ನಾಲ್ಕು ತಿಂಗಳ ಹಿಂದಷ್ಟೇ ವಿವಾಹ, ಕಾರು ಖರೀದಿ ವಿಚಾರದಲ್ಲಿ ಜಗಳ, ಕೋಪದಲ್ಲಿ ಪತ್ನಿ ಕೊಂದು ಬೆಂಕಿ ಹಚ್ಚಿದ ಪತಿ
ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು, ಸುಖ ಸಂಸಾರ ಯಾವುದಕ್ಕೂ ಕೊರತೆ ಇರಲಿಲ್ಲ ಆದರೆ ಕಾರು ಖರೀದಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಿಕ್ಷಕರೊಬ್ಬರು ಪತ್ನಿಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿರುವ ಹೃದಯ ವಿದ್ರಾವಕ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು, ಸುಖ ಸಂಸಾರ ಯಾವುದಕ್ಕೂ ಕೊರತೆ ಇರಲಿಲ್ಲ ಆದರೆ ಕಾರು ಖರೀದಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಿಕ್ಷಕರೊಬ್ಬರು ಪತ್ನಿಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿರುವ ಹೃದಯ ವಿದ್ರಾವಕ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಪದಲ್ಲಿ ಪತ್ನಿಯ ಕಪಾಳಕ್ಕೆ ಹೊಡೆದಿದ್ದಾನೆ, ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ, ಪತ್ನಿಯ ಸಾವನ್ನು ಮರೆ ಮಾಚಲು ದೇಹಕ್ಕೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಬೂಬು ಹೇಳಿದ್ದಾನೆ.
ಅರ್ಧ ಸುಟ್ಟ ಶವದ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿ ಶ್ರೀಕಾಂತ್ ತಿವಾರಿಯನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ತಕ್ಷಣ ಪೊಲೀಸರು ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಮತ್ತಷ್ಟು ಓದಿ: ಪ್ರತ್ರೇಕ ಘಟನೆ: ಗಂಡ-ಹೆಂಡ್ತಿ ಜಗಳ ಕೊಲೆಯಲ್ಲಿ ಅಂತ್ಯ, ಪತ್ನಿಯನ್ನ ರಕ್ಷಿಸಲು ಹೋಗಿ ಪತಿ ನೀರುಪಾಲು
ದಂಪತಿ ಉತ್ತರ ಪ್ರದೇಶ ಮೂಲದವರಾಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಸೆಂಟ್ರಲ್ ಕೋಲ್ಕತ್ತಾದ 24 ಜಾದುನಾಥ್ ಡೇ ರಸ್ತೆಯಲ್ಲಿರುವ ಎರಡನೇ ಮಹಡಿಯ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಅಕ್ಟೋಬರ್ 17ರಂದು ಫ್ಲಾಟ್ನಿಂದ ಹೊಗೆ ಬರುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ತಿವಾರಿ ಪತ್ನಿ ದೀಪ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಆತ ಹೇಳಿದ ಸುಳ್ಳು ಹೆಚ್ಚು ಸಮಯಗಳ ಕಾಲ ಉಳಿಯಲಿಲ್ಲ, ಆರೋಪಿಯನ್ನು ಸರಿಯಾಗಿ ವಿಚಾರಿಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ, ಕಾರು ಕೊಳ್ಳುವ ವಿಚಾರದಲ್ಲಿ ಇಬ್ಬರೂ ಜಗಳವಾಡಿದ್ದು, ಈ ವೇಳೆ ತಾನೇ ಹೊಡೆದು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ