AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಕಲ್​: ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಯುವಕ ಮನನೊಂದು ಆತ್ಮಹತ್ಯೆ

ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದರು. ಬಳಿಕ ಯುವತಿ ಕೂಡ ಪ್ರೀತಿಸಲು ನಿರಾಕರಿಸಿದ್ದಳು. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ.

ಆನೆಕಲ್​: ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಯುವಕ ಮನನೊಂದು ಆತ್ಮಹತ್ಯೆ
ಮೃತ ಯುವಕ, ಪೊಲೀಸ್​ ಠಾಣೆ
TV9 Web
| Edited By: |

Updated on: Mar 19, 2024 | 11:08 AM

Share

ಆನೇಕಲ್​​, ಮಾರ್ಚ್​ 19: ಪ್ರೀತಿಸಲು (Love) ಯುವತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ. ಹರ್ಷಿತ್ ಮೃತ ಯುವಕ. ಮೃತ ಹರ್ಷಿತ್ ತುಮಕೂರು ಮೂಲದ ಮೃದುಲಾ ಅಲಿಯಾಸ್ ಮೇಘಾ ಪ್ರೀತಿಸುತ್ತಿದ್ದನು. ಮೃದುಲಾ ಕೂಡ ಹರ್ಷಿತ್​ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.

ಮೃದುಲಾ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದಳು. ಈ ಪ್ರೀತಿ ವಿಚಾರ ಮೃದಲಾ ಅತ್ತೆ-ಮಾವನಿಗೆ ಗೊತ್ತಾಗಿದೆ. ಆಗ ಮೃದಲಾ ಅತ್ತೆ-ಮಾವ ಪ್ರೀತಿಸದಂತೆ ಹರ್ಷಿತ್​ಗೆ ಬೆದರಿಕೆ ಹಾಕಿದ್ದರು. ಅಲ್ಲದೆ ಅಪರಿಚಿತ ವ್ಯಕ್ತಿ ಹರ್ಷಿತ್​ಗೆ ಫೋನ್ ಕರೆ ಮಾಡಿ, “ಮೃದುಲಾಳನ್ನು ಮದುವೆಯಾಗುತ್ತೇನೆ ಆಕೆಯ ತಂಟೆಗೆ ಬರಬೇಡ” ಎಂದು ಬೆದರಿಕೆ ಹಾಕಿದ್ದನು. ಇದಾದ ಬಳಿಕ ಯುವತಿ ಮೃದುಲಾ ಹರ್ಷಿತ್​ನನ್ನು ಪ್ರೀತಿಸಲು ನಿರಾಕರಿಸಿದ್ದಳು.

ಇದರಿಂದ ಮನನೊಂದ ಹರ್ಷಿತ್ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಬಳಿಕ ಬ್ಲೇಡ್​ನಿಂದ ಕೈ ಕೊಯ್ದುಕೊಂಡಿದ್ದಾನೆ. ಕೈ ಕೊಯ್ದುಕೊಂಡಿದ್ದನ್ನು ಪೋಟೋ ತೆಗೆದು ತಾಯಿಯ ಮೊಬೈಲ್ ಹಾಗೂ ಹುಡುಗಿಯ ನಂಬರ್​​ಗೆ ಹರ್ಷಿತ್​ ವಾಟ್ಸಾಪ್ ಮಾಡಿದ್ದಾನೆ. ಇದನ್ನು ಕಂಡ ತಾಯಿ, ಹರ್ಷಿತ್​ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಗೆ ಬಂದು ನೋಡುವಷ್ಟರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಯುವತಿ ಮೃದುಲಾ ಮತ್ತು ಆಕೆಯ ಅತ್ತೆ ಕವಿತಾ, ಮಾವ ಹಾಗೂ ಅಪರಿಚಿತ ನಂಬರ್​ನಿಂದ ಕರೆ ಮಾಡಿದ್ದ ವ್ಯಕ್ತಿಯ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಬಾಲ್ಯವಿವಾಹವಾಗಿದ್ದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ: ಗಂಡ ಅರೆಸ್ಟ್​​

ವಿಷಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನ, ಪ್ರಿಯಕರ ಸಾವು

ಹಾಸನ: ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಷಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಚಿಕಿತ್ಸೆ ಫಲಿಸದೆ ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮದ ಪ್ರಿಯಕರ ರಾಜು (24) ಮೃತಪಟ್ಟಿದ್ದಾನೆ. ಪ್ರಿಯತಮೆಗೆ ಚಿಕಿತ್ಸೆ ಮುಂದುವರೆದಿದೆ.

ಮೃತ ರಾಜು ಹೊಳೆನರಸೀಪುರ ಮೂಲದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಮದುವೆಗೆ ನಿರಾಕರಿಸಿ ಪೋಷಕರು ಅಪ್ರಾಪ್ತೆಗೆ ಬುದ್ಧಿವಾದ ಹೇಳಿದ್ದರು. ಆದರೆ ನಿನ್ನೆ (ಮಾ,18) ಮಧ್ಯಾಹ್ನ ಪ್ರೇಮಿಗಳು ವಿಷಸೇವಿಸಿ ಹೇಮಾವತಿ ನದಿ ಸೇತುವೆ ಬಳಿ ಇರುವ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು. ಇವರಿಬ್ಬರನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ಗೆ ದಾಖಲಿಸಲಾಯಿತು. ಹಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಡರಾತ್ರಿ ರಾಜು ಮೃತಪಟ್ಟಿದ್ದಾನೆ. ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ