JEE Main 2021: ಜು.20ರಿಂದ ನಡೆಯಲಿರುವ ಜೆಇಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಹೀಗೆ ಡೌನ್ಲೋಡ್ ಮಾಡಿಕೊಳ್ಳಿ..
ಇಇ ಮುಖ್ಯ ಪರೀಕ್ಷೆಯ ನಾಲ್ಕನೇ ಹಂತದ ಪರೀಕ್ಷೆ ಜು.27ರಿಂದ ಆಗಸ್ಟ್2ರವರೆಗೆ ನಡೆಯಲಿದೆ. ಆದರೆ ಈ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಯಾದ ಬಗ್ಗೆಯಾಗಲಿ, ಯಾವಾಗ ಬಿಡುಗಡೆಯಾಗಬಹುದು ಎಂಬ ಬಗ್ಗೆಯಾಗಲಿ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.
ಜಂಟಿ ಪ್ರವೇಶ ಮುಖ್ಯ ಪರೀಕ್ಷೆ -2021(JEE Main-2021)ಯ ಮೂರನೇ ಸೆಶನ್ಸ್ನ ಪ್ರವೇಶ ಪತ್ರ (Admit Card)ವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency-NTA) ಬಿಡುಗಡೆ ಮಾಡಿದೆ. ಮೂರನೇ ಸೆಶನ್ಸ್ನ ಜೆಇಇ ಮುಖ್ಯ ಪ್ರವೇಶ ಪರೀಕ್ಷೆ ಜುಲೈ 20 ರಿಂದ 25ರವರೆಗೆ ನಡೆಯಲಿದೆ. ಈ ಪರೀಕ್ಷೆ ಏಪ್ರಿಲ್ನಲ್ಲಿ ನಡೆಯಬೇಕಿತ್ತು. ಆದರೆ ಕೊವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿತ್ತು. 2021ರ ಏಪ್ರಿಲ್ನಲ್ಲಿ ನಡೆಯಬೇಕಿದ್ದ ಸೆಶನ್ಸ್ ಮೂರರಲ್ಲಿ BE/BTech ಪತ್ರಿಕೆ-1 ಬರೆಯಲು ಅರ್ಜಿ ಸಲ್ಲಿಸಿದ್ದವರಿಗೆ ತಮ್ಮ ವಿವರಗಳಲ್ಲಿ ಏನಾದರೂ ಮಾರ್ಪಾಡು ಮಾಡುವಂತಿದ್ದರೆ ಮಾಡಲು ಜು.6 ರಿಂದ 8ರವರೆಗೆ ಸಮಯ ನೀಡಲಾಗಿತ್ತು ಎಂದು ಎನ್ಟಿಎ ಹೇಳಿದೆ. ಹಾಗೇ, ಈ ಬಾರಿ ಪರೀಕ್ಷೆಗಳು ನಡೆಯಲ್ಪಡುವ ನಗರಗಳು ಮತ್ತು ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಎನ್ಟಿಎ ಹೆಚ್ಚಿಸಿದೆ.
ಹಾಗೇ, ಜೆಇಇ ಮುಖ್ಯ ಪರೀಕ್ಷೆಯ ನಾಲ್ಕನೇ ಹಂತದ ಪರೀಕ್ಷೆ ಜು.27ರಿಂದ ಆಗಸ್ಟ್2ರವರೆಗೆ ನಡೆಯಲಿದೆ. ಆದರೆ ಈ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಯಾದ ಬಗ್ಗೆಯಾಗಲಿ, ಯಾವಾಗ ಬಿಡುಗಡೆಯಾಗಬಹುದು ಎಂಬ ಬಗ್ಗೆಯಾಗಲಿ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಇನ್ನು JEE-Main 2021ರ ಮೊದಲ ಎರಡು ಹಂತದ ಪರೀಕ್ಷೆಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿಯೇ ಮುಗಿದುಹೋಗಿವೆ. ಅದಾದ ನಂತರದ ಹಂತಗಳ ಪರೀಕ್ಷೆಗಳು ಕೊವಿಡ್ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಇದೀಗ ಮೂರನೇ ಹಂತದ ಪರೀಕ್ಷೆ ಬರೆಯುವವರು ತಮ್ಮ ಪ್ರವೇಶ ಪತ್ರ (Admit Card) ಡೌನ್ಲೋಡ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ..
1.ಮೊದಲು jeemain.nta.nic.in. ವೆಬ್ಸೈಟ್ಗೆ ಭೇಟಿ ನೀಡಿ. 2.ಅಲ್ಲಿ ನಿಮಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಮೂರು ಲಿಂಕ್ಗಳು ಲಭ್ಯವಾಗುತ್ತವೆ. ಅದರಲ್ಲಿ ಯಾವುದನ್ನಾದರೂ ಪರೀಕ್ಷಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. 3. ಯಾವುದೇ ಲಿಂಕ್ನ್ನೂ ಓಪನ್ ಮಾಡಿದರೂ ಒಂದು ಹೊಸ ಪೇಜ್ ತೆರೆಯಲ್ಪಡುತ್ತದೆ. 4.ಅದರಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್, ಹುಟ್ಟಿದ ದಿನಾಂಕ (Date Of Birth) ಮತ್ತು ಸ್ಕ್ರೀನ್ ಮೇಲೆ ತೋರಿಸುವ ಸೆಕ್ಯೂರಿಟಿ ಪಿನ್ನ್ನು ನಮೂದಿಸಿ. 5. ಇದೆಲ್ಲ ಆದ ಬಳಿಕ ಸಬ್ಮಿಟ್ (Submit)ಎಂಬಲ್ಲಿ ಕ್ಲಿಕ್ ಮಾಡಿ. 6. ನಿಮ್ಮ ಪ್ರವೇಶ ಪತ್ರ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
JEE Main 2021 Admit card for third session released
Published On - 12:04 pm, Wed, 14 July 21