JEE Main 2022: ಏ. 21ರಿಂದ ಜೆಇಇ ಮುಖ್ಯ ಪರೀಕ್ಷೆ; ಹೊಸ ವೇಳಾಪಟ್ಟಿ ಇಲ್ಲಿದೆ
ಜೆಇಇ (ಮುಖ್ಯ) ಪರೀಕ್ಷೆಯ ಸೆಷನ್ 1 ಏಪ್ರಿಲ್ 21, 24, 25, 29 ಮತ್ತು ಮೇ 1, 4ರಂದು ನಡೆಯಲಿದೆ ಎಂದು NTA ಘೋಷಿಸಿದೆ.
ನವದೆಹಲಿ: 2022ರ ಜೆಇಇ ಮೇನ್ (JEE Main 2022) ಪರೀಕ್ಷೆಯ ದಿನಾಂಕವನ್ನು ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಇಂದು ಘೋಷಿಸಿದೆ. ಬೋರ್ಡ್ ಪರೀಕ್ಷೆಯ ದಿನಾಂಕ ಮತ್ತು ಜೆಇಇ ಮುಖ್ಯ ಪರೀಕ್ಷೆಯ ದಿನಂಕ ಒಂದೇ ಅವಧಿಯಲ್ಲಿ ಬರುವುದರಿಂದ ಜೆಇಇ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲು ಅನೇಕ ಪರೀಕ್ಷಾರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೆಇಇ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
“ವಿದ್ಯಾರ್ಥಿ ಸಮುದಾಯದ ನಿರಂತರ ಮನವಿಯಿಂದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ (ಮುಖ್ಯ) – 2022 ಸೆಷನ್ 1ರ ದಿನಾಂಕಗಳನ್ನು ಮುಂದೂಡಲು ನಿರ್ಧರಿಸಲಾಗಿದೆ” ಎಂದು ಎನ್ಟಿಎ ಹೇಳಿಕೆಯಲ್ಲಿ ತಿಳಿಸಿದೆ.
JEE (ಮುಖ್ಯ) – 2022 ಸೆಷನ್ 1 ಪರಿಷ್ಕೃತ ವೇಳಾಪಟ್ಟಿ ಹೀಗಿದೆ: ಜೆಇಇ (ಮುಖ್ಯ) ಪರೀಕ್ಷೆಯ ಸೆಷನ್ 1 ಏಪ್ರಿಲ್ 21, 24, 25, 29 ಮತ್ತು ಮೇ 1, 4ರಂದು ನಡೆಯಲಿದೆ ಎಂದು NTA ಘೋಷಿಸಿದೆ. ಈ ಹಿಂದೆ, ಜೆಇಇ ಮೇನ್ 2022ರ ಮೊದಲ ಸೆಷನ್ ಪರೀಕ್ಷೆಯನ್ನು ಏಪ್ರಿಲ್ 16, 17, 18, 19, 20, 21ರಂದು ನಡೆಸುವುದಾಗಿ ಘೋಷಿಸಲಾಗಿತ್ತು. ಜೆಇಇ ಮುಖ್ಯ ಪರೀಕ್ಷೆಯ 2ನೇ ಸೆಷನ್ ಅನ್ನು ಮೇ 24, 25, 26, 27, 28 ಮತ್ತು 29 ರಂದು ನಡೆಸಲಾಗುವುದು ಎಂದು ಘೋಷಿಸಿತ್ತು.
ಕಳೆದ ಬಾರಿ ಕೊವಿಡ್ 19 ಸಾಂಕ್ರಾಮಿಕ ತೀವ್ರತೆ ಜಾಸ್ತಿ ಇರುವ ಕಾರಣ ಜೆಇಇ ಪರೀಕ್ಷೆಯನ್ನು ನಾಲ್ಕು ಸೆಷನ್ಸ್ಗಳಲ್ಲಿ ನಡೆಸಲಾಗಿತ್ತು. ಮೊದಲ ಹಂತ ಮತ್ತು ಎರಡನೇ ಹಂತ ಬೇಗ ಮುಗಿದಿದ್ದರೂ, ಉಳಿದೆರಡು ಹಂತದ ಪರೀಕ್ಷೆ ನಡೆಸಲು ಕೊವಿಡ್ 2ನೇ ಅಲೆ ಅಡ್ಡಿಯಾಗಿತ್ತು. ಜೆಇಇ ಮುಖ್ಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆಯುವ ಅಭ್ಯರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹರಾಗುತ್ತಾರೆ. 2023ರ ಜೆಇಇ ಅಭ್ಯರ್ಥಿಗಳಿಗಾಗಿ ಜಂಟಿ ಪ್ರವೇಶ ಮಂಡಳಿ ಪಠ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಮಾಡಿದೆ. ಈ ಹೊಸ ಪಠ್ಯಕ್ರಮ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೇನಿಂಗ್ ಮತ್ತು ಜೆಇಇ ಮುಖ್ಯ ಪಠ್ಯಕ್ರಮಕ್ಕೆ ತುಂಬ ಹೋಲಿಕೆಯಿರುತ್ತದೆ ಎಂದು ಹೇಳಲಾಗಿದೆ. ಹಾಗೇ, ಜೆಇಇ ಅಡ್ವಾನ್ಸ್ಡ್ ಗೆ 2022ರ ಪ್ರಠ್ಯಕ್ರಮ ಮುಂದುವರಿಯುತ್ತದೆ.
ಏಪ್ರಿಲ್ 21ರ JEE ಮೇನ್ಸ್ ನೋಂದಣಿ ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಶುರುವಾಗಿದೆ. JEE ಮೇನ್ಸ್ 2022 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕ.
JEE Advanced Results 2021: ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ; ಮೃದುಲ್ ಅಗರ್ವಾಲ್ಗೆ ಮೊದಲ ರ್ಯಾಂಕ್
Published On - 2:05 pm, Mon, 14 March 22