ಎಸ್​​ಎಸ್​​ಎಲ್​ಸಿ, ದ್ವಿತೀಯ ಪಿಯು ಪರೀಕ್ಷೆ 1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2027ನೇ ಸಾಲಿನ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ತಾತ್ಕಾಲಿಕ ವೇಳಾಪಟ್ಟಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಇಂದಿನಿಂದ ಅಕ್ಟೋಬರ್​ 22ರವರೆಗೆ ಆಕ್ಷೇಪಣೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಮತ್ತು ಪೊಷಕರಿಗೆ ಕಾಲಾವಕಾಶ ನೀಡಲಾಗಿದೆ.

ಎಸ್​​ಎಸ್​​ಎಲ್​ಸಿ, ದ್ವಿತೀಯ ಪಿಯು ಪರೀಕ್ಷೆ 1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಪ್ರಾತಿನಿಧಿಕ ಚಿತ್ರ
Image Credit source: tv9 kannada
Edited By:

Updated on: Oct 08, 2026 | 9:04 PM

ಬೆಂಗಳೂರು, ಅಕ್ಟೋಬರ್​​ 08: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್​​​​ಎಸ್​​​ಎಲ್​​ಸಿಯ ಪರೀಕ್ಷೆ 1 ಹಾಗೂ 2ರ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2 ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಎಸ್​​ಎಸ್​​ಎಲ್​ಸಿ ಪರೀಕ್ಷೆ 1, 2027 ಮಾರ್ಚ್​​ 22ರಿಂದ ಏಪ್ರಿಲ್​​ 03ರವರೆಗೆ ನಡೆದರೆ, ಪರೀಕ್ಷೆ 2, ಮೇ 24ರಿಂದ 31ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ, ಪರೀಕ್ಷೆ 2, ಮೇ 03ರಿಂದ 15ರ ವರೆಗೆ ಪರೀಕ್ಷೆಗಳು ಜರುಗಲಿವೆ.

ಎಸ್​​ಎಸ್​​ಎಲ್​ಸಿ ಪರೀಕ್ಷೆ 1ರ ವೇಳಾಪಟ್ಟಿ (2027)

  • ಮಾರ್ಚ್​​​ 22: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು ಉರ್ದು, ಇಂಗ್ಲಿಷ್​​, ಇಂಗ್ಲಿಷ್(ಎನ್​​​​ಸಿಇಆರ್​​ಟಿ), ಸಂಸ್ಕೃತ
  • ಮಾರ್ಚ್​​ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
  • ಮಾರ್ಚ್​​ 27: ಇಂಗ್ಲಿಷ್​​, ಕನ್ನಡ
  • ಮಾರ್ಚ್​​ 30: ಗಣಿತ, ಸಮಾಜಶಾಸ್ತ್ರ
  • ಏಪ್ರಿಲ್​​ 02 : ಹಿಂದಿ(ಎನ್​​​​ಸಿಇಆರ್​​ಟಿ), ಹಿಂದಿ, ಕನ್ನಡ, ಇಂಗ್ಲಿಷ್​, ಅರೇಬಿಕ್​​, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ
  • ಏಪ್ರಿಲ್​​ 03: ಜೆಟಿಎಸ್​ ವಿಷಗಳು, ಅರ್ಥಶಾಸ್ತ್ರ
  • ಏಪ್ರಿಲ್​​ 05: ಸಮಾಜ ವಿಜ್ಞಾನ

ಎಸ್​​ಎಸ್​​ಎಲ್​ಸಿ ಪರೀಕ್ಷೆ 2ರ ವೇಳಾಪಟ್ಟಿ (2027)

  • ಮೇ 24: ಪ್ರಥಮ ಭಾಷೆ
  • ಮೇ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ, ಕರ್ನಾಟಕ ಸಂಗೀತ
  • ಮೇ 26: ಇಂಗ್ಲಿಷ್​​, ಕನ್ನಡ
  • ಮೇ 27: ಗಣಿತ, ಸಮಾಜ ಶಾಸ್ತ್ರ
  • ಮೇ 28: ತೃತೀಯ ಭಾಷೆಗಳು ಮತ್ತು ಎನ್​​​ಎಸ್​ಕ್ಯುಎಫ್​​ ವಿಷಯಗಳು
  • ಮೇ 29: ಸಮಾಜ ವಿಜ್ಞಾನ
  • ಮೇ 31: ಜೆಟಿಎಸ್​​ ವಿಷಯಗಳು, ಅರ್ಥಶಾಸ್ತ್ರ

ದ್ವಿತೀಯ ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ (2027)

  • ಫೆಬ್ರವರಿ 27: ಕನ್ನಡ, ಅರೇಬಿಕ್​
  • ಮಾರ್ಚ್ 1: ಇಂಗ್ಲಿಷ್​​
  • ಮಾರ್ಚ್ 2: ಪ್ರಾದೇಶಿಕ ಭಾಷೆಗಳು
  • ಮಾರ್ಚ್ 3: ಭೂಗೋಳ ಶಾಸ್ತ್ರ, ಮನಃಶಾಸ್ತ್ರ
  • ಮಾರ್ಚ್ 4: ಸಮಾಜಶಾಸ್ತ್ರ, ಭೌತಶಾಸ್ತ್ರ
  • ಮಾರ್ಚ್ 5: ಲೆಕ್ಕಶಾಸ್ತ್ರ
  • ಮಾರ್ಚ್ 6: ಮಹಾಶಿವರಾತ್ರಿ ಹಿನ್ನೆಲೆ ಯಾವುದೇ ಪರೀಕ್ಷೆ ಇಲ್ಲ
  • ಮಾ.8: ರಸಾಯನ ಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
  • ಮಾ.9: ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ
  • ಮಾ.11: ಹಿಂದೂಸ್ತಾನಿ ಸಂಗೀತ, ವೃತ್ತಿಪರ ವಿಷಯಗಳ ಪರೀಕ್ಷೆ
  • ಮಾ.12: ವ್ಯವಹಾರ ಅಧ್ಯಯನ, ಗಣಿತ
  • ಮಾ.13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
    ಮಾ.15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ
  • ಮಾ.16ರಂದು ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
  • ಮಾ.17ರಂದು ಹಿಂದಿ ಪರೀಕ್ಷೆಯೊಂದಿಗೆ ಪರೀಕ್ಷೆ 1ಕ್ಕೆ ತೆರೆ ಬೀಳಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿ (2027)

  • ಮೇ 03: ಕನ್ನಡ, ಅರೇಬಿಕ್​​
  • ಮೇ 04: ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
  • ಮೇ 05: ರಾಜ್ಯಶಾಸ್ತ್ರ, ಗಣಕಶಾಸ್ತ್ರ
  • ಮೇ 06: ಇತಿಹಾಸ, ರಸಾಯನಶಾಸ್ತ್ರ
  • ಮೇ 07: ವ್ಯವಹಾರ ಅಧ್ಯಯನ, ಮನಃ ಶಾಸ್ತ್ರ, ಶಿಕ್ಷಣ ಶಾಸ್ತ್ರ
  • ಮೇ 08: ಐಚ್ಛಿಕ ಕನ್ನಡ,ಭೌತ ಶಾಸ್ತ್ರ, ಮೂಲ ಗಣಿತ
  • ಮೇ 10: ಅರ್ಥಶಾಸ್ತ್ರ, ಗಣಿತ
  • ಮೇ 11: ಹಿಂದಿ
  • ಮೇ 12: ಇಂಗ್ಲಿಷ್​
  • ಮೇ 13: ಸಮಾಜ ಶಾಸ್ತ್ರ, ಸಂಖಾಶಾಸ್ತ್ರ
  • ಮೇ 14: ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
  • ಮೇ 15: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್​​

ಪರೀಕ್ಷಾ ಸಮಯ ಮತ್ತು ಅವಧಿ

ಎಲ್ಲಾ ಮುಖ್ಯ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಹಿಂದೂಸ್ತಾನಿ ಸಂಗೀತ ಹಾಗೂ ಕೆಲವು ನಿರ್ದಿಷ್ಟ ವೃತ್ತಿಪರ ವಿಷಯಗಳ ಪರೀಕ್ಷೆಗಳಿಗೆ 2 ಗಂಟೆ 15 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:57 pm, Thu, 8 October 26

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us