ಮೆರಿಟ್ ಲಿಸ್ಟ್ ಪ್ರಕಾರ ಕೌನ್ಸೆಲಿಂಗ್ ನಡೆಯದ ಆರೋಪ; ಬೆಂಗಳೂರು ಉತ್ತರ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಸುಮಾರು 400 ರಾಂಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಬಿಸಿಯು ಯನಿವರ್ಸಿಟಿ ವಿದ್ಯಾರ್ಥಿಗಳಿಗೆ ಮಾತ್ರ ಆಧ್ಯತೆ ನೀಡಲಾಗಿದೆ ಎಂದು ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ, ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ವಾಗ್ವಾದ ಏರ್ಪಟ್ಟಿದೆ.

ಮೆರಿಟ್ ಲಿಸ್ಟ್ ಪ್ರಕಾರ ಕೌನ್ಸೆಲಿಂಗ್ ನಡೆಯದ ಆರೋಪ; ಬೆಂಗಳೂರು ಉತ್ತರ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮೆರಿಟ್ ಲಿಸ್ಟ್ ಪ್ರಕಾರ ಕೌನ್ಸೆಲಿಂಗ್ ನಡೆಯದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸೆಂಟ್ರಲ್ ಕಾಲೇಜು ಮುಂದೆ ವಿದ್ಯಾರ್ಥಿಗಳಿಂದ ಧರಣಿ ನಡೆಸಲಾಗಿದೆ. ಸುಮಾರು 400 ರಾಂಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಬಿಸಿಯು ಯನಿವರ್ಸಿಟಿ ವಿದ್ಯಾರ್ಥಿಗಳಿಗೆ ಮಾತ್ರ ಆಧ್ಯತೆ ನೀಡಲಾಗಿದೆ ಎಂದು ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ, ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ವಾಗ್ವಾದ ಏರ್ಪಟ್ಟಿದೆ.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ. 400 ರಾಂಕ್ ವಿದ್ಯಾರ್ಥಿಗಳಲ್ಲಿ ಮೊದಲ ಆದ್ಯತೆ ಬಿಸಿಯು ಯನಿವರ್ಸಿಟಿಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿದೆ. ಎಂಎಸ್​ಸಿ, ಕೆಮೆಸ್ರ್ಟಿ, ಅಪ್ಲೀಕೇಷನ್​ಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿ ವಾಗ್ವಾದ ಉಂಟಾಗಿದೆ. ರಾಂಕ್ ಲಿಸ್ಟ್ ಪ್ರಕಾರ ಸೀಟ್ ಅಲಾಟ್ ಆಗಲಿ ಎಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ.

ಬೆಂಗಳೂರು ವಿವಿ ತ್ರಿಭಜನೆ ಆಪತ್ತು ತಂದಿದೆ ಎಂದು ಹೇಳಲಾಗುತ್ತಿದೆ. ಬಿಎಸ್​ಸಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಬಿಎಸ್​ಸಿ ಬಳಿಕ ಎಮ್​ಎಸ್​ಸಿ ವ್ಯಾಸಾಂಗ ಮಾಡಲು ಕಾಲೇಜುಗಳೇ ಇಲ್ಲದಂತಾಗಿದೆ. ಬೆಂಗಳೂರು ಉತ್ತರ ವಿವಿಯಲ್ಲಿ ವ್ಯಾಸಾಂಗ ಮಾಡಿದ್ದ ವಿದ್ಯಾರ್ಥಿಗಳಿಗೆ, ಬೆಂಗಳೂರು ಉತ್ತರ ವಿವಿಯಲ್ಲಿ ಎಮ್​ಎಸ್​ಸಿ ರಸಾಯನಶಾಸ್ತ್ರದಲ್ಲಿ ಯಾವುದೇ ಕಾಲೇಜುಗಳು ಇಲ್ಲ. ಹೀಗಾಗಿ ಬೆಂಗಳೂರು ಕೇಂದ್ರ ವಿವಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಮೊದಲು ಎಲ್ಲಾ ವಿದ್ಯಾರ್ಥಿಗಳಿಗೂ ಅಪ್ಲಿಕೇಷನ್ ಕೊಟ್ಟಿದ್ದ ಬೆಂಗಳೂರು ಸೆಂಟ್ರಲ್ ವಿವಿ, ಇಂದು ಮೊದಲನೇ ದಿನದ ಕೌನ್ಸಿಲಿಂಗ್​ಗೆ ವಿದ್ಯಾರ್ಥಿಗಳನ್ನು ಬರೋಕೆ ಹೇಳಿತ್ತು. ಆದರೆ ಮೊದಲು ನಮ್ಮ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ಎಂದು ಬೆಂಗಳೂರು ಸೆಂಟ್ರಲ್ ವಿವಿ ಹೇಳುತ್ತಿದೆ. ಬೆಂಗಳೂರು ಉತ್ತರ ವಿವಿಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಬಿಎಸ್​ಸಿ ವ್ಯಾಸಾಂಗ ಮಾಡಿದ್ದರು. ಈಗ ಆ ವಿದ್ಯಾರ್ಥಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಬೆಂಗಳೂರು ಕೇಂದ್ರ ವಿವಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: Niranjan Vanalli: ಬೆಂಗಳೂರು ಉತ್ತರ ವಿವಿ ಕುಲಪತಿಯಾಗಿ ನಿರಂಜನ್ ವಾನಳ್ಳಿ ನೇಮಕ

ಇದನ್ನೂ ಓದಿ: ಎಂಬಿಎ ಸಹಿತ ಹಲವು ಪರೀಕ್ಷೆಗಳನ್ನು ಮುಂದೂಡಿದ ಬೆಂಗಳೂರು ವಿಶ್ವವಿದ್ಯಾಲಯ

Click on your DTH Provider to Add TV9 Kannada