1ನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲಿಕೆ ಸಂಘರ್ಷ: ಕೋರ್ಟ್ ಮೊರೆ ಹೋಗಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ

ಕರ್ನಾಟಕದಲ್ಲಿ 1ನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ವಯಸ್ಸಿನ ನಿಯಮದಿಂದ ಇದೀಗ ಮತ್ತೊಂದು ಸಂಘರ್ಷ ಉಂಟಾಗಿದೆ. ಪೋಷಕರ ಒತ್ತಾಯದಿಂದ ಈ ವರ್ಷ 5.5 ವರ್ಷಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ ಖಾಸಗಿ ಶಾಲೆಗಳ ಒಕ್ಕೂಟ ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ವಿರುದ್ಧ ಕೋರ್ಟ್ ಮೆಟಿಲ್ಲೇರಲು ಮುಂದಾಗಿವೆ.

1ನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲಿಕೆ ಸಂಘರ್ಷ: ಕೋರ್ಟ್ ಮೊರೆ ಹೋಗಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2025 | 9:04 AM

ಬೆಂಗಳೂರು, ಏಪ್ರಿಲ್​ 21: ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಶಿಕ್ಷಣ ಇಲಾಖೆ (Karnataka Education Department) ಈ ವರ್ಷಕ್ಕೆ ವಿನಾಯಿತಿಯನ್ನ ನೀಡಿದೆ. ಆದರೆ ಈ ವಿನಾಯತಿ ಈಗ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಸರ್ಕಾರದ ನಡೆ ಪ್ರಶ್ನಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ (Private Schools’ Association) ಕೋರ್ಟ್ ಮೆಟಿಲ್ಲೇರಲು ಮುಂದಾಗಿವೆ.

ಶಾಲಾ ಶಿಕ್ಷಣ ಇಲಾಖೆ ಹಾಗೂ ಸಚಿವರು ಸುದ್ದಿಗೋಷ್ಠಿ ಮಾಡಿ 2025-26 ನೇ ಸಾಲಿಗೆ ಸಿಮಿತಗೊಳಸಿ ಒಂದು ವರ್ಷ ವಯೋಮಿತಿ ಸಡಲಿಕೆ ಮಾಡಿದೆ. ಈ ವರ್ಷ 1ನೇ ತರಗತಿ ದಾಖಲಾತಿಗೆ 5.5 ವರ್ಷ ತುಂಬಿರಬೇಕು ಜೊತೆಗೆ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್ – 2 ಕಂಪ್ಲಿಟ್ ಆಗಿರಬೇಕು ಅಂತಾ ಕಂಡಿಷನ್ ಮೇಲೆ ಅವಕಾಶ ನೀಡಿದೆ.

ಇದನ್ನೂ ಓದಿ: ಶುಲ್ಕ ವಿವರ ಪ್ರಕಟಿಸಿದೆ ಖಾಸಗಿ ಶಾಲೆಗಳ ಉದ್ಧಟತನ: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್!

ಇದನ್ನೂ ಓದಿ
ಹೊಸ ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆ:ಏನದು?
ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಸಚಿವ ಮಧು ಬಂಗಾರಪ್ಪ ಘೋಷಣೆ
ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಪೋಷಕರು ಪರದಾಟ
ಕರ್ನಾಟಕದಲ್ಲಿ ಬೆಲೆ ಏರಿಕೆಯ ಪರ್ವಕಾಲ: ಏಕಾಏಕಿ ಶಾಲಾ ಫೀಸ್​ನಲ್ಲಿ ಏರಿಕೆ

ಮುಂದಿನ ವರ್ಷ ಕಡ್ಡಾಯ 6 ವರ್ಷ ಒಂದನೇ ತರಗತಿ ದಾಖಲಾತಿಗೆ ತುಂಬಿರಬೇಕು ಅಂತಾ ಹೇಳಿದೆ. ಆದರೆ ಇದು ಸಿಬಿಎಸ್​ಇ ಹಾಗೂ ಐಸಿಎಸ್ಇ ಶಾಲೆಗಳು ಗೊಂದಲಕ್ಕೆ ಕಾರಣವಾಗಿದೆ. ಕಳೆದ ವರ್ಷ ಸಿಬಿಎಸ್​ಇ ಬೋರ್ಡ್ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಅಂತಾ ಆದೇಶ ನೀಡಿತ್ತು. ಆದರೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಈ ವರ್ಷಕ್ಕೆ ಸಿಮೀತಗೊಳಸಿ 5.5 ಕ್ಕೆ ವಯೋಮಿತಿ ಇಳಿಕೆ ಮಾಡಿದೆ. ಸಿಬಿಎಸ್​ಇ ಬೋರ್ಡ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಹೀಗಾಗಿ ಸಿಬಿಎಸ್​ಇ ಶಾಲೆಗಳಿಗೆ ಒಂದನೇ ತರಗತಿಯ ದಾಖಲಾತಿಯ ಗೊಂದಲ ಕೇಳಿ ಬಂದಿದೆ. ಮತ್ತೊಂದಡೆ 1 ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಲಿಕೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ. ಸರ್ಕಾರದ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.

ಕೋರ್ಟ್ ಮೊರೆ ಹೋಗಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ

ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಹಿಂದೆ ವಯೋಮಿತಿ ವಿಚಾರಕ್ಕೆ ನೀಡಿರುವ ಆದೇಶವನ್ನ ಫಾಲೋ ಮಾಡಿದ್ದೀವಿ. ಇದರ ಪ್ರಕಾರವೇ ದಾಖಲಾತಿ ಕೂಡಾ ಮಾಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಈಗ ಏಕಾಏಕಿ ಈ ನಿರ್ಧಾರಕ್ಕೆ ಬಂದಿರೋದಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ. ಮುಂದಿನ ವರ್ಷಕ್ಕೂ ವಯೋಮಿತಿ ಸಡಲಿಕೆ ನೀಡಬೇಕಾದ ಅವಶ್ಯಕತೆ ಎದುರಾಗಿದೆ ಅಂತಾ ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.

ಸರ್ಕಾರ ಈ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿದೆ. ಜೊತೆಗೆ ಯುಕೆಜಿ ಕಂಪ್ಲೀಟ್ ಮಾಡಿರಬೇಕು ಅಂತಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಫಾಲನೇ ಮಾಡಿಕೊಂಡೇ ಎಲ್​ಕೆಜಿ ಶಾಲೆಗೆ ದಾಖಲಾದ ಮಕ್ಕಳ ಸ್ಥಿತಿ ಏನು ಅಂತಾ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ಹೊರ ಹಾಕಿದ್ದಾರೆ. ದೇಶದಲ್ಲಿ ಈಗಾಗಲೇ ಎಲ್ಲಡೆ 1 ನೇ ತರಗತಿಯ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕು ಅಂತಾ ಇದೆ. ರಾಜ್ಯದಲ್ಲಿ ಹೊಸ ರೂಲ್ಸ್ ತಂದರೆ ಸಮಸ್ಯೆಯಾಗುತ್ತೆ ಅಂತೀರೊ ಖಾಸಗಿ ಶಾಲೆಗಳು, ಆದ್ರೆ ಪೋಷಕರ ಒಕ್ಕೂಟ ಮಾತ್ರ ನಾವು ಸರ್ಕಾರದ ಪರ ಇದ್ದೇವೆ. ಕೋರ್ಟ್​ಗೆ ಸರ್ಕಾರದ ಪರದ ನಾವು ಹೋಗ್ತೀವಿ ಅಂತಿದ್ದಾರೆ.

ಮಹರಾಷ್ಟ್ರ ಸರ್ಕಾರವೂ ನಿನ್ನೆ ಒಂದನೇ ತರಗತಿಗೆ 6 ವರ್ಷ ಕಡ್ಡಾಯ ಅಂತಾ ಆದೇಶ ನೀಡಿದೆ. ಇದರಿಂದ ಮಹರಾಷ್ಟ್ರಕ್ಕೆ ಟ್ರಾನ್ಸಫರ್ ಆಗುವ ವಿದ್ಯಾರ್ಥಿ ಹಾಗೂ ಪೋಷಕರಿಗೂ ಸಮಸ್ಯೆಯಾಗುವ ಸಾಧ್ಯತೆ ಎದುರಾಗಿದೆ.

ಇದನ್ನೂ ಓದಿ: ಹೊಸ ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆ: ಮುಂದಿನ ವರ್ಷಕ್ಕೂ ನೀಡುವಂತೆ ಪೋಷಕರ ಆಗ್ರಹ

ಪೋಷಕರ ಒತ್ತಾಯದ ಬಳಿಕ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವರ್ಷ ವಯೋಮಿತಿ ಸಡಲಿಕೆ ಏನೋ ನೀಡಿದ್ದಾರೆ. ಆದರೆ ಇದರಿಂದ ಈಗ ಸರ್ಕಾರದ ಆದೇಶ ಫಾಲೋ ಮಾಡಿದ ಪೋಷಕರು ಹಾಗೂ ಯುಕೆಜಿಯಲ್ಲಿ ಓದುತ್ತಿರುವ ಹಾಗೂ ಮುಂದಿನ ವರ್ಷ ಜೂನ್​ಗೆ 6 ವರ್ಷ ಕಂಪ್ಲೀಟ್ ಆಗದ ಪೋಷಕರು ಮಾತ್ರ ಈ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದು, ಖಾಸಗಿ ಶಾಲೆಗಳ ಒಕ್ಕೂಟವೂ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.