CBSE Class 10 Result 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ; ಆನ್​ಲೈನ್​ ಮೂಲಕ ರಿಸಲ್ಟ್ ನೋಡಲು ಹೀಗೆ ಮಾಡಿ..

| Updated By: Lakshmi Hegde

Updated on: Aug 03, 2021 | 12:11 PM

ಸಿಬಿಎಸ್​ಸಿ ಫಲಿತಾಂಶ 2021: ಈ ಬಾರಿ ಕೊವಿಡ್​ 19 ಕಾರಣದಿಂದ ಸಿಬಿಎಸ್​ಇ ಪರೀಕ್ಷೆಯೇ ಇಲ್ಲದೆ ಕಾರಣ ಫಲಿತಾಂಶಕ್ಕೆ ಸಂಬಂಧಪಟ್ಟು ಗೊಂದಲಗಳು ಎದ್ದಿದ್ದವು. ಅಷ್ಟೇ ಅಲ್ಲ, ಫಲಿತಾಂಶದ ದಿನಾಂಕ ಕೂಡ ಪದೇಪದೆ ಮುಂದೂಡಲ್ಪಟ್ಟಿತ್ತು.

CBSE Class 10 Result 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ; ಆನ್​ಲೈನ್​ ಮೂಲಕ ರಿಸಲ್ಟ್ ನೋಡಲು ಹೀಗೆ ಮಾಡಿ..
ಸಾಂಕೇತಿಕ ಚಿತ್ರ
Follow us on

ಸಿಬಿಎಸ್​ಇ 10ನೇ ತರಗತಿ ಫಲಿತಾಂಶ (CBSE Class 10 Result 2021) ಪ್ರಕಟವಾಗಿದೆ. ನಿನ್ನೆ ಆಗಸ್ಟ್​ 2ರಂದೇ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಮುಂದೂಡಲ್ಪಟ್ಟಿತ್ತು. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ 10ನೇ ತರಗತಿ ಫಲಿತಾಂಶ (CBSE Class 10 Result 2021) ಪ್ರಕಟಿಸುವುದಾಗಿ ಸಿಬಿಎಸ್​ಇ(CBSE) ತನ್ನ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಅಪ್​ಡೇಟ್​ ಮಾಡಿತ್ತು.  ಹಾಗೇ, ಇಂದು ಸುಮಾರು 20 ಲಕ್ಷ ವಿದ್ಯಾರ್ಥಿಗಳು ತಮ್ಮ ಸಿಬಿಎಸ್​ಇ 10ನೇ ತರಗತಿ ಫಲಿತಾಂಶವನ್ನು ಪಡೆದಿದ್ದಾರೆ. ಹಾಗೇ, ಈ ಫಲಿತಾಂಶವನ್ನು ಆನ್​ಲೈನ್ ಮೂಲಕವೇ ವೀಕ್ಷಿಸಬಹುದಾಗಿದೆ. ಸಿಬಿಎಸ್​ಇಯ ವೆಬ್​ಸೈಟ್​ಗಳು, ಆ್ಯಪ್​ಗಳು, ಡಿಜಿಲಾಕರ್​ ಮೂಲಕ ವಿದ್ಯಾರ್ಥಿಗಳಿಗೆ ರಿಸಲ್ಟ್ ನೋಡುವ ಅವಕಾಶ ಕಲ್ಪಿಸಲಾಗಿದೆ.

ಸಿಬಿಎಸ್​ಇ 10ನೇ ತರಗತಿ ಫಲಿತಾಂಶ(CBSE Class 10 Result 2021)ವನ್ನು http://cbseresults.nic.in  ವೆಬ್​ಸೈಟ್​ ಮೂಲಕ ವೀಕ್ಷಿಸುವ ವಿಧಾನ ಇಲ್ಲಿದೆ..ನೋಡಿ

1. ಮೊದಲು cbseresults.nic.in ವೆಬ್​ಸೈಟ್​ಗೆ ಭೇಟಿ ನೀಡಿ
2. ಅಲ್ಲಿ ಕಾಣಿಸುವ  CBSE Class 10 ರಿಸಲ್ಟ್ ಲಿಂಕ್​ ಮೇಲೆ ಕ್ಲಿಕ್​ ಮಾಡಿ.
3. ನಂತರ ನಿಮ್ಮ ರಿಜಿಸ್ಟರ್​ ನಂಬರ್​ ಮತ್ತು ರೋಲ್​ನಂಬರ್​ ಸೇರಿ, ಉಳಿದೆಲ್ಲ ವಿವರಗಳನ್ನೂ ದಾಖಲಿಸಿ ಲಾಗಿನ್​ ಆಗಿ.
4. ಆಗ ಸ್ಕ್ರೀನ್​ ಮೇಲೆ ನಿಮ್ಮ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಕಾಣಿಸುತ್ತದೆ
5. ಆ ಮಾರ್ಕ್​ಶೀಟ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ. ಪ್ರಿಂಟ್ ಕೂಡ ತೆಗೆದುಕೊಳ್ಳಿ

ಇದೇ ವಿಧಾನದಲ್ಲಿ cbse.nic.in ಮೂಲಕವೂ ನಿಮ್ಮ ರಿಸಲ್ಟ್ ನೋಡಬಹುದಾಗಿದೆ.

ಡಿಜಿಲಾಕರ್ ಆ್ಯಪ್ ಮೂಲಕ ಫಲಿತಾಂಶ ವೀಕ್ಷಣೆ ಹೇಗೆ? ಇಲ್ಲಿದೆ ನೋಡಿ..
1. ಡಿಜಿಲಾಕರ್ (DigiLocker) ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳಿ
2. Access DigiLocker ಎಂದಿರುವಲ್ಲಿ ಕ್ಲಿಕ್​ ಮಾಡಿ
3. ನಂತರ ಅಲ್ಲಿ ನಿಮ್ಮ ಹೆಸರು ನಮೂದಿಸಬೇಕು. ಆಧಾರ್​ ಕಾರ್ಡ್​ನಲ್ಲಿ ಹೇಗೆ ಹೆಸರು ಇದೆಯೋ, ಹಾಗೇ ನಮೂದಿಸಬೇಕು.
4. ಅದಾದ ಬಳಿಕ ಆಧಾರ್​ಕಾರ್ಡ್​ನಲ್ಲಿರುವಂತೆ, ನಿಮ್ಮ ಹುಟ್ಟಿದ ದಿನ, ಇಸ್ವಿ ನಮೂದಿಸಿ
5. ಪುರುಷ/ಮಹಿಳೆ..ಎಂಬಿರುವಲ್ಲಿ ನಿಮ್ಮ ಜಂಡರ್ ಯಾವುದೆಂದು ಆಯ್ಕೆ ಮಾಡಿ
6. ನಿಮ್ಮ ಮೊಬೈಲ್​ ನಂಬರ್ ನಮೂದಿಸಿ
7. ಒಂದು ಸೆಕ್ಯೂರಿಟಿ ಪಿನ್​ ಸೆಟ್​ ಮಾಡಿಕೊಳ್ಳಿ
8. ಆಧಾರ್ ನಂಬರ್​, ಇಮೇಲ್​ ಐಡಿಗಳನ್ನೆಲ್ಲ ನಮೂದಿಸಿ, ಸಬ್​ಮಿಟ್ ಮಾಡಿ.
9. ಅದಾದ ಬಳಿಕ ಯೂಸರ್​ ನೇಮ್​ ಸೆಟ್ ಮಾಡಿಕೊಳ್ಳಿ. ಇಷ್ಟಾದ ಬಳಿಕ ನೀವು ಸುಲಭವಾಗಿ ನಿಮ್ಮ ರಿಸಲ್ಟ್ ಪಡೆಯಬಹುದು.

ಈ ಬಾರಿ ಕೊವಿಡ್​ 19 ಕಾರಣದಿಂದ ಸಿಬಿಎಸ್​ಇ ಪರೀಕ್ಷೆಯೇ ಇಲ್ಲದೆ ಕಾರಣ ಫಲಿತಾಂಶಕ್ಕೆ ಸಂಬಂಧಪಟ್ಟು ಗೊಂದಲಗಳು ಎದ್ದಿದ್ದವು. ಅಷ್ಟೇ ಅಲ್ಲ, ಫಲಿತಾಂಶದ ದಿನಾಂಕ ಕೂಡ ಪದೇಪದೆ ಮುಂದೂಡಲ್ಪಟ್ಟಿತ್ತು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಜು.20ರಂದು ಫಲಿತಾಂಶವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಬಾರಿ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಅಂಕ ಕೊಡುವ ಕಾರಣ, ಶಾಲೆಗಳಿಂದ ಅಂಕಗಳು ತಲುಪುವುದು ವಿಳಂಬವಾಯಿತು. ಈ ಮಧ್ಯೆ ಸಿಬಿಎಸ್​ಇ 12ನೇ ತರಗತಿ ಫಲಿತಾಂಶವನ್ನು ಜು.31ರೊಳಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಗಡುವು ನೀಡಿದ್ದರಿಂದ, ಶುಕ್ರವಾರ ಅದನ್ನು ಪ್ರಕಟಿಸಿ, 10ನೇ ತರಗತಿ ಫಲಿತಾಂಶವನ್ನು ಮತ್ತೆ ಮುಂದೂಡಲಾಗಿತ್ತು.

ಇದನ್ನೂ ಓದಿ: ತಣ್ಣೀರು ತರಲು ಚಿತಾಗಾರಕ್ಕೆ ಹೋದ 7 ವರ್ಷದ ಬಾಲಕಿ; ಮುಂದಾಗಿದ್ದೆಲ್ಲ ಊಹಿಸಲಾರದಷ್ಟು ಭೀಕರ

ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​-ಜಾನ್​ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್​ ನಟರು ಫಿದಾ

Published On - 12:01 pm, Tue, 3 August 21