AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾವಂತರೂ ಸೈಬರ್ ವಂಚನೆಗೆ ಬಲಿಯಾಗುತ್ತಿರುವುದೇಕೆ? IIT ಮದ್ರಾಸ್ ಅಧ್ಯಯನದಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ!

ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ ಅಧ್ಯಯನದ ಪ್ರಕಾರ, ಉನ್ನತ ಶಿಕ್ಷಣ ಪಡೆದ ತಜ್ಞರು, ಬ್ಯಾಂಕರ್‌ಗಳು ಸೈಬರ್ ವಂಚನೆಗೆ ಬಲಿಯಾಗುತ್ತಿದ್ದಾರೆ. ತಾಂತ್ರಿಕ ಕೊರತೆಗಿಂತ ಮಾನಸಿಕ ದುರ್ಬಲತೆ ಮತ್ತು ಒತ್ತಡವನ್ನು ಅಪರಾಧಿಗಳು ಬಳಸಿಕೊಳ್ಳುತ್ತಾರೆ. ಸೈಬರ್ ವಂಚನೆಯು ಕೇವಲ ಹಣಕಾಸಿನ ನಷ್ಟಕ್ಕೆ ಸೀಮಿತವಾಗದೆ, ತೀವ್ರ ಮುಜುಗರ, ನಿದ್ರಾಹೀನತೆ, ಮಾನಸಿಕ ಖಿನ್ನತೆ ಮತ್ತು ಕುಟುಂಬದಲ್ಲಿ ಬಿರುಕು ಮೂಡುವಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡಿದೆ.

ವಿದ್ಯಾವಂತರೂ ಸೈಬರ್ ವಂಚನೆಗೆ ಬಲಿಯಾಗುತ್ತಿರುವುದೇಕೆ? IIT ಮದ್ರಾಸ್ ಅಧ್ಯಯನದಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ!
ಸೈಬರ್ ವಂಚನೆಗೆ ಬಲಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 02, 2026 | 2:49 PM

Share

ಉನ್ನತ ಶಿಕ್ಷಣ ಪಡೆದವರು ಮತ್ತು ತಂತ್ರಜ್ಞಾನದ ಸಂಪೂರ್ಣ ಅರಿವು ಹೊಂದಿರುವವರು ಸೈಬರ್ ವಂಚಕರ ಜಾಲಕ್ಕೆ ಬೀಳುವುದಿಲ್ಲ ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (IIT Madras) ನಡೆಸಿದ ಇತ್ತೀಚಿನ ಅಧ್ಯಯನವು ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದೆ. ಡಿಜಿಟಲ್ ಲೋಕದಲ್ಲಿ ಸಕ್ರಿಯರಾಗಿರುವವರು, ಬ್ಯಾಂಕಿಂಗ್ ಸಿಬ್ಬಂದಿ ಹಾಗೂ ಸೈಬರ್ ಭದ್ರತಾ ವಿಷಯದಲ್ಲಿ ಪ್ರಮಾಣಪತ್ರ ಹೊಂದಿರುವ ತಜ್ಞರು ಕೂಡ ಸೈಬರ್ ಕಳ್ಳರ ಕುತಂತ್ರಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ ಎಂಬ ಆಘಾತಕಾರಿ ಸತ್ಯ ಈ ಸಂಶೋಧನೆಯಿಂದ ತಿಳಿದುಬಂದಿದೆ.

ತಾಂತ್ರಿಕ ಕೊರತೆಗಿಂತ ಮಾನಸಿಕ ದುರ್ಬಲತೆಯೇ ವಂಚಕರ ಅಸ್ತ್ರ:

ಸೈಬರ್ ಅಪರಾಧಿಗಳು ಕೇವಲ ತಾಂತ್ರಿಕ ಜ್ಞಾನದ ಕೊರತೆಯನ್ನು ಬಂಡವಾಳ ಮಾಡಿಕೊಳ್ಳುವುದಿಲ್ಲ, ಬದಲಿಗೆ ಜನರ ಮಾನಸಿಕ ಸ್ಥಿತಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಾರೆ. ತುರ್ತಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಭಯ, ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆಯಾಗಬಹುದು ಎಂಬ ಆತಂಕ ಹಾಗೂ ತೀವ್ರ ಮಾನಸಿಕ ಒತ್ತಡವನ್ನು ಸೃಷ್ಟಿಸುವ ಮೂಲಕ ಸಂತ್ರಸ್ತರಿಂದ ತಕ್ಷಣವೇ ಹಣ ವರ್ಗಾಯಿಸುವಂತೆ ಮಾಡಲಾಗುತ್ತದೆ. ಈ ಅಧ್ಯಯನದಲ್ಲಿ ಭಾಗವಹಿಸಿದ ಸಂತ್ರಸ್ತರ ಪಟ್ಟಿಯಲ್ಲಿ ಐಟಿ ಉದ್ಯೋಗಿಗಳು, ವೈದ್ಯರು, ಬ್ಯಾಂಕರ್‌ಗಳು, ಹಣಕಾಸು ವಿಶ್ಲೇಷಕರು, ಸರ್ಕಾರಿ ಅಧಿಕಾರಿಗಳು ಮತ್ತು ಸೈಬರ್ ಸೆಕ್ಯುರಿಟಿ ತಜ್ಞರು ಸೇರಿದ್ದಾರೆ.

ಮಾನಸಿಕವಾಗಿ ಕುಗ್ಗಿದ ಸಮಯವನ್ನೇ ಕಾಯುವ ಅಪರಾಧಿಗಳು:

ವ್ಯಕ್ತಿಯು ತನ್ನ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಅತ್ಯಂತ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವಾಗ ಸೈಬರ್ ವಂಚಕರು ಅವರನ್ನು ಸುಲಭವಾಗಿ ಗುರಿಯಾಗಿಸುತ್ತಾರೆ. ಕುಟುಂಬದಲ್ಲಿ ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿವೃತ್ತಿಯ ನಂತರದ ಸಮಯ, ಉದ್ಯೋಗ ಹುಡುಕಾಟದ ಹಂತ ಅಥವಾ ಕೆಲಸದ ವಿಪರೀತ ಒತ್ತಡದಲ್ಲಿದ್ದಾಗ ವ್ಯಕ್ತಿಯು ಸೂಕ್ತವಾಗಿ ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಇಂತಹ ಮಾನಸಿಕ ಜಡತ್ವದ (Mental Paralysis) ಸ್ಥಿತಿಯನ್ನು ಸೈಬರ್ ಅಪರಾಧಿಗಳು ತಮ್ಮ ಲಾಭಕ್ಕೆ ಬಳಸಿಕೊಂಡು ತುರ್ತು ಹಣ ವರ್ಗಾವಣೆಗೆ ಬಲವಂತಪಡಿಸುತ್ತಾರೆ.

ಇದನ್ನೂ ಓದಿ: ಉದ್ಯಮಿಯಾಗಬೇಕಿದ್ದ ಟೆಕ್ಸ್‌ಟೈಲ್ ಎಂಜಿನಿಯರ್ ಈಗ 174 ಜೀವಗಳ ರಕ್ಷಕ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಗಾಥೆ ಇಲ್ಲಿದೆ

ಕೋಟ್ಯಂತರ ರೂಪಾಯಿ ನಷ್ಟ ಮತ್ತು ತೀವ್ರ ಮಾನಸಿಕ ಆಘಾತ:

ಈ ಅಧ್ಯಯನಕ್ಕಾಗಿ ಬೆಂಗಳೂರು, ಚೆನ್ನೈ, ಹೈದರಾಬಾದ್, ನವದೆಹಲಿ ಮತ್ತು ಮುಂಬೈ ನಗರಗಳಲ್ಲಿ 33 ಸಂತ್ರಸ್ತರನ್ನು (22 ಪುರುಷರು, 11 ಮಹಿಳೆಯರು, 12 ಹಿರಿಯ ನಾಗರಿಕರು) ಹಿಂದಿ, ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲಿ ಸುದೀರ್ಘವಾಗಿ ಸಂದರ್ಶಿಸಲಾಯಿತು. ಸಂತ್ರಸ್ತರು ಕೆಲವು ಸಾವಿರ ರೂಪಾಯಿಗಳಿಂದ ಹಿಡಿದು 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಸೈಬರ್ ವಂಚನೆಯು ಕೇವಲ ಹಣಕಾಸಿನ ನಷ್ಟಕ್ಕೆ ಸೀಮಿತವಾಗದೆ, ತೀವ್ರ ಮುಜುಗರ, ನಿದ್ರಾಹೀನತೆ, ಮಾನಸಿಕ ಖಿನ್ನತೆ ಮತ್ತು ಕುಟುಂಬದಲ್ಲಿ ಬಿರುಕು ಮೂಡುವಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡಿದೆ.

ಬಲವಾದ ಕಾನೂನು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಅಗತ್ಯತೆ:

ಶೇರು ಮಾರುಕಟ್ಟೆ ಹೂಡಿಕೆ ವಂಚನೆಗಳು, ಉದ್ಯೋಗದ ಹೆಸರಿನಲ್ಲಿ ಮೋಸ, ಡಿಜಿಟಲ್ ಪೇಮೆಂಟ್ ಫ್ರಾಡ್, ಮಾಲ್‌ವೇರ್ ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ನಂತಹ ಅಪರಾಧಗಳ ತಡೆಗೆ ಕೇವಲ ಡಿಜಿಟಲ್ ಸಾಕ್ಷರತೆ ಸಾಲದು. ಅನುಮಾನಾಸ್ಪದ ವಹಿವಾಟುಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಬ್ಯಾಂಕುಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳುವ ಬಲವಾದ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಪ್ರೊ. ಪಿ. ಕಂದಸ್ವಾಮಿ ಮತ್ತು ಪ್ರೊ. ನಂದನ್ ಸುದರ್ಶನಮ್ ಅವರ ನೇತೃತ್ವದ ಸಂಶೋಧನಾ ತಂಡ ಶಫಾರಸು ಮಾಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ