ಪಿಯು ಪರೀಕ್ಷೆ ಇಲ್ಲದೆ ಎಲ್ಲರೂ ತೇರ್ಗಡೆ: ಪದವಿ ತರಗತಿಗೆ ಕೊಠಡಿ, ಉಪನ್ಯಾಸಕರ ಸಮಸ್ಯೆ ಸಾಧ್ಯತೆ; ಪರಿಹಾರ ಕ್ರಮಕ್ಕೆ ಮುಂದಾದ ಉನ್ನತ ಶಿಕ್ಷಣ ಇಲಾಖೆ

ಇದು ಕಾಲೇಜುಗಳಲ್ಲಿ ಸಮಸ್ಯೆ ಅರಿಯಲು ಸಹಕಾರಿಯಾಗಲಿದೆ. ಬಳಿಕ ಪದವಿ ತರಗತಿಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದು ಟಿವಿ 9ಗೆ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯ ಕುಲಪತಿ ಲಿಂಗರಾಜ ಗಾಂಧಿ ಹೇಳಿಕೆ ನೀಡಿದ್ದಾರೆ.

ಪಿಯು ಪರೀಕ್ಷೆ ಇಲ್ಲದೆ ಎಲ್ಲರೂ ತೇರ್ಗಡೆ: ಪದವಿ ತರಗತಿಗೆ ಕೊಠಡಿ, ಉಪನ್ಯಾಸಕರ ಸಮಸ್ಯೆ ಸಾಧ್ಯತೆ; ಪರಿಹಾರ ಕ್ರಮಕ್ಕೆ ಮುಂದಾದ ಉನ್ನತ ಶಿಕ್ಷಣ ಇಲಾಖೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 24, 2021 | 2:48 PM

ಬೆಂಗಳೂರು: ಪಿಯು ಪರೀಕ್ಷೆ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ ಪರಿಣಾಮ ಇದೀಗ ಪದವಿ ಕಾಲೇಜುಗಳಿಗೆ ಕಮಿಟಿ ರಚಿಸುವಂತೆ ಸೂಚನೆ ನೀಡಲಾಗಿದೆ. ಪದವಿ ಕಾಲೇಜುಗಳು ಕಮಿಟಿ ರಚಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಮತ್ತು ರಾಜ್ಯದ 73 ವಿಶ್ವ ವಿದ್ಯಾಲಯಗಳಿಗೂ ನಿರ್ದೇಶನ ನೀಡಲಾಗಿದೆ. ಈ ಪ್ರಕ್ರಿಯೆಗೆ ಕಾಲೇಜುಗಳ ಪ್ರಾಂಶುಪಾಲರಿಗೆ ಒಂದು ವಾರಗಳ ಗಡುವು ಕೂಡ ನೀಡಲಾಗಿದ್ದು, LIC (Local Enquiry committee) ರಚಿಸುವಂತೆ ನಿರ್ದೇಶನ ನೀಡಲಾಗಿದೆ.

ಈ ಬಾರಿ ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೆ ಸುಮಾರು 6,66,497 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಿಂದಾಗಿ ಮುಂದೆ ಪದವಿ ತರಗತಿಗಳಿಗೆ ಕೊಠಡಿಗಳು, ಉಪನ್ಯಾಸಕರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆ ಕಾರಣದಿಂದ ಎಲ್ಲಾ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳಿಗೂ ಕಮಿಟಿ ರಚಿಸುವಂತೆ ಆದೇಶ ಹೊರಡಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ರಾಜ್ಯದ 73 ವಿವಿಗಳಿಗೂ ನಿರ್ದೇಶನ ನೀಡಲಾಗಿದೆ.

ರಾಜ್ಯದಲ್ಲಿರುವ ಎಲ್ಲ 430 ಸರ್ಕಾರಿ ಕಾಲೇಜುಗಳು, 365 ಅನುದಾನಿತ ಕಾಲೇಜುಗಳು, ಹಾಗೂ 900ಕ್ಕೂ ಹೆಚ್ಚು ಕಾಲೇಜುಗಳಿಗೆ ಗಡುವು ನೀಡಲಾಗಿದೆ. ಜುಲೈ 31ರ ಒಳಗೆ ತಮ್ಮ ಕಾಲೇಜುಗಳಲ್ಲಿ ಲಭ್ಯವಿರುವ ಕಟ್ಟಡಗಳು, ಪ್ರಾಧ್ಯಾಪಕರು, ಗ್ರಂಥಾಲಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳ ಮಾಹಿತಿ ನೀಡಿಲು ಡೆಡ್ ಲೈನ್ ನೀಡಲಾಗಿದೆ.

ಇದು ಕಾಲೇಜುಗಳಲ್ಲಿ ಸಮಸ್ಯೆ ಅರಿಯಲು ಸಹಕಾರಿಯಾಗಲಿದೆ. ಬಳಿಕ ಪದವಿ ತರಗತಿಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದು ಟಿವಿ 9ಗೆ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯ ಕುಲಪತಿ ಲಿಂಗರಾಜ ಗಾಂಧಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಆ. 2 ರಿಂದ ಶಾಲೆ ಆರಂಭ? ಆರೋಗ್ಯ ಇಲಾಖೆ ಅನುಮತಿಗೆ ಕಾದಿರುವ ಶಿಕ್ಷಣ ಇಲಾಖೆ

Karnataka PUC Exams 2021: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

(Higher Education Ministry suggests Colleges of Karnataka to form a Committee)