AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IBPS RRB Admit Card 2021: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ ಕ್ಲರ್ಕ್​ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್ ಮಾಡುವ ವಿಧಾನ ಹೀಗಿದೆ

ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ತಮ್ಮ ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳಲು ಅಕ್ಟೋಬರ್​ 17ರವರೆಗೂ ಸಮಯ ಇದೆ. ibps.in. ವೆಬ್​ಸೈಟ್ ಮೂಲಕ ಪ್ರವೇಶ ಪತ್ರ ಪಡೆಯಬಹುದು.

IBPS RRB Admit Card 2021: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​  ಕ್ಲರ್ಕ್​ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್ ಮಾಡುವ ವಿಧಾನ ಹೀಗಿದೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Sep 28, 2021 | 11:41 AM

Share

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​​ಗಳ ಆಫೀಸ್​ ಕ್ಲರ್ಕ್​ ಹುದ್ದೆಗಾಗಿ ಐಬಿಪಿಎಸ್​ (ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ -Institute of Banking Personnel Selection) ನಡೆಸಲಿರುವ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ (Admit Card) ನಿನ್ನೆ (ಸೆಪ್ಟೆಂಬರ್​ 27) ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಐಬಿಪಿಎಸ್​ (IBPS)ನ ಅಧಿಕೃತ ವೆಬ್​ಸೈಟ್​ ibps.in. ಗೆ ಬೇಟಿ ಕೊಟ್ಟು ತಮ್ಮ ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಆಫೀಸ್​ ಕ್ಲರ್ಕ್​ ಹುದ್ದೆಯ ಪರೀಕ್ಷೆಯನ್ನು ಆಫೀಸ್ ಅಸಿಸ್ಟೆಂಟ್​ ಹುದ್ದೆಯ ಪರೀಕ್ಷೆ ಎಂದೂ ಕರೆಯಲಾಗುವುದು. ಅಂದ ಹಾಗೇ, ಈ ಪರೀಕ್ಷೆ 2021ರ ಅಕ್ಟೋಬರ್​ 17ರಂದು ನಡೆಯಲಿದೆ.  

ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ತಮ್ಮ ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳಲು ಅಕ್ಟೋಬರ್​ 17ರವರೆಗೂ ಸಮಯ ಇದೆ. ವೆಬ್​ಸೈಟ್​ಗೆ ಭೇಟಿಕೊಟ್ಟು ಅಲ್ಲಿ ರೆಜಿಸ್ಟ್ರೇಶನ್​ ನಂಬರ್​ ಮತ್ತು ಪಾಸ್​ವರ್ಡ್​​ನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ಪ್ರವೇಶ ಪತ್ರ ಡೌನ್​ಲೋಡ್​ ಮಾಡಿಕೊಳ್ಳಬಹುದು. ಅಕ್ಟೋಬರ್​ 17ರಂದು ನಡೆಯಲಿರುವ ಪರೀಕ್ಷೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರ ತೆಗೆದುಕೊಂಡು ಹೋಗಬೇಕಾಗುತ್ತದೆ. ಮರೆತು ಹೋದರೆ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪುತ್ತದೆ.  ಅಕ್ಟೋಬರ್​ 17ರಂದು ನಡೆಯಲಿರುವುದು ಮುಖ್ಯ ಪರೀಕ್ಷೆಯಾಗಿದ್ದು, ಈಗಾಗಲೇ ಪೂರ್ವಭಾವಿ ಪರೀಕ್ಷೆಯನ್ನು ಬರೆದವರಿಗಷ್ಟೇ ಅವಕಾಶ ಇರುತ್ತದೆ.

ಪರೀಕ್ಷಾರ್ಥಿಗಳು ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ.. 1. ಮೊದಲು ಐಬಿಪಿಎಸ್​ನ ಅಧಿಕೃತ ವೆಬ್​ಸೈಟ್ ibps.in. ಗೆ ಭೇಟಿ ನೀಡಬೇಕು. 2. ಹೋಂಪೇಜ್​​ನಲ್ಲಿ ಕಾಣಿಸಿಕೊಳ್ಳುವ Click here to download your Online Main Exam Call letter for Recruitment of Group B Office Assistant (Multipurpose) ಎಂಬಲ್ಲಿ ಕ್ಲಿಕ್ ಮಾಡಿ. 3. ಅದಾದ ಬಳಿಕ ಡೌನ್​ಲೋಡ್ ಐಬಿಪಿಎಸ್​ ಆರ್​ಆರ್​ಬಿ ಕ್ಲರ್ಕ್​ 2021 ಅಡ್ಮಿಟ್ ಕಾರ್ಡ್​ ಎಂಬ ಲಿಂಕ್​ ಕಾಣಿಸಿಕೊಳ್ಳುತ್ತದೆ. ಅಲ್ಲಿ ಕ್ಲಿಕ್​ ಮಾಡಬೇಕು. ನಿಮ್ಮ ಪಾಸ್​ವರ್ಡ್​, ನೋಂದಣಿ ಸಂಖ್ಯೆಯನ್ನು ನಮೂದಿಸಿ ಲಾಗಿನ್​ ಆಗಿ. 4. ಆಗ ಸ್ಕ್ರೀನ್​ ಮೇಲೆ ಆಯಾ ಅಭ್ಯರ್ಥಿಗಳ ಪ್ರವೇಶ ಪತ್ರ ಕಾಣಿಸಿಕೊಳ್ಳುತ್ತದೆ. ಅದನ್ನು ಡೌನ್​ಲೋಡ್​ ಮಾಡಿಕೊಂಡು, ಪ್ರಿಂಟ್​ ತೆಗೆದಿಟ್ಟುಕೊಳ್ಳಿ. 5. ಪ್ರವೇಶ ಪತ್ರದಲ್ಲಿ ಪರೀಕ್ಷೆ ದಿನಾಂಕ, ಸಮಯ, ಆಯಾ ಪರೀಕ್ಷಾರ್ಥಿಗಳ ಪರೀಕ್ಷಾ ಕೇಂದ್ರ ಮತ್ತಿತರ ಖಾಸಗಿ ಮಾಹಿತಿಗಳು ಇರುತ್ತವೆ. ಡೌನ್​ಲೋಡ್​ ಮಾಡಿಕೊಂಡ ಬಳಿಕ ಸರಿಯಾಗಿ ಪರಿಶೀಲನೆ ಮಾಡಿಕೊಂಡು, ತಪ್ಪಿದ್ದರೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: SEBI: ಸೆಬಿಯಿಂದ ಸೆ.28 ಮಹತ್ವದ ಸಭೆ; ಹೊರಬೀಳಲಿರುವ ನಿರ್ಧಾರಗಳ ಕಡೆಗೆ ಹೂಡಿಕೆದಾರರ ಕಣ್ಣು

JDS: ಹಾನಗಲ್, ಸಿಂಧಗಿ ಅಸೆಂಬ್ಲಿ ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕೆ- ಹೆಚ್.ಡಿ. ಕುಮಾರಸ್ವಾಮಿ ಘೋಷಣೆ 

(Admit Card of IBPS RRB Clerk 2021 Mains exam released check here to know the process of Download)

ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ