AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಜಿನಿಯರಿಂಗ್ ಶುಲ್ಕ; ಶೇ 10ರಷ್ಟು ಹೆಚ್ಚಳ ಖಚಿತ

ಸದ್ಯಕ್ಕೆ 2021-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂಜಿನಿಯರಿಂಗ್ ಶುಲ್ಕ ಹೆಚ್ಚಳವಿಲ್ಲ. ಮುಂದಿನ ವರ್ಷಕ್ಕೆ ಶೇ.10 ರಷ್ಟು ಶುಲ್ಕ ಹೆಚ್ಚಳ ಫಿಕ್ಸ್ ಆಗಿದೆ. ಇತರೆ ಶುಲ್ಕಗಳ ಮಿತಿ ಗರಿಷ್ಠ 20 ಸಾವಿರಕ್ಕೆ ನಿಗದಿ ಮಾಡಲಾಗಿದ್ದು, ಇಷ್ಟು ವರ್ಷ ಇತರೆ ಶುಲ್ಕಗಳ ಹೆಸರಲ್ಲಿ ಸಂಗ್ರಹಿಸಲಾಗುತ್ತಿದ್ದ 70 ಸಾವಿರ ಮೆಸಲೇನಿಯಸ್ ಶುಲ್ಕಕ್ಕೆ ಸರ್ಕಾರ ಕೋಕ್ ನೀಡಿದೆ.

ಇಂಜಿನಿಯರಿಂಗ್ ಶುಲ್ಕ; ಶೇ 10ರಷ್ಟು ಹೆಚ್ಚಳ ಖಚಿತ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Oct 03, 2021 | 7:21 PM

Share

ಬೆಂಗಳೂರು: ಇನ್ಮುಂದೆ ವೃತ್ತಿಪರ ಕೋರ್ಸ್​ಗಳ ಶುಲ್ಕ ಮತ್ತಷ್ಟು ದುಬಾರಿಯಾಗಲಿದೆ. ಮೊನ್ನೆಯಷ್ಟೇ ಈ ವರ್ಷ ಇಂಜಿನಿಯರಿಂಗ್ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದಿದ್ದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಮುಂದಿನ ವರ್ಷದಿಂದ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಸಚಿವರು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ‌.

ಕೊರೊನಾ 2ನೇ ಅಲೆಯ ಅವಾಂತರಕ್ಕೆ ಶಿಕ್ಷಣ ವ್ಯವಸ್ಥೆ ಇನ್ನು ಸರಿಯಾಗಿಲ್ಲ. ಈ ನಡುವೆ ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ ಶುಲ್ಕ ಹೆಚ್ಚಳಕ್ಕೆ ಮುಂದಾಗಿತ್ತು. ಶೇ.30 ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ವಿಚಾರವಾಗಿ ಉನ್ನತ ಶಿಕ್ಷಣ ಇಲಾಖೆ ವಿಟಿಯು ನೇತೃತ್ವದಲ್ಲಿ ಸಮಿತಿ ರಚಿಸಿ ಶುಲ್ಕ ಹೆಚ್ಚಳ ಕುರಿತಾದ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿತ್ತು‌‌. ಶೇ.15-20 ರಷ್ಟು ಶುಲ್ಕ ಹೆಚ್ಚಳ ಮಾಡಬಹುದು ಅಂತ ವಿಶ್ವೇಶ್ವರಯ್ಯ ಟೆಕ್ನಿಕಲ್ ವಿವಿ ಕುಲಪತಿ ಪ್ರೊ.ಡಾ. ಕರಿಸಿದ್ದಪ್ಪ ಸರ್ಕಾರದ ಗಮನಕ್ಕೆ ತಂದಿದ್ದರು. ಈ ವರ್ಷ ಕೊರೊನಾ ಕಾರಣದಿಂದ ಶುಲ್ಕ ಹೆಚ್ಚಳದಿಂದ ಸರ್ಕಾರ ಹಿಂದೆ ಸರಿದಿದೆ. ಆದರೆ, ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಶುಲ್ಕ ಮತ್ತಷ್ಟು ದುಬಾರಿಯಾಗಲಿದೆ.

ಖಾಸಗಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಲಾಬಿಗೆ ರಾಜ್ಯ ಸರ್ಕಾರ ಮಣಿಯಿತೇ ಎಂಬ ಪ್ರಶ್ನೆ ಉದ್ಬವವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತೀ ವರ್ಷಕ್ಕೆ ಶೇ.10 ರಷ್ಟು ಇಂಜಿನಿಯರಿಂಗ್ ಶುಲ್ಕ ಹೆಚ್ಚಳವಾಗಿದೆ. ಸರ್ಕಾರ ಮತ್ತು ಖಾಸಗಿ‌ ಇಂಜಿನಿಯರಿಂಗ್ ಮ್ಯಾನೇಜ್ಮೆಂಟುಗಳ ಒಕ್ಕೂಟದೊಂದಿಗೆ ಶುಲ್ಕ ಹೆಚ್ಚಳದ ಕುರಿತು ಒಡಂಬಡಿಕೆಗೆ ಮುಂದಾಗಿದೆ. ಇದರ ಪ್ರಕಾರ ಮುಂದಿನ ವರ್ಷದಿಂದ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಆದೇಶದವರೆಗೂ ಕಾಯುವಂತಿಲ್ಲ. ಶೀಘ್ರದಲ್ಲೇ ಎಂಒಯು ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ 2021-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂಜಿನಿಯರಿಂಗ್ ಶುಲ್ಕ ಹೆಚ್ಚಳವಿಲ್ಲ. ಮುಂದಿನ ವರ್ಷಕ್ಕೆ ಶೇ.10 ರಷ್ಟು ಶುಲ್ಕ ಹೆಚ್ಚಳ ಫಿಕ್ಸ್ ಆಗಿದೆ. ಇತರೆ ಶುಲ್ಕಗಳ ಮಿತಿ ಗರಿಷ್ಠ 20 ಸಾವಿರಕ್ಕೆ ನಿಗದಿ ಮಾಡಲಾಗಿದ್ದು, ಇಷ್ಟು ವರ್ಷ ಇತರೆ ಶುಲ್ಕಗಳ ಹೆಸರಲ್ಲಿ ಸಂಗ್ರಹಿಸಲಾಗುತ್ತಿದ್ದ 70 ಸಾವಿರ ಮೆಸಲೇನಿಯಸ್ ಶುಲ್ಕಕ್ಕೆ ಸರ್ಕಾರ ಕೋಕ್ ನೀಡಿದೆ.

ಸರ್ಕಾರ ಶುಲ್ಕ‌ ಹೆಚ್ಚಳದ ಒಡಂಬಡಿಕೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಿಡಿ ಕಾರುತ್ತಿದ್ದಾರೆ. ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವವರಿಗೆ 65,340 ರೂ. ಹಾಗೂ 58,806 ರೂಪಾಯಿ. ಈ ಎರಡು ಸ್ಲ್ಯಾಬ್ ಗಳಲ್ಲಿ‌ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಇದೀಗ ಸರ್ಕಾರ ವೃತ್ತಿಪರ ಕೋರ್ಸುಗಳ ಶಿಕ್ಷಣ ಬಡವರಿಗೆ ಕೈಗೆಟುಕದಂತೆ ಮಾಡಲು ಹೊರಟಿದೆ. ಕೊರೊನಾದಂತಹ‌ ಆರ್ಥಿಕ ಸಂಕಷ್ಟದಲ್ಲಿ ಪೋಷಕರು ಜೀವನ ಸಾಗಿಸುತ್ತಿದ್ದಾರೆ. ಎಷ್ಟೋ ವಿದ್ಯಾರ್ಥಿಗಳು ಕೆಲಸದ ಜೊತೆಗೆ ವಿದ್ಯಾಭ್ಯಾಸವನ್ನೂ ಮಾಡುತ್ತಿದ್ದಾರೆ. ಮುಂದಿನ ವರ್ಷ ಕೊರೊನಾ ಸ್ಥಿತಿ ಹೇಗಿರುತ್ತೊ ಏನೊ, ಪರಿಸ್ಥಿತಿ ತೀವ್ರ ಬಿಗಡಾಯಿಸಿದರೆ ಸದ್ಯ ಇರುವ ಶುಲ್ಕ ಕಟ್ಟಲು ಕಷ್ಟವಾಗುತ್ತದೆ. ಇನ್ನು ಹೆಚ್ಚಿನ ಶುಲ್ಕ ಪಾವತಿಸುವುದು ಹೇಗೆ ಸಾಧ್ಯ ಅಂತ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಸರ್ಕಾರದ ಈ ಕೂಡಲೇ ಒಡಂಬಡಿಕೆಯಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ‌ ಹೋರಾಟ ಮಾಡುವುದಾಗಿ ವಿದ್ಯಾರ್ಥಿ ಎಚ್ಚರಿಕೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಮೊನ್ನೆಯಷ್ಟೇ ಶುಲ್ಕ‌ ಹೆಚ್ಚಳವಿಲ್ಲ ಎಂದಿದ್ದ ಸಚಿವರು ಇದೀಗ ಮುಂದಿನ ವರ್ಷಕ್ಕೆ ಶುಲ್ಕ ಹೆಚ್ಚಳದ ಶಾಕ್ ಕೊಟ್ಟಿದ್ದಾರೆ. ಒಡಂಬಡಿಕೆಯಿಂದ ಹಿಂದೆ ಸರಿಯದಿದ್ದರೆ, ವಿದ್ಯಾರ್ಥಿಗಳು ಬೀದಿಗಿಳಿಯಲು ಮುಂದಾಗಿದ್ದಾರೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಯಾವ ತೀರ್ಮಾನಕ್ಕೆ ಮುಂದಾಗುತ್ತೆ ಅಂತ ಕಾದು ನೋಡಬೇಕಿದೆ.

ವಿಶೇಷ ವರದಿ: ಅನಿಲ್ ಕಲ್ಕೆರೆ ಟಿವಿ9, ಬೆಂಗಳೂರು.

ಇದನ್ನೂ ಓದಿ: 

ಮೇಘಾ ಕಂಪನಿಯ ಮೆಗಾ ಸಾಧನೆ! ಎಂಜಿನಿಯರಿಂಗ್​ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೆ ಸಾಕ್ಷಿ ಲಡಾಖ್​ನ ಜೋಜಿಲಾ ಸುರಂಗ ಮಾರ್ಗ

ಇಂಜಿನಿಯರಿಂಗ್ ಹುದ್ದೆ ತೊರೆದು ಕೃಷಿಯತ್ತ ಮುಖ ಮಾಡಿದ ಯುವಕ; ಜರ್ಬೆರಾ ಹೂ ಬೆಳೆದು ತಿಂಗಳಿಗೆ ಲಕ್ಷ ರೂ. ಸಂಪಾದನೆ