ್ಪ ಬರ್ಬರ ಹತ್ಯೆ ಕೇಸ್ ತನಿಖೆಯನ್ನು ಪೊಲೀಸರು ಹಲವು ಆಯಾಮಗಳಲ್ಲಿ ಕೈಗೆತ್ತಿಕೊಂಡಿದ್ದಾರೆ. ವಕೀಲ ರವಿ ಅಗರಖೇಡ್ ಹತ್ಯೆಗೆ ಬಾಗಪ್ಪ ಕೊಲೆ ಮೂಲಕ ಪ್ರತಿಕಾರವೇ ಎನ್ನುವ ಆ್ಯಂಗಲ್​ನಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೊಲೆಯಾಗಿರೋ ವಕೀಲ ರವಿ ಸಹೋದರ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಮತ್ತು ಸಹಚರರಿಂದ ಕೃತ್ಯ ಎಂದು ಬಾಗಪ್ಪ ಪುತ್ರಿ ಗಂಗೂಬಾಯಿ ಗಾಂಧಿಚೌಕ ಠಾಣೆಗೆ ದೂರು ನೀಡಿದ್ದು, ಸದ್ಯ ಪಿಂಟ್ಯಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬಾಗಪ್ಪ ಹರಿಜನ್ ಬದುಕಿಗೆ ಅಂತ್ಯ ಕಾಣಿಸಲು ಹಂತಕರು ಫೂಲ್​ಪ್ರೂಫ್​ ಯೋಜನೆಯೊಂದಿಗೆ ಅಗಮಿಸಿದ್ದರು!

ಬಾಗಪ್ಪ ಹತ್ಯೆಗೆ ಆಸ್ತಿ ಕಾರಣನಾ?

ಇತ್ತೀಚೆಗೆ ಬಾಗಪ್ಪ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದಿದ್ದ. ಎಲ್ಲವನ್ನೂ ವಕೀಲ ರವಿ ಮೂಲಕ ನಿರ್ವಹಣೆ ಮಾಡುತ್ತಿದ್ದ. ಆದ್ರೆ ರವಿ, ಬಾಗಪ್ಪ ವ್ಯವಹಾರದಲ್ಲಿ ಒಡಕು ಮೂಡಿತ್ತು. ಆಸ್ತಿಯಲ್ಲಿ 50 ಪರ್ಸೆಂಟ್ ಬೇಕೆಂದು ಬಾಗಪ್ಪ ಕೇಳಿದ್ದ. ಇದಕ್ಕೆ ವಕೀಲ ರವಿ ಒಪ್ಪಿರಲಿಲ್ಲ. ಇದಿಷ್ಟೇ ಅಲ್ಲ, ಕೆಲವೇ ತಿಂಗಳಲ್ಲಿ ಭಾಗ ಕೊಡುವುದಕ್ಕೆ ನಿರಾಕರಿಸಿದ್ದ ವಕೀಲ ರವಿ ಹತ್ಯೆಯೂ ನಡೆಯಿತು. 5 ತಿಂಗಳ ಹಿಂದೆಯೇ ಕಾರು ಹರಿಸಿ ವಕೀಲ ರವಿ ಹತ್ಯೆಗೈಯಲಾಗಿತ್ತು. ಕೆಲ ಹುಡುಗರ ಮೂಲಕ ಕಾರು ಹರಿಸಿ ವಕೀಲನ ಕೊಲೆಗೈಯಲಾಗಿತ್ತು. ಇದೇ ಕೇಸ್​ನಲ್ಲಿ ಬಾಗಪ್ಪ ಸಹಚರರು ಅರೆಸ್ಟ್ ಆಗಿದ್ದರು.. ಇನ್ನೂ ಆರೋಪಿಗಳು ಜೈಲಿನಲ್ಲೇ ಇದ್ದಾರೆ.

ಬಳಿಕ ವಕೀಲ ರವಿ ತಮ್ಮನಿಂದ ಅಣ್ಣನ ಕೊಲೆಗೆ ಸೇಡಿಗಾಗಿ ಪ್ಲ್ಯಾನ್ ನಡೆದಿತ್ತು. ಪ್ಲ್ಯಾನ್ ಮಾಡಿ ಪಿಂಟ್ಯಾ & ಗ್ಯಾಂಗ್​ನಿಂದ ಕೊಲೆ ಸ್ಕೆಚ್ ಹಾಕಲಾಗಿತ್ತು. ಮಹಿಳೆ ಮನೆಗೆ ಬಂದು ವಾಪಸ್ ಹೋಗುವಾಗ ಕೊಲೆ ಸಂಚು ರೂಪಿಸಲಾಗಿತ್ತು. ತನ್ನ ನಾಲ್ವರು ಗೆಳೆಯರೊಂದಿಗೆ ಸೇರಿ ಬಾಗಪ್ಪನ ಕೊಲೆಗೈದಿದ್ದಾರೆ. ಪಿಂಟ್ಯಾ ಇದೆ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು, ಉಳಿದ ನಾಲ್ವರು ಆರೋಪಿಗಳು ಯಾರೆಂದು ಪತ್ತೆಯಾಗಿಲ್ಲ. ಸದ್ಯ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಭೀಮಾತೀರದ ಹಂತಕ ಚಂದಪ್ಪನ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್​; ಈತನ ಅಪರಾಧ ಹಿನ್ನೆಲೆ ಇಲ್ಲಿದೆ

ಹಣದ ವಿಚಾರವಾಗಿಯೂ ಬಾಗಪ್ಪ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಬಾಗಪ್ಪನ ಮುಗಿಸಲು ಹೊಸ ಗ್ಯಾಂಗ್ ಎಂಟ್ರಿ ಕೊಟ್ಟಿರೋ ಸಾಧ್ಯತೆ ಇದೆ. ಚಂದಪ್ಪ ಹರಿಜನ ಸಂಬಂಧಿಕರಿಂದ ಹತ್ಯೆ ನಡೀತಾ ಎನ್ನುವ ಪ್ರಶ್ನೆಯೂ ಎದುರಾಗಿದೆ. ಕಾರಣವೇನಂದ್ರೆ, 2018ರಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್​ಗೆ ಸಾಕ್ಷಿ ಹೇಳಲು ಫೆ.19ರಂದು ಬಾಗಪ್ಪ ಕೋರ್ಟ್​ಗೆ ಹಾಜರಾಗಬೇಕಿತ್ತು. ವಿರೋಧಿಗಳಿಗೆ ಗೊತ್ತಾಗದಿರಲಿ ಎಂದು ಬಾಗಪ್ಪ ವಿಜಯಪುರದ ಹೊರ ವಲಯದ ಬಾಡಿಗೆ ಮನೆಯಲ್ಲಿದ್ದ. ಮನೆಯಲ್ಲೇ ಸಂಜನಾ ಎಂಬ ಸಂಬಂಧಿಯನ್ನೂ ಇರಿಸಿಕೊಂಡಿದ್ದ. ಈ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ಹತ್ಯೆಗೈದಿರೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ