
ನೀವು ಇನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಯೇ ಅಥವಾ ಉದ್ಯೋಗದಲ್ಲಿದ್ದು ಹೊಸ ಕೌಶಲ್ಯಗಳನ್ನು ಕಲಿತು ವೃತ್ತಿಜೀವನದಲ್ಲಿ ಬೆಳೆಯಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಉಚಿತವಾಗಿ ಆಧುನಿಕ ಕೌಶಲ್ಯ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಜಾಗತಿಕ ಆನ್‌ಲೈನ್ ಶಿಕ್ಷಣ ವೇದಿಕೆಯಾದ edX ಸಹಯೋಗದೊಂದಿಗೆ ಎಸ್‌ಬಿಐ ಈ ಕೋರ್ಸ್‌ಗಳನ್ನು ಉಚಿತವಾಗಿ ನೀಡುತ್ತಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತರು ಮಾರ್ಚ್ 31, 2027 ರವರೆಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಎಸ್‌ಬಿಐ ವಿನ್ಯಾಸಗೊಳಿಸಿರುವ ಈ ಕೋರ್ಸ್‌ಗಳು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಇವೆ. ಇವುಗಳ ಪ್ರಮುಖ ಲಕ್ಷಣಗಳು ಇಲ್ಲಿವೆ. ಅಭ್ಯರ್ಥಿಗಳು ತಮ್ಮ ಅನುಕೂಲಕರ ಸಮಯದಲ್ಲಿ ಮತ್ತು ವೇಗದಲ್ಲಿ ತರಗತಿಗಳಿಗೆ ಹಾಜರಾಗಬಹುದು. ಎಸ್‌ಬಿಐನ ಸುದೀರ್ಘ ಬ್ಯಾಂಕಿಂಗ್ ಮತ್ತು ತರಬೇತಿ ಅನುಭವದ ಆಧಾರದ ಮೇಲೆ ಕೋರ್ಸ್‌ಗಳನ್ನು ರೂಪಿಸಲಾಗಿದೆ. 25,000 ಕ್ಕೂ ಹೆಚ್ಚು ಇ-ಪಾಠಗಳು, ಕೇಸ್ ಸ್ಟಡೀಸ್ (Case Studies), ಲೇಖನಗಳು ಮತ್ತು ವೀಡಿಯೊಗಳ ಮೂಲಕ ಸರಳವಾಗಿ ಬೋಧಿಸಲಾಗುತ್ತದೆ. ಸಂಪೂರ್ಣ ಕೋರ್ಸ್ ಕಲಿಕೆ ಉಚಿತವಾಗಿರುತ್ತದೆ. ಆದರೆ, ಪರಿಶೀಲಿಸಿದ ಅಧಿಕೃತ ಪ್ರಮಾಣಪತ್ರ (Verified Certificate) ಬಯಸುವವರು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಕೋರ್ಸ್‌ನಲ್ಲಿ ಪಾಲ್ಗೊಳ್ಳಲು ಯಾವುದೇ ಕೋಡಿಂಗ್ ಕೌಶಲ್ಯದ ಅಗತ್ಯವಿಲ್ಲ. ವೃತ್ತಿಪರರು, ವ್ಯವಸ್ಥಾಪಕರು ಹಾಗೂ ಉದ್ಯಮಿಗಳು ಪ್ರಾಯೋಗಿಕ ಉದಾಹರಣೆಗಳ ಮೂಲಕ ತಮ್ಮ ದೈನಂದಿನ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳಲು ಕೃತಕ ಬುದ್ಧಿಮತ್ತೆ (AI) ಹಾಗೂ ಜನರೇಟಿವ್ AI ಅನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸಲಾಗುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದು, ಈ ಕೋರ್ಸ್ ಗ್ರಾಹಕ ಸೇವೆ, ಪ್ರಕ್ರಿಯೆ ನಿರ್ವಹಣೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಏಜೆಂಟ್ AI (Agentic AI) ನ ಅನ್ವಯಗಳ ಬಗ್ಗೆ ಪ್ರಾಯೋಗಿಕ ತಿಳುವಳಿಕೆಯನ್ನು ನೀಡುತ್ತದೆ.
ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗಾಗಿ ಈ ಕೋರ್ಸ್ ರೂಪಿಸಲಾಗಿದೆ. ಸೂಕ್ತ ವಿಷಯ (Content) ರಚಿಸುವುದು, ಆನ್‌ಲೈನ್ ವಿಷಯವನ್ನು ಪ್ರಚಾರ ಮಾಡುವುದು, ಕಂಟೆಂಟ್ ಮಾರ್ಕೆಟಿಂಗ್ ಉಪಕರಣಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವ ತಂತ್ರಗಳನ್ನು ಇಲ್ಲಿ ಕಲಿಯಬಹುದು.
ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕೃಷಿ ಉತ್ಪಾದಕರನ್ನು ಜಾಗತಿಕ ಮಾರುಕಟ್ಟೆ ಮತ್ತು ಗ್ರಾಹಕರೊಂದಿಗೆ ಸಂಪರ್ಕಿಸುವಲ್ಲಿ ಇ-ಕಾಮರ್ಸ್ ವೇದಿಕೆಗಳ ಪಾತ್ರವನ್ನು ಈ ಕೋರ್ಸ್ ವಿವರಿಸುತ್ತದೆ. ರೈತರು, ಸಹಕಾರ ಸಂಘಗಳು ಮತ್ತು ಕೃಷಿ-ಉದ್ಯಮಿಗಳು ನ್ಯಾಯಯುತ ಬೆಲೆ ಪಡೆಯಲು ಮತ್ತು ಅಂತರರಾಷ್ಟ್ರೀಯ ಬೇಡಿಕೆಯನ್ನು ಬಳಸಿಕೊಳ್ಳಲು ಈ ಕೋರ್ಸ್ ಸಹಕಾರಿಯಾಗಿದೆ.
ಆಸಕ್ತ ಅಭ್ಯರ್ಥಿಗಳು edX ಆನ್‌ಲೈನ್ ಪೋರ್ಟಲ್ ಗೆ ಭೇಟಿ ನೀಡಿ, ಎಸ್‌ಬಿಐ (SBI) ನೀಡುವ ಕೋರ್ಸ್‌ಗಳನ್ನು ಹುಡುಕಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ನಿಮ್ಮ ವೃತ್ತಿಜೀವನಕ್ಕೆ ಹೊಸ ಮೆರಗು ನೀಡಲು ಈ ಅವಕಾಶವನ್ನು ಬಳಸಿಕೊಳ್ಳಿ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ