ಪ್ರತಿಷ್ಠಿತ ಖಾಸಗಿ ವಿವಿಗಳಲ್ಲಿ ಪದವಿ ಶಿಕ್ಷಣ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗ ಗುಡ್​ನ್ಯೂಸ್

ಎಂಜನೀಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆಗೆ ಮಾತ್ರ ಮೀಸಲಾಗಿದ್ದ ಸಿಇಟಿ ಈಗ ಪದವಿ ಸೀಟ್ ಹಂಚಿಕೆಗೂ ಲಗ್ಗೆ ಇಟ್ಟಿದೆ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಸೀಟ್ ಹಂಚಿಕೆಗೂ ಕಾಮನ್ ಪ್ರವೇಶ ಪರೀಕ್ಷೆ ನಡೆಸಲು ಮುಂದಾಗಿದ್ದು.. ಪ್ರತಿಷ್ಠಿತ ಖಾಸಗಿ ವಿವಿಗಳಲ್ಲಿ ಪದವಿ ಶಿಕ್ಷಣದ ಕನಸ್ಸು ಕಾಣುತ್ತಿರುವ ವಿದ್ಯಾರ್ಥಿಗಳಿಗ ಬಂಪರ್ ನ್ಯೂಸ್ ಸಿಕ್ಕಿದೆ.

ಪ್ರತಿಷ್ಠಿತ ಖಾಸಗಿ ವಿವಿಗಳಲ್ಲಿ ಪದವಿ ಶಿಕ್ಷಣ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗ ಗುಡ್​ನ್ಯೂಸ್
ವಿದ್ಯಾರ್ಥಿಗಳು
Follow us
Vinay Kashappanavar
| Updated By: ರಮೇಶ್ ಬಿ. ಜವಳಗೇರಾ

Updated on:Sep 26, 2024 | 11:02 PM

ಬೆಂಗಳೂರು, (ಸೆಪ್ಟೆಂಬರ್ 26) : ಪಿಯುಸಿ ಬಳಿಕ ಪದವಿ ಶಿಕ್ಷಣದ ಕನಸು ಕಂಡ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿಯೂ ಸರ್ಕಾರಿ ಕೋಟಾದ ಪದವಿ ಸೀಟ್ ಗಳು ಸಿಗಲಿದೆ. ಹೌದು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಪದವಿ ಕೋರ್ಸ್ ಗಳಿಗೂ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ 40% ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್ ಗಳನ್ನ ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100 ಕ್ಕೆ 100 ಮ್ಯಾನೇಜಮೆಂಟ್ ಕೋಟಾದಡಿ ಸೀಟ್ ನೀಡಿ ಪದವಿ ದಾಖಲಾತಿ ಪಡೆಯುತ್ತಿದ್ದರು. ಇದ್ದರಿಂದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೆ ಪರದಾಡುತ್ತಿದ್ದರು. ಹೀಗಾಗಿ ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ 40% ಸರ್ಕಾರಿ ಕೋಟಾದ ಸೀಟ್ ಗಳನ್ನ ಈ ವರ್ಷದಿಂದ ಪಡೆಯಲು ಮುಂದಾಗಿದೆ. ಈ ಸೀಟ್ ಗಳ ಹಂಚಿಕೆಗೆ ಮುಂದಿನ ವರ್ಷದಿಂದ ಎಲ್ಲ ವಿವಿಗಳ ಪದವಿ ಕೋರ್ಸ್ ಗೆ ಹಾಗೂ ಪಿಜಿ ಕೋರ್ಸ್ ಗೆ CET ಪರೀಕ್ಷೆ ನಡೆಸಲು ಮುಂದಾಗಿದೆ.

ಈಗಾಗಲೇ 17 ಖಾಸಗಿ ವಿಶ್ವವಿದ್ಯಾಲಯಗಳಿಂದಲೂ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬಹುತೇಕ ಖಾಸಗಿ ವಿವಿಗಳು ಈಗಾಗಲೇ CET ಪರೀಕ್ಷೆ ನಡೆಸಲು ಒಪ್ಪಿಕೊಂಡಿವೆ. 2024-25 ನೇ ಸಾಲಿನ ಪದವಿ ಕೋರ್ಸ್ ಗಳ ದಾಖಲಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಸರ್ಕಾರಿ ಹಾಗೂ ಖಾಸಗಿ ವಿವಿಗಳಲ್ಲಿನ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದ. CET ಪರೀಕ್ಷೆಯ ಮೂಲಕವೇ ಪದವಿ ಸೀಟ್ ಹಂಚಿಕೆಗೆ ಪ್ಲಾನ್ ರೂಪಿಸಿದ್ದು, ಎಲ್ಲ ವಿವಿಗಳ ನುಡುವೆ ಕಾಮನ್ ಎಂಟ್ರೆನ್ಸ್ ಪರೀಕ್ಷೆ ನಡೆಸಿ 2025-26 ರಿಂದ ಖಾಸಗಿ ವಿವಿಗಳಲ್ಲಿಯೂ ಸೀಟ್ ಹಂಚಿಕೆಗೆ ಇಲಾಖೆ ಮುಂದಾಗಿದೆ.

ಸರ್ಕಾರದ ನಡೆಯಿಂದ ಖಾಸಗಿ ಕಾಲೇಜುಗಳಲ್ಲಿಯೂ ಸರ್ಕಾರಿ ಕೋಟಾದ ಪದವಿ ಸೀಟ್ ಗಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಅಲ್ಲದೇ ಪ್ರತಿಷ್ಠಿತ ವಿವಿಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿಯೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಪದವಿ ಕೋರ್ಸ್ ಗಳಿಗೆ ದಾಖಲಾತಿ ಲಭ್ಯವಾಗಲಿದೆ.

ಕೆಇಎ ಅಥವಾ ಕಾಮೆಡ್​ ಕೆ ಮಾದರಿಯಲ್ಲಿ ಪರೀಕ್ಷೆ ಅಥವಾ ಆಯ್ಕೆ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಸೀಟ್ ಗಳನ್ನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಖಾಸಗಿ ಕಾಲೇಜುಗಳಲ್ಲಿ ಓದಬೇಕಂಬ ಕನಸ್ಸು ಕಂಡಿರುವ ಹಾಗೂ ಸರ್ಕಾರಿ ಕಾಲೇಜುಗಳಿಲ್ಲದ ಭಾಗಗಳಲ್ಲಿನ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.

Published On - 10:28 pm, Thu, 26 September 24

ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ